ಪುತ್ತೂರು : ಪರಿಸರ ಸಂರಕ್ಷಣೆಯ ಬಗ್ಗೆ ಮುಳಿಯ ಜ್ಯುವೆಲ್ಸ್ ಚಿಣ್ಣರಿಗೆ ಆಯೋಜಿಸಿರುವ ಚಿತ್ರಕಲಾ ಸ್ಪರ್ಧೆಯು ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ನಡೆಯಿತು.
ದೀಪ ಬೆಳಗುವ ಮೂಲಕ ಸಂಸ್ಥೆಯ ಹಿರಿಯರಾದ ಸುಲೋಚನಾ ಶ್ಯಾಮ್ ಭಟ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಹಾಗೂ ತೀರ್ಪುಗಾರರಾಗಿ ಆಗಮಿಸಿದ ಜೇಸಿ ಜಗನ್ನಾಥ ರೈ ಮತ್ತು ಸುಚೇತ್ ವೇದಿಕೆಯಲ್ಲಿದ್ದರು.
ಈ ಸಂದರ್ಭ ಮಾತನಾಡಿದ ಜಗನ್ನಾಥ ರೈ,” ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಪರಿಸರ ಸಂರಕ್ಷಣೆಯು ಎಳೆಯ ವಯಸ್ಸಿನಲ್ಲಿ ಬರಬೇಕೆಂಬ ಉದ್ದೇಶದಿಂದ ಮಾಡಿಸುವ ಚಿತ್ರಕಲಾ ಸ್ಪರ್ಧೆಯು ಯಶಸ್ವಿಯಾಗಿ ನಡೆಯಲಿ. ಸ್ಪರ್ಧೆಯಲ್ಲಿ ಭಾಗವಹಿಸಿವಿಕೆ ಮುಖ್ಯವಾಗಿರುವುದೆ ಹೊರತು ಬಹುಮಾನ ಮುಖ್ಯವಲ್ಲ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರ್ ಮೇನ್ ಮತ್ತು ಸಂಸ್ಥೆಯ ನಿರ್ದೇಶಕರಾದ ಕೇಶವ ಪ್ರಸಾದ್ ಮುಳಿಯ ಮಾತನಾಡಿ ,”ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಅದಲ್ಲದೆ ನಮ್ಮ ಸಂಸ್ಥೆಯ ವತಿಯಿಂದ ಕೆರೆ ಅಭಿವೃದ್ಧಿ, ಕೃಷಿಕರೊಂದಿಗೆ ಸಂವಾದ, ಗಿಡಗಳ ಬೀಜದ ಉಂಡೆ ಬಿತ್ತನೆ ಹಾಗೂ ಶಾಲೆಗಳಲ್ಲಿ ವನಮಹೋತ್ಸವವನ್ನು ಹಮ್ಮಿಕೊಂಡಿದ್ದೇವೆ” ಎಂದು ಹೇಳಿದರು.
ಸಂಸ್ಥೆಯ ಪ್ರಬಂಧಕರಾದ ನಾಮ್‍ದೇವ್ ಮಲ್ಯ ಪ್ರಾಸ್ತಾವಿಕ ಭಾಷಣದಲ್ಲಿ ನಮಗೆ ಈ ಚಿತ್ರಕಲಾ ಸ್ಪರ್ಧೆಗೆ ವಿದ್ಯಾರ್ಥಿಗಳು ಅಭೂತಪೂರ್ವ ಬೆಂಬಲವನ್ನು ಸೂಚಿಸಿದ್ದಾರೆ. ಸುಮಾರು 150-200 ರವರೆಗೆ ವಿದ್ಯಾರ್ಥಿಗಳ ನೊಂದಾವಣಿ ಮಾಡಿದ್ದು, 180 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಬಹುಮಾನ ವಿತರಣೆ:
5 ರಿಂದ 10ನೇ ವಯಸ್ಸಿನ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ :
ಪ್ರಥಮ ಸ್ಥಾನ – ಜಶ್ವಿತ್ ತೋಟ, ಪಂಜ
ದ್ವಿತೀಯ ಸ್ಥಾನ – ಅಕ್ಷಯ್ ಎಮ್, ವಿಟ್ಲ
ತೃತೀಯ ಸ್ಥಾನ – ನಿಲಿಶ್ಕ ಕೆ, ತೆಂಕಿಲ
ಸಮಾಧಾನಕರ ಬಹುಮಾನ – ವೇದ್ ತೆಂಕಿಲ ಮತ್ತು ಯಕ್ಷಿತ್ ಬಿ.
10ರಿಂದ 15 ವಯಸ್ಸಿನ ಮಕ್ಕಳಿಗೆ:
ಪ್ರಥಮ ಸ್ಥಾನ – ಕಾರ್ತಿಕ್, ನಟ್ಟಿಬೈಲು
ದ್ವಿತೀಯ ಸ್ಥಾನ – ಮಾನ್ವಿತ್, ಮಂಗಳೂರು
ತೃತೀಯ ಸ್ಥಾನ – ಸುದಾಂಶ್, ಕೊಂಬೆಟ್ಟು
ಸಮಧಾನಕರ ಬಹುಮಾನ – ಮಾನ್ವಿತ್, ತೆಂಕಿಲ ಮತ್ತು ಸಾತ್ವಿಕ್ ಕಂಡೂರು, ಕಡಬ
ವಿದ್ಯಾರ್ಥಿಗಳಿಗೆ ಫಲಕ ಮತ್ತು ಪ್ರಮಾಣ ಪತ್ರ ನೀಡಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ತೀರ್ಪುಗಾರರಾಗಿ ಜೇಸಿ ಜಗನ್ನಾಥ ಅರಿಯಡ್ಕ, ಸುಚೇತ್ ಮತ್ತು ಸ್ವಾತಿ ಮಧುಕುಮಾರ್ ಕಾರ್ಯ ನಿರ್ವಹಿಸಿದರು.
ಪೋಷಕರಿಂದ ಮತ್ತು ವಿದ್ಯಾರ್ಥಿಗಳಿಂದ ಮೆಚ್ಚುಗೆ:
ಮುಳಿಯ ಜ್ಯುವೆಲ್ಲರ್ಸ್ ಅವರು ಆಯೋಜಿಸಿದ ಇಂತಹ ಕಾರ್ಯಕ್ರಮ ನಮ್ಮೆಲ್ಲರಿಗೆ ಸಂತೋಷವನ್ನು ತಂದಿದೆ ಹಾಗೆ ಮುಂದೆಯು ಇಂತಹ ಹಲವಾರು ಕಾರ್ಯಕ್ರಮವು ಸಂಸ್ಥೆಯಿಂದ ಮಾಡಲಿ ಎಂದು ಮಕ್ಕಳ ಪೋಷಕರು ಹಾರೈಸಿದರು ಮತ್ತು ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ಸೂಚಿಸಿದರು.
ಕಾರ್ಯಕ್ರಮದಲ್ಲಿ ಫ್ಲೋರ್ ಮ್ಯಾನೇಜರ್ ಗಳಾದ ಆನಂದ ಕುಲಾಲ್, ಯತೀಶ್, ಅಸಿಸ್ಟೆಂಟ್ ಮಾರ್ಕೆಟಿಂಗ್ ಮ್ಯಾನೇಜರ್ ಸಂಜೀವ, ಸಂಸ್ಥೆಯ ಸಿಬ್ಬಂದಿಗಳಾದ ಗಣೇಶ್, ಪ್ರಶಾಂತ, ಮೋಹನ್, ಸುಲೋಚನಾ, ಮಮಿತಾ ಉಪಸ್ಥಿತರಿದ್ದರು.