ಬೆಳ್ಳಾರೆ: ಭಾರತೀಯ ಕಿಸಾನ್ ಸಂಘದ ವತಿಯಿಂದ ಬೆಳ್ಳಾರೆ ವಿದ್ಯುತ್ ಸಬ್ ಸ್ಟೇಶನ್ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಸಮಾವೇಶ ಮೇ.21 ರಂದು ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ ವಠಾರದಲ್ಲಿ ಬೆಳಗ್ಗೆ 10 ಗಂಟೆಯ ನಡೆಯಲಿದೆ ಎಂದು ಭಾಕಿಸಂ ತಾಲೂಕು ಅಧ್ಯಕ್ಷ ಎನ್.ಜಿ.ಪ್ರಭಾಕರ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಡಿಸೆಂಬರ್ ನಂತರ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ತೋಟಕ್ಕೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಒಂದು ಕಡೆ ಲೋವೋಲ್ಟೇಜ್ ಸಮಸ್ಯೆ ಇನ್ನೊಂದು ಕಡೆ ಗುಣಮಟ್ಟ ವಿದ್ಯುತ್ ಇಲ್ಲದ ಸಮಸ್ಯೆ. ಇದೆರಡೂ ಕೃಷಿಕರಿಗೆ , ಉದ್ಯಮಿಗಳಿಗೆ ತೀರಾ ಸಮಸ್ಯೆಯಾಗಿದೆ. ಇತರ ಜಿಲ್ಲೆ, ತಾಲೂಕುಗಳಿಗೆ ಹೋಲಿಸಿದರೆ ಇಂತಹ ಸಮಸ್ಯೆ ಅಲ್ಲಿ ಇಲ್ಲವಾಗಿದೆ. ಇಲ್ಲಿನ ಸಮಸ್ಯೆಗೆ ಮುಖ್ಯ ಕಾರಣ 110 ಕೆವಿ ವಿದ್ಯುತ್ ಸಬ್ ಸ್ಟೇಶನ್ ಕೆಲಸ ಆಗದೇ ಇರುವುದು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಸಬ್ ಸ್ಟೇಶನ್ ಕೆಲಸ ಶೇ.90 ಮುಗಿದರೂ ನಂತರದ ಕೆಲಸ ಸ್ಥಗಿತವಾಗಿದೆ. ಕುಂಬ್ರ ಸಬ್ ಸ್ಟೇಶನ್ ಕೆಲಸವೂ ಪೂರ್ತಿಯಾಗಿಲ್ಲ. ಹೀಗಾಗಿ ಎರಡೂ ಕೆಲಸಗಳು ತಕ್ಷಣವೇ ಆರಂಭವಾಗಬೇಕು , ಮುಂದಿನ ಅವಧಿಗೆ ಈ ಸಮಸ್ಯೆ ನಿವಾರಣೆಯಾಗಬೇಕು ಎಂದು ಬಳಕೆದಾರರು ಎಲ್ಲರೂ ಒಂದಾಗಿ ಒತ್ತಾಯಿಸಬೇಕಿದೆ ಎಂದು ಪ್ರಕಟಣೆಯಲ್ಲಿ ಭಾರತೀಯ ಕಿಸಾನ್ ಸಂಘ ತಿಳಿಸಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಮೇ.21 : ಬಾಳಿಲದಲ್ಲಿ ವಿದ್ಯುತ್ ಗ್ರಾಹಕರ ಸಮಾವೇಶ"