ಸುಳ್ಯ: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಮೊಗರ್ಪಣೆ, ಗಾಂಧಿನಗರ, ಜಟ್ಟಿಪಳ್ಳ ಶಾಖೆಯ ಅಧೀನದಲ್ಲಿ ರಾಜ್ಯ ಸಮಿತಿಯ ವಿಶೇಷ ತರಬೇತಿ ಶಿಬಿರ ಇರ್ಶಾದಿಯಾ ಇಲ್ಫಾ ಕ್ಯಾಂಪ್ ಇತ್ತೀಚೆಗೆ ಮೊಗರ್ಪಣೆ ಮದರಸಾ ಹಾಲ್ ನಲ್ಲಿ ಜರಗಿತು.
ಎಸ್ಸೆಸ್ಸೆಫ್ ಮೊಗರ್ಪಣೆ ಶಾಖಾಧ್ಯಕ್ಷ ಸ್ವಾಬಿರ್ ಜಯನಗರ ಅಧ್ಯಕ್ಷತೆಯಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಹಸೈನಾರ್ ಜಯನಗರ ಉದ್ಘಾಟಿಸಿ ಮಾತನಾಡಿದರು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಪ್ರಧಾನ ಕಾರ್ಯದರ್ಶಿ, ಜುನೈದ್ ಸಖಾಫಿ ಜೀರ್ಮುಕಿ ವಿಷಯ ಮಂಡಿಸಿ ಕ್ಲಾಸ್‍ಗೆ ನೇತೃತ್ವ ನೀಡಿದರು.
ಎಸ್ಸೆಸ್ಸೆಫ್ ಸುಳ್ಯ ಡಿವಿಶನ್ ಕಾರ್ಯದರ್ಶಿ ನೌಶಾದ್ ಕೆರೆಮೂಲೆ, ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಾಲಿಕ್ ಕೊಯಂಗಿ, ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿ ಸದಸ್ಯರಾದ ಸಿದ್ದೀಕ್ ಎಲಿಮಲೆ, ಶಮೀರ್ ಡಿ.ಎಚ್, ಶರೀಫ್ ಮೊಗರ್ಪಣೆ ಮುಖ್ಯ ಅತಿಥಿಗ
ಳಾಗಿ ಭಾಗವಹಿಸಿದರು.
ಸ್ವಬಾಹ್ ಹಮೀದ್ ಬೀಜಕೊಚ್ಚಿ ಸ್ವಾಗತಿಸಿ ಎಸ್ಸೆಸ್ಸೆಫ್ ಗಾಂಧಿನಗರ ಶಾಖಾಧ್ಯಕ್ಷ ಸಿದ್ದೀಕ್ ಬಿ.ಎ ವಂದಿಸಿದರು.