ಸುಳ್ಯ: ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ನಾಳೆ(ಮೇ.8) ಮಧ್ಯಾಹ್ನ 2.30ಕ್ಕೆ ಸುಳ್ಯ ಕೊಡಿಯಾಲಬೈಲಿನ ಗೌಡ ಸಮುದಾಯ ಭವನಕ್ಕೆ ಭೇಟಿ ನೀಡಲಿದ್ದಾರೆ.ಕುರುಂಜಿಭಾಗ್ ನಿಂದ ವಾಹನ ಮೆರವಣಿಗೆಯಲ್ಲಿ ಸ್ವಾಮೀಜಿಯವರನ್ನು ಸಮುದಾಯಭವನಕ್ಕೆ ಕರೆ ತರಲಾಗುವುದು ಎಂದು ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ತಿಳಿಸಿದ್ದರೆ.
ನಾಳೆ ಬೆಳಿಗ್ಗೆ ಸುಳ್ಯಕ್ಕೆ ಭೇಟಿ ನೀಡುವ ಅವರು ಕೆ.ವಿ.ಜಿ.ಆಯುರ್ವೇದ ಕಾಲೇಜಿನ ಆಡಳಿತಾಧಿಕಾರಿ ಡಾ.ಡಿ.ವಿ.ಲೀಲಾಧರ್ ಕುರುಂಜಿಭಾಗ್ ನಲ್ಲಿ ನಿರ್ಮಿಸಿದ ನೂತನ ಮನೆಯ ಗೃಹಪ್ರವೇಶ ಮತ್ತು ಗುರುಪ್ರವೇಶ ಕಾರ್ಯಕ್ರಮದ ದಲ್ಲಿ ಭಾಗವಹಿಸಲಿದ್ದಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಮೇ.8 : ಗೌಡ ಸಮುದಾಯ ಭವನಕ್ಕೆ ಆದಿಚುಂಚನಗಿರಿ ಶ್ರೀ"