ಸುಳ್ಯ: ದೇಲಂಪಾಡಿ ಬನಾರಿ ಶ್ರಿ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಪತ್ರಿಕೋದ್ಯಮ ಕುರಿತು ವಿಚಾರಗೋಷ್ಠಿ ನಡೆಯಿತು.
ವಿಷಯ ಮಂಡಿಸಿದ ಬಲ್ಲಿರೇನಯ್ಯ ಯಕ್ಷಗಾನ ಪತ್ರಿಕೆಯ ಸಂಪಾದಕ ತಾರಾನಾಥ ವರ್ಕಾಡಿ , “ಯಕ್ಷಗಾನ ಪತ್ರಿಕೋದ್ಯಮಕ್ಕೆ ಸರಿಯಾದ ಪ್ರೋತ್ಸಾಹ ಸಿಗದ ಕಾರಣ ಇಂದು ಅಳಿವು ಉಳಿವಿನ ಪ್ರಶ್ನೆಯನ್ನು ಎದುರಿಸುತಿದೆ. ಯಕ್ಷಗಾನ ಪ್ರೇಮಿಗಳ ಮತ್ತು ಕಲಾವಿದರ ಬೆಂಬಲ ಇದ್ದರೆ ಮಾತ್ರ ಯಕ್ಷಗಾನ ಪತ್ರಿಕೋದ್ಯಮ ಉಳಿಯಲು ಸಾಧ್ಯ” ಎಂದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿಯ ಮುರಳಿ ಕಡೆಕಾರ್, ” ಯಕ್ಷಗಾನ ಪತ್ರಿಕೆ ನಡೆಸುವುದು ಒಂದು ಸಾಹಸದ ಕೆಲಸ ಮತ್ತು ಬಲು ದೊಡ್ಡ ಹೋರಾಟ” ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತರರಾದ ಗಂಗಾಧರ ಕಲ್ಲಪಳ್ಳಿ ಮತ್ತು ಪುರುಷೋತ್ತಮ ಭಟ್ ಕೆ. ಮಾತನಾಡಿದರು. ವೆಂಕಟರಾಮ ಭಟ್ಟ ಸುಳ್ಯ ವಿಚಾರಗೋಷ್ಠಿಯ ಸಮನ್ವಯಕಾರರಾಗಿದ್ದರು. ಡಾ.ರಮಾನಂದ ಬನಾರಿ ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel