ಸುಳ್ಯ: ನರೇಂದ್ರ ಮೋದಿ ನೇತೃತ್ವದಲ್ಲಿ ಎರಡನೇ ಬಾರಿ ಎನ್.ಡಿ.ಎ ಸರಕಾರ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಕ್ಕೇರುವ ಸಂಭ್ರಮವನ್ನು ಸುಳ್ಯದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಲಡ್ಡು ಹಂಚಿ ಆಚರಿಸುತ್ತಿದ್ದಾರೆ. ಸಂಜೆ ನಾಲ್ಕು ಗಂಟೆಯಿಂದಲೇ ಲಡ್ಡು ವಿತರಣೆ ನಡೆಯುತಿದೆ. ಹೀಗೆ ಹಂಚಲು 10 ಸಾವಿರ ಲಡ್ಡು ಸಿದ್ಧಪಡಿಸಲಾಗಿದೆ. ಲಡ್ಡು ಜೊತೆಗೆ ಬಿಸಿ ಬಿಸಿ ಚಹಾ ವಿತರಣೆ ಮಾಡಲಾಗುತಿದೆ. ಇದಕ್ಕಾಗಿ ಸುಳ್ಯ ಬಸ್ ನಿಲ್ದಾಣದ ಬಳಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ.
ಮೋದಿ ಅಭಿಮಾನಿಗಳಾದ ದಿನೇಶ್ ಎ.ಎಸ್.ಅವರ ಅಮ್ಮ ಫ್ಲವರ್ ಸ್ಟಾಲ್, ಹರಿಪ್ರಸಾದ್ ಅವರ ಕೀರ್ತನ್ ಕೆಟರರ್ಸ್, ಸತ್ಯಪ್ರಸಾದ್ ಅವರ ಜ್ಯೋತಿ ಫ್ಲವರ್ ಸ್ಟಾಲ್, ರಾಂಪ್ರಸಾದ್ ಅವರ ಪೂರ್ಣಿಮಾ ಟ್ರಾವೆಲ್ಸ್ ಜಂಟಿಯಾಗಿ ಲಡ್ಡು ಮತ್ತು ಚಹಾ ವಿತರಿಸಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ರಾತ್ರಿಯ ತನಕವೂ ಲಡ್ಡು ವಿತರಣೆ ನಡೆಯಲಿದೆ.
ಕಳೆದ ಎರಡು ದಿನಗಳಿಂದ 11 ಮಂದಿ ಸೇರಿ ಹತ್ತು ಸಾವಿರ ಲಡ್ಡು ತಯಾರಿಸಿದ್ದಾರೆ. 2014ರಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೇರಿದ ಸಂದರ್ಭದಲ್ಲಿ ಇವರು ಇಡೀ ನಗರದಲ್ಲಿ 15 ಸಾವಿರ ಲಡ್ಡು ಹಂಚಿದ್ದರು.
“ಮೋದಿಯವರು ಮತ್ತೆ ಪ್ರಧಾನಿಯಾಗಿ ಅಧಿಕ್ಕಾರಕ್ಕೇರುವುದು ತುಂಬಾ ಖುಷಿ ಕೊಟ್ಟಿದೆ. ಆದುದರಿಂದ ಎಲ್ಲರಿಗೂ ಸಿಹಿ ನೀಡಿ ಸಂಭ್ರಮ ಹಚ್ಚಿಕೊಳ್ಳಬೇಕು ಎಂಬ ನೆಲೆಯಲ್ಲಿ ಲಡ್ಡು ಹಂಚುತ್ತಿದ್ದೇವೆ” ಎಂದು ಅಮ್ಮ ಫ್ಲವರ್ ಸ್ಟಾಲ್ ನ ಎ.ಎಸ್.ದಿನೇಶ್ ಸುಳ್ಯನ್ಯೂಸ್.ಕಾಂ ಗೆ ತಿಳಿಸಿದ್ದಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಮೋದಿ ಪ್ರಮಾಣವಚನ : ಸುಳ್ಯದಲ್ಲಿ ಲಡ್ಡು ಹಂಚಿ ಸಂಭ್ರಮ"