ಯುಗಾದಿ ಮತ್ತೆ ಬಂದಿದೆ | ಈ ಬಾರಿ ಸಿಹಿಯೊಂದಿಗೆ ಕಹಿಯ ಮಿಶ್ರಣ

March 25, 2020
3:46 PM
ಯುಗಾದಿ ಹಬ್ಬದ ಶುಭಾಶಯಗಳು. 

ಯುಗಾದಿ ಮತ್ತೆ ಬಂದಿದೆ. ಈ ಬಾರಿ ಸಿಹಿಯೊಂದಿಗೆ ಕಹಿಯ ಮಿಶ್ರಣ. ಯುುಗಾದಿ

Advertisement
ಮುಂದಿನ ವರ್ಷ ವೂ ಬರುತ್ತದೆ. ಎಂದಿನಂತಲ್ಲ ಈ ಬಾರಿ ಯುಗಾದಿ. ಸಂಭ್ರಮಕ್ಕೊಂದು ಸೀಮಾ ರೇಖೆಯಿರಲಿ. ಈ ದಿನ ನಮ್ಮ ಮನೆಯಲ್ಲಿ ಏನಿದೆಯೋ ಅದರಲ್ಲೇ ಹಬ್ಬ ಮಾಡೋಣ. ಪ್ರತಿ ವರ್ಷ ದೇವಾಲಯಗಳಿಗೆ ಹೋಗುತ್ತಿದ್ದರೆ ಇಂದು ಮನೆಯಲ್ಲೇ ನಮಸ್ಕರಿಸೋಣ.  ನೈವೇದ್ಯ ಸಮರ್ಪಿಸೋಣ.  ದೇವರಿಗೆ ಗೊತ್ತಲ್ಲವೇ ಕೊರೊನಾ ರಕ್ಕಸ ತನ್ನ ಕಬಂಧಬಾಹುವಿನಲ್ಲಿ ಎಲ್ಲರನ್ನೂ ಆಪೋಷನ ತೆಗೆದು ಕೊಳ್ಳಲು ಕಾಯುತ್ತಿದ್ದಾನೆಂದು. ಎಲ್ಲಿ ಯಾವಾಗ ಬಲಿ ಸಿಗುತ್ತದೆಂದು,  ನಿಮಿಷ ನಿಮಿಷಕ್ಕೂ  ಹೆಚ್ಚುತ್ತಿರುವ  ಕೊರೊನಾ ಸೋಂಕಿತರ ಸಂಖ್ಯೆ  ಸೂಚಿಸುತ್ತಿದೆ.
ಸರಕಾರ , ಮಾದ್ಯಮ, ಪೋಲಿಸರು, ವೈದ್ಯಕೀಯ ತಂಡ ಎಲ್ಲರೂ ಮನೆಯಲ್ಲೇ ಇರಲು ಸೂಚಿಸುತ್ತಿದ್ದಾರೆ. ಹೆದರುವ ಅಗತ್ಯವಿಲ್ಲದಿದ್ದರೂ  ಜಾಗೃತರಾಗುವತ್ತ ಗಮನ ಹರಿಸ ಬೇಕಾಗಿದೆ.  ಪ್ರಧಾನಮಂತ್ರಿ  ನರೇಂದ್ರ ಮೋದಿ ಯವರ  ಭಾರತ ಲಾಕ್ ಡೌನ್ ಕರೆಗೆ  ನಾವು ತಲೆ ಬಾಗಲೇ ಬೇಕು .     ನಮ್ಮ ದೇಶ , ನಮ್ಮ ಪರಿಸರ ,  ಜನತೆ‌ ಉಳಿಯ ಬೇಕಾದರೆ  ಈ ಲಾಕ್ ಡೌನ್ ಅಗತ್ಯ. ಜನತೆ ಇನ್ನೂ ಎಚ್ಚೆತ್ತು ಕೊಂಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಒಬ್ಬನೇ ಒಬ್ಬ ಎಚ್ಚರ ತಪ್ಪಿದರೂ ಕೊರೊನಾದ ಕಪಿಮುಷ್ಟಿಯಲ್ಲಿ  ಇಡೀ ಭಾರತವೇ ನಲುಗ ಬೇಕಾಗಿದೆ. ಈ ಸಂಘರ್ಷ ದಲ್ಲಿ ಗೆಲುವು ನಮ್ಮದೇ ಆಗಲಿ ಎಂಬ ನಿರೀಕ್ಷೆ ಯೊಂದಿಗೆ. 21 ದಿನಗಳ  ಸ್ಥಬ್ದ ಭಾರತ ಮತ್ತೆ ತನ್ನ ಕಂಟಕಗಳನ್ನು ನಿವಾರಿಸಿ  ಎದ್ದೇಳುವಾಗಹೊಸ ಭಾರತದ ಉದಯವಾಗಿರುತ್ತದೆ.
ಯುಗಾದಿ ಎಂದರೆ ನಮಗೆ ಹೊಸವರ್ಷ.  ಹೊಸ ಕನಸುಗಳು ,  ನಿರೀಕ್ಷೆಗಳು , ಎಲ್ಲವೂಚಿಗುರುವ ಸಂಭ್ರಮ. ಮನೆ ಮನದಲ್ಲಿ ನವಚೈತನ್ಯ ತುಂಬುವ ಕಾಲ.  ಬೇವು ಬೆಲ್ಲ ತಿಂದು ಒಳ್ಳೆ ಮಾತಾಡಿ. ಆದರೆ ಬೆಲ್ಲವೇನೋ ಮನೆಯಲ್ಲಿ ಇರಬಹುದು ಬೇವು ಎಲ್ಲರಿಗೂ ಸಿಗುತ್ತದೋ ಇಲ್ಲವೋ. ಎನೇ ಇರಲಿ, ಇದ್ದರಲ್ಲಿ ಹಬ್ಬ ಮಾಡೋಣ. ಮುಂದಿನ ಬಾರಿಯ ಯುಗಾದಿಯನ್ನು ತುಂಬಾ ಖುಷಿಯಿಂದ ಕಳೆಯುವಂತಹ ಭವಿಷ್ಯ ನಮ್ಮದಾಗಲಿ.
ಯುಗಾದಿ ಹಬ್ಬದ ಶುಭಾಶಯಗಳು.
* ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಒಬ್ಬರೇ ಕಲಿಯುವುದು ಮತ್ತು ತರಗತಿಯಲ್ಲಿ ಕಲಿಯುವುದು
July 16, 2025
8:34 PM
by: ಡಾ.ಚಂದ್ರಶೇಖರ ದಾಮ್ಲೆ
ಬೆಳೆಗೆ ಔಷಧಿ ಸಿಂಪಡಣೆಯ ವೇಳೆ ಬಳಸುವ ಸಿಲಿಕಾನ್ ಸ್ಪ್ರೆಡರ್ ಗುಣಧರ್ಮ ಏನು..?
July 16, 2025
7:38 AM
by: ಅರುಣ್‌ ಕುಮಾರ್ ಕಾಂಚೋಡು
ಬದುಕು ಪುರಾಣ | ಮನವನ್ನು ಚುಚ್ಚುವ ಅಳಿಲು
July 14, 2025
10:56 PM
by: ನಾ.ಕಾರಂತ ಪೆರಾಜೆ
ಮೊಬೈಲ್‌ ಕಣ್ಣು ಮಾತ್ರವಲ್ಲ – ಮನಸ್ಸನ್ನೂ ಹಾಳು ಮಾಡುತ್ತದೆ..!
July 13, 2025
11:36 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror

Join Our Group