ಮೇ.21 : ಮಳೆಗಾಗಿ ಸರ್ವೆ ಸುಬ್ರಾಯ ದೇವಸ್ಥಾನದಲ್ಲಿ ಸೀಯಾಳಾಭಿಷೇಕ

Advertisement

ಸವಣೂರು : ಸರ್ವೆ ಶ್ರೀಸುಬ್ರಾಯ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ನೆರವೇರಿಸಿ ಶ್ರೀಸುಬ್ರಹ್ಮಣ್ಯ ದೇವರಿಗೆ ವಿಶೇಷ ಸೀಯಾಳಾಭಿಷೇಕ ಮೇ 21ರಂದು ನಡೆಯಲಿದೆ.
ಮಳೆಯಿಲ್ಲದೆ ಬರದಿಂದ ಹೊರಬರಲು ವರುಣ ಕೃಪೆಗಾಗಿ ದೇವಸ್ಥಾನದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಗ್ರಾಮದ ಪ್ರತಿಯೊಬ್ಬ ಭಕ್ತಾದಿಗಳು ತಮ್ಮ ಮನೆಯಿಂದ ಕನಿಷ್ಠ ಒಂದು ಸೀಯಾಳವನ್ನು ತಂದು ಶ್ರೀ ದೇವರ ಸೀಯಾಳಾಭಿಷೇಕದಲ್ಲಿ ಭಾಗವಹಿಸಿ ಮಳೆಗಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ  ತೊಡಗಿಸಿಕೊಳ್ಳಬೇಕು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.  ಅಭಿಷೇಕಕ್ಕೆ ಸೀಯಾಳ ನೀಡುವವರು ಮೇ 21ರಂದು ಬೆಳಿಗ್ಗೆ 8 ಗಂಟೆಗಿಂತ ಮುಂಚೆ ತಂದೊಪ್ಪಿಸುವಂತೆ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಮೇ.21 : ಮಳೆಗಾಗಿ ಸರ್ವೆ ಸುಬ್ರಾಯ ದೇವಸ್ಥಾನದಲ್ಲಿ ಸೀಯಾಳಾಭಿಷೇಕ"

Leave a comment

Your email address will not be published.


*