ಮೌಲ್ಯಮಾಪಕರ ಎಡವಟ್ಟು , ವಿದ್ಯಾರ್ಥಿನಿಗೆ 50 ಅಂಕ ನಷ್ಟ…!

Advertisement

ಸುಳ್ಯ:ಮೌಲ್ಯಮಾಪಕರ ಎಡವಟ್ಟಿನಿಂದ ಸುಳ್ಯ ಮಿತ್ತಡ್ಕ ರೋಟರಿ ಶಾಲಾ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಯುಕ್ತಾ ಅವರಿಗೆ 50 ಅಂಕ ಕಡಿಮೆಯಾಗಿತ್ತು. ಹಾಗಿದ್ದರೂ ಪೂರ್ತಿ ಅಂಕ ಸಿಗದೆ ವಿದ್ಯಾರ್ಥಿನಿ ಮತ್ತೆ ಸಂಕಷ್ಟ ಪಟ್ಟಿದ್ದಾಳೆ.

Advertisement

ಮೌಲ್ಯಮಾಪಕರ ಎಡವಟ್ಟಿನಿಂದ ಸುಳ್ಯ ಮಿತ್ತಡ್ಕ ರೋಟರಿ ಶಾಲಾ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಯುಕ್ತಾ ಅವರಿಗೆ ಕಡಿಮೆ ಅಂಕ ದೊರೆತಿದೆ. ಉತ್ತರ ಪತ್ರಿಕೆ ಪರಿಶೀಲಿಸಿದ ಸಂದರ್ಭ ಅಸಲಿ ಕಥೆ ಗೊತ್ತಾಗಿದೆ. ಕೇರ್ಪಳ ನಿವಾಸಿ ಸೋಮನಾಥ ಅವರ ಪುತ್ರಿ ಯುಕ್ತಾ ಕನ್ನಡ ಹೊರತುಪಡಿಸಿ ಇತರ ವಿಷಯಗಳಲ್ಲಿ ಉತ್ತಮ ಅಂಕ ಪಡೆದಿದ್ದರು. ಕನ್ನಡದಲ್ಲಿ ಹೆಚ್ಚು ಅಂಕ ಬರಬೇಕಿದ್ದ ಕಾರಣ ಹಣ ಪಾವತಿಸಿ ಉತ್ತರಪತ್ರಿಕೆಯ ಛಾಯಾಪ್ರತಿ ತರಿಸಲಾಯಿತು. ಈ ವೇಳೆ 90 ಅಂಕದಷ್ಟು ಈಕೆ ಸರಿ ಉತ್ತರ ಬರೆದಿರುವುದು ಬೆಳಕಿಗೆ ಬಂದಿದೆ. ಇದರಿಂದ ಈಕೆಗೆ 50 ಅಂಕ ನಷ್ಟವಾಗಿದೆ.

Advertisement
Advertisement

ಆದರೆ ಹೆಚ್ಚುವರಿ 50 ಅಂಕವನ್ನುಪೂರ್ತಿ ಸೇರಿಸಲು ಸಾಧ್ಯವಿಲ್ಲ. 6 ಅಂಕವಷ್ಟೇ ಸೇರಿಸಬಹುದು ಎಂದು ಇಲಾಖೆ ಮಾಹಿತಿ ನೀಡಿದೆ ಎಂದು ಆಕೆಯ ಪೋಷಕರು ದೂರಿದ್ದು, ಇದರಿಂದ ಶೇಕಡಾವಾರು ಅಂಕ ಕುಸಿತ ಕಂಡಿದೆ ಎಂದಿದ್ದಾರೆ. ವೈದ್ಯೆಯಾಗುವ ಕನಸು ಕಂಡಿರುವ ಈಕೆ ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆದಿದ್ದು, 44 ಅಂಕ ನೀಡದಿರುವ ಇಲಾಖೆ ಬಗ್ಗೆ ಅಚ್ಚರಿ ಮೂಡಿದೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಮೌಲ್ಯಮಾಪಕರ ಎಡವಟ್ಟು , ವಿದ್ಯಾರ್ಥಿನಿಗೆ 50 ಅಂಕ ನಷ್ಟ…!"

Leave a comment

Your email address will not be published.


*