ಜಾಲ್ಸೂರು: ಎಲ್ಲೆಲ್ಲೂ ನೀರಿಲ್ಲ. ಪಯಸ್ವಿನಿ ನದಿಯಲ್ಲಿ ಈಗ ಮೀನುಗಳು ಒದ್ದಾಡಿ ಸಾಯುತ್ತಿದೆ.
ಪಂಜಿಕಲ್ಲು ಸಮೀಪದ ಮೂರೂರಲ್ಲಿ ಪಯಸ್ವಿನಿ ನದಿ ನೀರಿಲ್ಲದೆ ಬರಡಾಗಿದ್ದು, ಮೀನುಗಳು ಜೀವ ಬಿಡುತ್ತಿವೆ. ಈ ಮೀನನ್ನು ಹಿಡಿಯಲು ಜನ ಬರುತ್ತಾರೆ. ಹೀಗಾಗಿ ಇದ್ದ ನೀರೂ ಈಗ ಕಲುಷಿತವಾಗುತ್ತಿದೆ.
ಬೇಸಗೆ ಕಾಲದಲ್ಲಿ ಪಯಸ್ವಿನಿ ನದಿಯಲ್ಲಿ ನೀರು ಕಡಿಮೆಯಾಗಿದ್ದರೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಜಲಚರಗಳು ನೀರಲ್ಲಿದ್ದಂತೆ, ತೋಟಗಳಿಗೂ ನೀರು ಹಾಕಲಾಗುತಿತ್ತು. ಮೊದಲ ಬಾರಿ ಈ ರೀತಿಯಾಗಿದೆ. ನದಿಯ ನೀರನ್ನೇ ದನ ಕರುಗಳಿಗೂ ಕೊಡುತ್ತಿದ್ದು, ಈ ವರ್ಷ ತೋಟಗಳಿಗೆ ನೀರು ಹಾಯಿಸುವುದು ಇರಲಿ, ದನ-ಕರುಗಳಿಗೆ ಕುಡಿಯಲೂ ಸಾಲುತ್ತೋ ಎನ್ನುವ ಅನುಮಾನ ಇದೆ ಎನ್ನುತ್ತಾರೆ ಸ್ಥಳೀಯರು.
ಮೀನು ಹಿಡಿಯುತ್ತಾರೆ ನೋಡಿ:
ನೀರಿಲ್ಲದೆ ಪರದಾಡುವ ಸ್ಥಳೀಯ ನಿವಾಸಿಗಳನ್ನು ಲೆಕ್ಕಿಸದೆ, ಪಕ್ಕದ ಗ್ರಾಮಸ್ಥರು ಮೀನು ಹಿಡಿಯಲು ಗುಂಪುಗಳಾಗಿ ಬರುತ್ತಾರೆ. ಮೀನು ಹಿಡಿಯುವುದರೊಂದಿಗೆ, ನೀರನ್ನು ಕೊಳಕು ಮಾಡಿ ಹೋಗುತ್ತಾರೆ. ಬೆಳಗ್ಗಿನ ಹೊತ್ತು ಬಂದರೆ ಸ್ಥಳೀಯರು ಬಿಡುವುದಿಲ್ಲ ಎಂದು ಮಧ್ಯರಾತ್ರಿ ಕಳೆದ ಮೇಲೆ ಬರುತ್ತಾರೆ. ಮೀನು ಹಿಡಿಯಬೇಡಿ, ನೀರು ಕೊಳಕಾಗುತ್ತವೆ ಎಂದು ಹೇಳಿದರೂ ಕೇಳುವುದಿಲ್ಲ ಅನ್ನುತ್ತಾರೆ ಸ್ಥಳೀಯರು. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನ ಆಗಲಿಲ್ಲ. ಗ್ರಾ.ಪಂ. ಮಾತುಕತೆ ನಡೆಸಿದರೂ ಸಮಸ್ಯೆ ಬಗೆಹರಿಯಲಿಲ್ಲ.
ಜಲಚರಗಳ ಸಂಕಟ, ನಮ್ಮ ನೋವು ಕೇಳುವವರಿಲ್ಲ ಎಂದು ಹತಾಶೆ ವ್ಯಕ್ತಡಿಸುತ್ತಾರೆ ಸ್ಥಳೀಯರು.
ಇಲ್ಲಿನ ಸಂಕಟದ ಬಗ್ಗೆ ಮಾತನಾಡಿದ ಮುರೂರಿನ ವಿಪಿನ್ ನಂಬಿಯಾರ್, “ಕಳೆದ 38 ವರ್ಷಗಳಲ್ಲಿ ಇಂತಹ ಬರಗಾಲವನ್ನು ನಾನು ಕಂಡಿಲ್ಲ. ಮೀನು ಹಿಡಿಯಲು ಬರುವವರು ನೀರನ್ನು ಕೊಳಚೆ ಮಾಡುತ್ತಾರೆ, ಜಲಚರಗಳಿಗೆ ಸಂಕಟ ಎದುರಾಗಿದೆ” ಎನ್ನುತ್ತಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಡೆಕೋಲು ಪಿಡಿಒ ಜಯಪ್ರಕಾಶ್, “ ಪಯಸ್ವಿನಿ ನದಿಯ ಈ ಭಾಗದಲ್ಲಿ ಮೀನು ಹಿಡಿದು ನೀರು ಮಲಿನವಾಗುವುದರ ಬಗ್ಗೆ ಮಾಹಿತಿ ಇದೆ. ಎರಡು ತಿಂಗಳ ಹಿಂದೆ ಮೀನು ಹಿಡಿಯಲು ಬಂದವರಿಗೆ ನೋಟಿಸ್ ನೀಡಿ ಕಳುಹಿಸಲಾಗಿದೆ. ನೀರು ಮಲಿನವಾಗದಂತೆ ಕ್ರಮ ಕೈಗೊಳ್ಳುತ್ತೇವೆ” ಎನ್ನುತ್ತಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement