ಸುಳ್ಯ: ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ನಡೆಯುವ ಯಕ್ಷಗಾನ ನಾಟ್ಯ ತರಗತಿಗಳು ಜೂನ್ ಎರಡನೇ ವಾರದಿಂದ ಆರಂಭಗೊಳ್ಳಲಿದೆ ಎಂದು ಕೇಂದ್ರದ ಅಧ್ಯಕ್ಷ ಜೀವನ್‍ರಾಂ ಸುಳ್ಯ ತಿಳಿಸಿರುತ್ತಾರೆ.
ಕಳೆದ ನಾಲ್ಕು ವರ್ಷಗಳಿಂದ ನಾಟ್ಯಾಭ್ಯಾಸ, ಮಾತುಗಾರಿಕೆ, ಅಭಿನಯ ಮತ್ತು ಯಕ್ಷಗಾನದ ರಂಗತಂತ್ರಗಳನ್ನು ಕಲಿಸುವ ಮೂಲಕ ಮಕ್ಕಳ ಯಕ್ಷಗಾನ ತಂಡವನ್ನು ರಚಿಸಲಾಗಿತ್ತು. ಈ ತಂಡ ಹಲವು ಕಡೆಗಳಲ್ಲಿ ಪ್ರದರ್ಶನಗಳನ್ನು ನೀಡಿವೆ. ಈಗಾಗಲೇ ಹಲವು ಪ್ರಸಂಗಗಳನ್ನೂ ಆಡಿತೋರಿಸಿವೆ. ಇದಲ್ಲದೇ ಅಧ್ಯಯನ ಕೇಂದ್ರದ ವತಿಯಿಂದ ಹಿಮ್ಮೇಳ ತರಗತಿಗಳೂ ನಡೆಯುತ್ತವೆ. ನಾಟ್ಯಗುರು ಲಕ್ಷ್ಮೀಶ ರೈ ಕಳಂಜ, ಹಿಮ್ಮೇಳ ಗುರು ಕುಮಾರ ಸುಬ್ರಹ್ಮಣ್ಯ ವಳಕುಂಜ ಇವರು ಪ್ರತೀ ಆದಿತ್ಯವಾರ ತರಗತಿಗಳನ್ನು ನಡೆಸಲಿದ್ದಾರೆ. ಆಸಕ್ತರು ಡಾ.ಸುಂದರ ಕೇನಾಜೆ(9448951859) ಹಾಗೂ ಕುಮಾರ ಸುಬ್ರಹ್ಮಣ್ಯ ವಳಕುಂಜ(9845505543) ಇವರಲ್ಲಿ ಜೂನ್ 12ರ ಒಳಗೆ ಹೆಸರು ನೊಂದಾಯಿಸುವಂತೆ ಕೋರಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement