ಸುಳ್ಯ: ಯುವ ಬ್ರಿಗೇಡ್ ವತಿಯಿಂದ #ಸ್ವಚ್ಛಪಯಸ್ವಿನಿ ಎಂಬ ನದಿ ಸ್ವಚ್ಛತಾ ಆಂದೋಲನ ಭಾನುವಾರ ಸುಳ್ಯದಲ್ಲಿ ನಡೆಯಿತು.
ಕಾಂತಮಂಗಲ ಸೇತುವೆ ಬಳಿ ಪಯಸ್ವಿನಿ ತಟದಲ್ಲಿ ಸ್ವಚ್ಚತಾ ಕಾರ್ಯವನ್ನು ನಡೆಸಲಾಯಿತು. ಸುಮಾರು 25 ಮಂದಿ ಯುವ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಚತಾ ಆಂದೋಲನದಲ್ಲಿ ಭಾಗವಹಿಸಿದ್ದರು. ನದಿಯಲ್ಲಿ ಮತ್ತು ನದಿಯ ಬದಿಯಲ್ಲಿ ಸುರಿಯಲಾದ ಲೋಡುಗಟ್ಟಲೆ ಕಸವನ್ನು ತೆರವು ಮಾಡಿದರು.ನದಿ ಪಾತ್ರದಲ್ಲಿ ಮತ್ತು ತಟದಲ್ಲಿ ಎಸೆಯಲಾದ ಪ್ಲಾಸ್ಟಿಕ್ ತ್ಯಾಜ್ಯಗಳು, ಪ್ಲಾಸ್ಟಿಕ್ ಬಾಟಲಿಗಳು, ಮದ್ಯದ ಬಾಟಲಿಗಳು ಮತ್ತಿತರ ತ್ಯಾಜ್ಯಗಳನ್ನು ತೆರವು ಮಾಡಿದರು.
ತ್ಯಾಜ್ಯ ನೀರು ನದಿಗೆ:
ಈ ಪ್ರದೇಶದಲ್ಲಿ ನದಿಗೆ ತ್ಯಾಜ್ಯ ನೀರು ಸೇರುತ್ತಿದ್ದು ನದಿಯ ನೀರು ಕಲುಷಿತವಾಗಿದೆ. ನದಿಗೆ ಕಲುಷಿತ ನೀರು ಸೇರುವುದನ್ನು ನಗರಾಡಳಿತ ತಡೆ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ತ್ಯಾಜ್ಯ ನೀರು ಸೇರಿ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು ನದಿ ತಟವೇ ಕಲುಷಿತಗೊಂಡಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel