ಕಾಣಿಯೂರು : ಚಾರ್ವಾಕ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳ ಸಮಿತಿಯ ವತಿಯಿಂದ ನೂತನ ಸಿಂಗಾರಿ ಮೇಳ ತಂಡ ಪ್ರಾರಂಭವಾಗಿದ್ದು, ಮೇ.23 ರಂದು ಉದ್ಘಾಟನೆಯಾಗಲಿದೆ. ಮೇ.23 (ಗುರುವಾರ ) ಸಂಜೆ 7.30 ಕ್ಕೆ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ಜರಗಲಿದೆ.
ಕೇರಳದ ಖ್ಯಾತ ಚೆಂಡೆಕಲಾವಿದರಾದ ಚಂದ್ರನ್ ಕಾಸರಗೋಡು ಚಾರ್ವಾಕ ಗ್ರಾಮದ 26 ಯುವಕರಿಗೆ ತರಬೇತಿ ನೀಡಿದ್ದಾರೆ.
ಚಾರ್ವಾಕ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳ ಸಮಿತಿಯ ಗೌರವಾಧ್ಯಕ್ಷ ಬೆಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ಮೋಹನ್ ಗೌಡ ಇಡ್ಯಡ್ಕ ರಂಗ ಪ್ರವೇಶ ತಂಡವನ್ನು ಉದ್ಘಾಟಿಸಲಿದ್ದಾರೆ. ಗೌರವ ಸಲಹೆಗಾರ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಡಾ| ಧರ್ಮಪಾಲ ಕರಂದ್ಲಾಜೆ, ಚೆಂಡೆ ಗುರುಗಳಾದ ಚಂದ್ರನ್ ಕಾಸರಗೋಡು, ಚೆಂಡೆ ಸಮಿತಿ ಅಧ್ಯಕ್ಷ ಗೌತಮ್ ಕಜೆ ಉಪಸ್ಥಿತರಿಲಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement