ಸುಳ್ಯ: ಸುಳ್ಯ ತಾಲೂಕಿನಲ್ಲಿ ಅತೀ ಪ್ರಸಿದ್ದವಾದ ಮತ್ತು ಅಭಯಕೇಂದ್ರ ಕುಂಭಕ್ಕೋಡಿನ ವಲಿಯತುಲ್ಲಾಹಿ ಮಣವಾಟಿ ಬೀವಿ(ರ) ದರ್ಗಾ ಶರೀಫ್ ನಲ್ಲಿ ಮಖಾಂ ಉರೂಸ್ ಮೇ1ರಿಂದ 3ರವರೆಗೆ ನಡೆಯಲಿದೆ.
ಮೇ 1ರಂದು ಉರೂಸ್ ಉದ್ಘಾಟನೆ ನೆರವೇರಲಿದ್ದು ಅಂದು ಖತಮುಲ್ ಕುರಾನ್ ಮತ್ತು ಪಳ್ಳಿನೇರ್ಚೆ ನಡೆಯಲಿದೆ.
ಮೇ.2ರಂದು ಮುಖ್ಯ ಪ್ರಭಾಷಣದಲ್ಲಿ ಬಹು| ಅಬೂಬಕ್ಕರ್ ಫೈಝಿ ಕುಂಬಡಾಜೆಯವರು ಭಾಗ ವಹಿಸಲಿದ್ದಾರೆ.
ಮೇ3ರಂದು ಉರೂಸ್ ಸಮಾರೋಪ ಸಮಾರಂಭ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ| ಹಾಜಿ ಇಬ್ರಾಹಿಂ ಅಲ್‍ಮದೀನ ವಹಿಸಲಿದ್ದಾರೆ. ಉದ್ಘಾಟನೆಯನ್ನು ಬಹು| ಸಯ್ಯದ್ ಉಮರ್ ಜಿಫ್ರಿ ಅಲ್ ಹನೀಫಿ ನಡೆಸಲಿದ್ದು ಮುಖ್ಯ ಪ್ರಭಾಷಣವನ್ನು ಬಹು| ಹಂಝ ಮಿಸ್ಬಾಹಿ ಓಟಪದವು ನಡೆಸಲಿದ್ದಾರೆ.
ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರಮುಖರು, ಸಯ್ಯದರು, ಉಮರಾಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಮೇ.1 ರಿಂದ ಕುಂಭಕ್ಕೋಡಿನಲ್ಲಿ ಮಖಾಂ ಉರೂಸ್"