ಮೈಸೂರಿನಲ್ಲಿ “ಕೊಡಗಿನ ತಲ್ಲಣ’’ ಕೃತಿ ಬಿಡುಗಡೆ

June 24, 2019
10:00 AM

ಮಡಿಕೇರಿ: ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಬರೆದ “ಕೊಡಗಿನ ತಲ್ಲಣ, ದುರಂತದ ಹಿಂದಿನ ಸತ್ಯಗಳು’’ ಕೃತಿ ಮೈಸೂರಿನಲ್ಲಿ ಭಾನುವಾರ ಬಿಡುಗಡೆಯಾಯಿತು.

Advertisement

ಮೈಸೂರು ಪತ್ರಕರ್ತರ ಸಂಘ ಹಾಗೂ ಯುಕ್ತ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ವನ್ಯಜೀವಿ ತಜ್ಞ ಕೃಪಾಕರ, ಜಲಪ್ರಳಯ ಕೇವಲ ಕೊಡಗಿನ ತಲ್ಲಣವಲ್ಲ. ಇದು ಜಾಗತಿಕ ತಲ್ಲಣ. ಜಗತ್ತಿನಾದ್ಯಂತ ಇದು ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.  ಈ ಪುಸ್ತಕದಲ್ಲಿ ಕೊಡಗಿನ ಚಾರಿತ್ರ್ಯ, ಇತಿಹಾಸ, ಬದುಕು ಅನಾವರಣಗೊಂಡಿದೆ. ಇದೊಂದು ಸಂಗ್ರಹ ಯೋಗ್ಯ ಪುಸ್ತಕ. ಅಲ್ಲದೆ, ಪ್ರಸ್ತುತ ಸನ್ನಿವೇಶದಲ್ಲಿ ಪ್ರಾಕೃತಿಕ ಸಂಪನ್ಮೂಲಗಳನ್ನು ಹೇಗೆ ಉಳಿಸಿಕೊಳ್ಳಬೇಕಿದೆ ಎಂಬುದು ಸವಾಲಿನ ವಿಷಯವನ್ನು ಚರ್ಚಿಸಬೇಕಿದೆ, ಎಂದರು.
ಪುಸ್ತಕದ ಬಗ್ಗೆ ಪ್ರಾಧ್ಯಾಪಕರಾದ ಡಾ.ಬೆಸೂರು ಮೋಹನ ಪಾಳೇಗಾರ ಮಾತನಾಡಿ, ಪುಸ್ತಕದಲ್ಲಿ 11 ಅಧ್ಯಾಯಗಳಿವೆ. ಕೊಡಗಿನ ಇತಿಹಾಸದ ಜತೆಗೆ ಕೊಡಗಿನ ತಲ್ಲಣಗಳನ್ನು ರಮೇಶ ಉತ್ತಪ್ಪ ದಾಖಲಿಸಿದ್ದಾರೆ. ಇಡೀ ಜಿಲ್ಲೆಯನ್ನು ಪ್ರವಾಸ ಮಾಡಿ ಸತ್ಯ ಮತ್ತು ನಿಖರವಾದ ಮಾಹಿತಿಯನ್ನು ಅವರು ನೀಡಿದ್ದಾರೆ. ಕೊಡಗಿನ ತಲ್ಲಣಕ್ಕೆ ಕಾರಣವಾದ ರೆಸಾರ್ಟ್, ಮರಗಳ ಹನನ, ಪ್ರವಾಸೋದ್ಯಮ, ನೆರೆ ರಾಜ್ಯದವರು ಹಾವಳಿ ಎಲ್ಲವನ್ನೂ ಲೇಖಕರು ಅರ್ಥಗರ್ಭಿತವಾಗಿ ಕಟ್ಟಿಕೊಟ್ಟಿದ್ದಾರೆ. ಇದು ವಿಶ್ವವಿದ್ಯಾಲಯದಲ್ಲಿ ಅಧ್ಯಯನಶೀಲ ಕೃತಿಯಾಗಬೇಕು’’ ಎಂದು ಆಶಿಸಿದರು.
ವಿಜಯ ಕರ್ನಾಟಕ ಪತ್ರಿಕೆ ಸಂಪಾದಕರಾದ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕೊಡಗಿನ ದುರಂತಕ್ಕೆ ಯಾರನ್ನು ದೂರಬೇಕು ಎಂಬ ಪ್ರಶ್ನೆ ಮೂಡುತ್ತದೆ. ಪ್ರವಾಸೋದ್ಯಮದ ಹೆಸರಲ್ಲಿ ಶೋಷಣೆ ಮಾಡುತ್ತಿರುವ ಉದ್ಯಮವನ್ನೋ, ಅದಕ್ಕೆ ಅವಕಾಶ ಮಾಡಿಕೊಟ್ಟ ನಮ್ಮ ಸರಕಾರದ ವ್ಯವಸ್ಥೆಯನ್ನೋ, ಇಲ್ಲ ಗೊತ್ತೋಗೊತ್ತಿಲ್ಲದೆ ಈ ಅಪಾಯಕ್ಕೆ ತೆರೆದುಕೊಂಡಿರುವ ಜನರನ್ನೊ ಎಂಬುದನ್ನು ಪತ್ರಕರ್ತರಾಗಿ ಆಲೋಚಿಸಬೇಕಿದೆ ಎಂದರು.

ಪುಸ್ತಕದ ಲೇಖಕ ಹಾಗೂ ಪತ್ರಕರ್ತ ಐತಿಚಂಡ ರಮೇಶ ಉತ್ತಪ್ಪ ಮಾತನಾಡಿ, “”ಪತ್ರಕರ್ತನಾಗಿ ಕೊಡಗಿನಲ್ಲಿ ಕಳೆದ ವರ್ಷ ನಡೆದ ಜಲಪ್ರಳಯವನ್ನು ಕಣ್ಣಾರೆ ಕಂಡು ಪುಸ್ತಕ ರೂಪದಲ್ಲಿ ಅನುಭವವನ್ನು ದಾಖಲಿಸಿದ್ದೇನೆ. ಕೊಡಗಿನಲ್ಲಿ ಜಲಪ್ರಳಯವಾದಾಗ ಒಂದೊಂದು ಮಾಧ್ಯಮಗಳು ಒಂದೊಂದು ರೀತಿಯಲ್ಲಿ ಸುದ್ದಿ ಬಿತ್ತರಿಸಿದವು. ಹಲವರು ಮತ್ತದೇ ರೀತಿಯಲ್ಲಿ ವಾದ ಮಂಡಿಸಿದರು. ಇದೆಲ್ಲವನ್ನೂ ಅಂಶಗಳು “ಕೊಡಗಿನ ತಲ್ಲಣ’ ಪುಸ್ತಕ ಬರೆಯಲು ನನಗೆ ಪ್ರೇರೇಪಿಸಿತು,” ಎಂದರು.

ವನ್ಯಜೀವಿ ತಜ್ಞ ಸೇನಾನಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ .ಕೆ.ಮಹೇಂದ್ರ, ಯುಕ್ತಾ ಪ್ರಕಾಶನದ ಪ್ರಕಾಶಕರಾದ ಓಂಕಾರಪ್ಪ ಉಪಸ್ಥಿತರಿದ್ದರು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉತ್ತರಕನ್ನಡ ಜಿಲ್ಲೆಯಲ್ಲಿ ನಿಯಮಬಾಹಿರವಾಗಿ ವಾಸ್ತವ್ಯ ಹೂಡಿರುವ ವಿದೇಶಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ
July 19, 2025
8:48 PM
by: ದ ರೂರಲ್ ಮಿರರ್.ಕಾಂ
ನಿಧನ | ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್
July 19, 2025
4:29 PM
by: The Rural Mirror ಸುದ್ದಿಜಾಲ
ಮುಳ್ಳಯ್ಯನಗಿರಿಗೆ 600 ವಾಹನಗಳಿಗೆ ಪ್ರವೇಶ | ವಾಹನಗಳ ದಟ್ಟಣೆ ನಿಯಂತ್ರಿಸಲು ಕ್ರಮ
July 17, 2025
9:46 PM
by: The Rural Mirror ಸುದ್ದಿಜಾಲ
ಯಾದಗಿರಿಯಲ್ಲಿ ಹೆಸರು ಬೆಳೆಗೆ ಹಳದಿ ನಂಜಾಣು ರೋಗ ಬಾಧೆ
July 17, 2025
9:02 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group