ಸುಳ್ಯ: ಸುಳ್ಯ ನಗರದಿಂದ ಅರಂತೋಡು ಕಡೆಗೆ ಕುಡಿದ ಮತ್ತಿನಲ್ಲಿ ಬೈಕ್ ಸವಾರನೊಬ್ಬ ಅಡ್ಡಾದಿಡ್ಡಿ ಬೈಕ್ ಚಲಾಯಿಸಿ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ ಘಟನೆ ಸುಳ್ಯದ ಅರಂಬೂರಿನಲ್ಲಿ ನಡೆದಿದೆ. ಪೊಲೀಸರು ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕಿದೆ. ಏಕೆಂದರೆ ಇನ್ಯಾರೋ ಬಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.
ಈ ಸವಾರನ ಚಾಲನೆಯಿಂದ ಇತರೇ ವಾಹನಗಳಿಗೆ ತೊಂದರೆ ಉಂಟಾಗಿದ್ದು, ಬೇಸತ್ತ ಇತರೇ ವಾಹನಿಗರು ಆತನ ಹಿಂದೆಯೇ ವೀಡೀಯೋ ಚಿತ್ರೀಕರಿಸಿದ್ದು, ವೀಡೀಯೋದಲ್ಲಿ ಅಪಘಾತ ಸಂಭವಿಸುವ ದೃಶ್ಯವೂ ಕಾಣುತ್ತಿದ್ದು, ಸವಾರನನ್ನು ಅರಂಬೂರಿನ ಯುವಕರು 108 ಅಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ದೃಶ್ಯ ಇದೀಗ ವೈರಲ್ ಆಗಿದೆ.
ಈ ರೀತಿ ಕುಡಿದು ಬೈಕ್ ಓಡಿಸುವವರ ವಿರುದ್ಧ ಪೋಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದು ಬೈಕ್ ಸವಾರ ಬೈಕ್ ಓಡಿಸುವ ರೀತಿ ಹಾಗೂ ಬೀಳುವ ದೃಶ್ಯ ಇದರಲ್ಲಿದೆ…

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಯಪ್ಪಾ…. ಇವ ಎಂತಾ ಬೈಕ್ ಬಿಡ್ತಾನೆ…! ; ಪೊಲೀಸರೇ ಸ್ವಲ್ಪ ನೋಡಿ"