ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಂಗ ಘಟಕ ಕುಸುಮಸಾರಂಗದ ರಂಗಶಿಕ್ಷಣ ಶಿಭಿರದ ಉದ್ಘಾಟನಾ ಸಮಾರಂಭವು ಮೇ.19 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜು ಪ್ರಾಂಶುಪಾಲ ಪ್ರೋ ಉದಯಕುಮಾರ್ ಕೆ ತಿಳಿಸಿದ್ದಾರೆ.
ಮಂಗಳೂರು ಮಂಗಳಗಂಗೋತ್ರಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೋ ವೇದವ ಪಿ ಅವರು ರಂಗ ಶಿಬಿರವನ್ನು ಉದ್ಘಾಟಿಸುವರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಕಾಲೇಜು ಪ್ರಾಂಶುಪಾಲ ಪ್ರೋ ಉದಯಕುಮಾರ್ ಕೆ, ಶಿಬಿರ ನಿರ್ದೇಶಕ ದಾಕ್ಷಾಯಿಣಿ ಭಟ್, ಕುಸುಮಸಾರಂಗ ರಂಗ ಘಟಕದ ಸಂಚಾಲಕ ಡಾ. ಗೋವಿಂದ ಎನ್.ಎಸ್, ಕುಸುಮಸಾರಂಗದ ಪೂರ್ವ ನಿರ್ದೇಶಕ ತುಕರಾಮ ಯೇನೆಕಲ್ಲು, ರಂಗಕರ್ಮಿ ಜಯಪ್ರಕಾಶ ಬಿಳಿನೆಲೆ, ವಿದ್ಯಾರ್ಥಿ ರಾಮಚಂದ್ರ, ಉಪನ್ಯಾಸಕರಾದ ಪುಷ್ಪಾ ಡಿ, ವಿನ್ಯಾಸ್ ಎಚ್, ವಿದ್ಯಾರ್ಥಿನಿ ಮಮತಾ.ಎ ಉಪಸ್ಥಿತರಿರುವರು ಎಂದು ಅವರು ತಿಳಿಸಿದ್ದಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಮೇ.19 ರಂದು ಸುಬ್ರಹ್ಮಣ್ಯದಲ್ಲಿ ರಂಗ ಶಿಕ್ಷಣ ಶಿಬಿರ ಉದ್ಘಾಟನೆ"