ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಣಾಸಿಯಲ್ಲಿ ಸ್ಫರ್ಧೆ ಮಾಡಿದ್ದ ಕನ್ನಡಿಗ, ಸುಳ್ಯದ ಪತ್ರಕರ್ತ , ಸುದ್ದಿಬಿಡುಗಡೆ ಪತ್ರಿಕೆ ಸಂಪಾದಕ ಡಾ.ಯು.ಪಿ.ಶಿವಾನಂದ ಅವರ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಸುದ್ದಿಬಿಡುಗಡೆ ಪತ್ರಿಕೆ ಸಂಪಾದಕ ಡಾ.ಯು.ಪಿ.ಶಿವಾನಂದ ಅವರು ಪ್ರಧಾನಿ ಅಭ್ಯರ್ಥಿಗಳ ವಿರುದ್ಧ “ಹಳ್ಳಿಯಿಂದ ದಿಲ್ಲಿಗೆ ಅಧಿಕಾರ ” ಎಂಬ ಹಿನ್ನೆಲೆಯಲ್ಲಿ ಹೋರಾಟದ ಉದ್ದೇಶದಿಂದ ಸ್ಫರ್ಧೆ ಮಾಡಿದ್ದರು. ಇದೀಗ ವಾರಣಾಸಿಯಲ್ಲಿ ಡಾ.ಶಿವಾನಂದ ಅವರ ನಾಮಪತ್ರ ತಿರಸ್ಕೃತಗೊಂಡಿದ್ದು, ಈ ಬಗ್ಗೆ ಅಪೀಲು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮೇಠಿಯಲ್ಲಿ ಸಲ್ಲಿಸಿದ ನಾಮಪತ್ರ ಸ್ವೀಕಾರಗೊಂಡಿದೆ.
ಇದೀಗ ನಾಮಪತ್ರ ತಿರಸ್ಕಾರದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಮೋದಿ ವಿರುದ್ಧ ಸ್ಫರ್ಧಿಸಿದ ಸುಳ್ಯದ ಪತ್ರಕರ್ತನ ನಾಮಪತ್ರ ತಿರಸ್ಕೃತ"