ಸುಳ್ಯ:ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ವಿನೋಬನಗರ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಮೇಘಾಲಯದ ಶಿಲಾಂಗ್ ನಿವಾಸಿ ತುಬರ್ ನಾರ್ ಲಿಂಕೋಯ್ 352 ಅಂಕಗಳೊಂದಿಗೆ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ.
ಈತನಿಗೆ ಕನ್ನಡದಲ್ಲಿ 70 ಅಂಕಗಳು ಬಂದಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ವರ್ಷ ಒಂಭತ್ತನೇ ತರಗತಿಗೆ ಸೇರ್ಪಡೆಗೊಂಡ ಬಳಿಕ ಕನ್ನಡ ಅಭ್ಯಾಸ ಮಾಡಿದ್ದ. ಶಾಲೆಯ ಸಮೀಪದಲ್ಲಿಯೇ ಇರುವ ಅಡ್ಕಾರಿನ ವನವಾಸಿ ಕಲ್ಯಾಣ ವಿದ್ಯಾರ್ಥಿ ನಿಲಯದಲ್ಲಿರುವ ಈತ ಮೇಘಾಲಯದ ಶಿಪ್ ಸ್ಯಾಂಗ್ರಿಯಾನ್ ಮತ್ತು ಸ್ಪಿಮ್ ಲಿಂಕೋಯ್ ಪುತ್ರ.
ಶಾಲೆಗೆ ಉತ್ತಮ ಫಲಿತಾಂಶ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 31 ರಲ್ಲಿ 30 ಮಂದಿ ಉತ್ತೀರ್ಣರಾಗಿ ಶೇ.97 ಫಲಿತಾಂಶ ದಾಖಲಾಗಿದೆ. ನಾಲ್ಕು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು ಮೂರು ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದಾತ್ ಹೆಚ್.ಯು.(554), ಕಾರ್ತಿಕ್.ಕೆ.ವಿ.(552), ಇಂದಿರೇಶ್(548) ಅತೀ ಹೆಚ್ಚು ಅಂಕ ಪಡೆದಿದ್ದಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಮೇಘಾಲಯದ ಬಾಲಕನಿಗೆ ಕನ್ನಡದಲ್ಲಿ 70 ಅಂಕ"