ರಸ್ತೆ ಗುಣಮಟ್ಟದ ಖಾತ್ರಿ ಬಗ್ಗೆ ಮಾತನಾಡಿದ್ದೇ ತಪ್ಪಾಯ್ತಾ …? ಶಾಸಕರು ಏಕೆ ಸ್ಥಳಕ್ಕೂ ಬರಲಿಲ್ಲ..!

May 16, 2019
12:00 PM

ನಿಂತಿಕಲ್ಲು : ರಸ್ತೆ ಕಾಮಗಾರಿ ನಡೆಯುತ್ತಿರುವಾಗ ಗುಣಮಟ್ಟದ ಖಾತ್ರಿ ಬಗ್ಗೆ ಮಾತನಾಡಿದ್ದಕ್ಕೆ ಕಾಮಗಾರಿ ಸದ್ಯ ನಡೆಸದೇ ಇರುವ  ಘಟನೆ ಅಲೆಕ್ಕಾಡಿ – ಎಡಮಂಗಲ ರಸ್ತೆಯಲ್ಲಿ  ನಡೆದಿದೆ. ಒಂದು ಕಡೆ ಜನರೇ ಕಾಮಗಾರಿಯ ಗುಣಮಟ್ಟ ನೋಡಿಕೊಳ್ಳಬೇಕು ಎನ್ನುವ ಸಲಹೆಯಾದರೆ ಇನ್ನೊಂದು ಕಡೆ ಕಾಮಗಾರಿಯೇ ನಿಲ್ಲಿಸಿ ಹೋಗುವ ಗುತ್ತಿಗೆದಾರರು ಇರುವಾಗ ಸುಧಾರಣೆ ಹೇಗೆ ಎಂಬ ಪ್ರಶ್ನೆ ಈಗ ಎಲ್ಲೆಡೆ ಕೇಳುತ್ತಿದೆ.

Advertisement
Advertisement

ಜಿಲ್ಲಾ ಪಂಚಾಯತ್ ರಸ್ತೆಯಾಗಿರುವ ಅಲೆಕ್ಕಾಡಿ – ಎಡಮಂಗಲ ರಸ್ತೆ ಅಭಿವೃದ್ಧಿ ಕಂಡಿರಲಿಲ್ಲ. ಅಲೆಕ್ಕಾಡಿಯಿಂದ ಎಡಮಂಗಲದ ತನಕ 8 ಕಿ.ಮಿ ರಸ್ತೆಯ ಡಾಮರು ಕಿತ್ತು ಹೋಗಿ ಸಂಚಾರ ನಡೆಸುವುದೇ ಬಲು ದುಸ್ತರವಾಗಿತ್ತು. ಹೀಗಾಗಿ ಗ್ರಾಮಸ್ಥರ ಸತತ ಪ್ರಯತ್ನದ ಫಲವಾಗಿ ಶಾಸಕರ ಶಿಫಾರಸಿನಂತೆ ಎಡಮಂಗಲದಿಂದ ಅಲೆಕ್ಕಾಡಿಯವರೆಗಿನ ಜಿಲ್ಲಾ ಪಂಚಾಯತ್ ರಸ್ತೆ ಮರು ಡಾಮರೀಕರಣ ನಡೆಯುತ್ತಿದೆ. ಆದರೆ  ಡಾಮರಿಕರಣದ ಬಗ್ಗೆ ಗ್ರಾಮಸ್ಥರು ಎರಡು ದಿನಗಳ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲವು ಕಡೆ ರೋಲ್ ಸರಿಯಾಗಿ ಆಗಿಲ್ಲ, ತೆಳ್ಳಗೆ ಇದೆ ಎಂದು ಹೇಳಿದ್ದರು. ಇದಕ್ಕೆ ಗುತ್ತಿಗೆದಾರರು ವಾದ ಮಾಡಿದಾಗ ವಿಡಿಯೋ ಮೂಲಕ ದಾಖಲಿಸಿಕೊಂಡಿದ್ದರು. ಇದರಿಂದ ಗುತ್ತಿಗೆದಾರ ಹಾಗೂ ಅವರ ಕಡೆಯವರು ಉದ್ದಟತನದಿಂದ ವರ್ತಿಸಿದ್ದು ಕಂಡುಬಂದಿದೆ ಹಾಗೂ ಆ ಬಳಿಕ ಕಾಮಗಾರಿ ನಡೆಸದೇ ತೆರಳಿದ್ದು ಕಂಡುಬಂದಿದೆ.

Advertisement

ಕಳೆದ ಮಳೆಗಾಲವೇ ಈ ರಸ್ತೆ ತೀವ್ರ ಹದಗೆಟ್ಟು ಸಂಚಾರವೇ ಅಸಾಧ್ಯವೆಂಬ ಸ್ಥಿತಿಗೆ ತಲುಪಿತ್ತು. ರಸ್ತೆಯ ದುರಸ್ಥಿಯ ಕುರಿತು ಗ್ರಾಮಸ್ಥರು ಲಿಖಿತ ಹಾಗು ಮೌಖಿಕವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯಿಸುತ್ತಲೇ ಬಂದಿದ್ದರು. ಕೊನೆಗೂ ಮರು ಡಾಮರೀಕರಣಕ್ಕೆ ಅನುದಾನ ಬಿಡುಗಡೆಗೊಂಡು  ಕಾಮಗಾರಿಯನ್ನು ಆರಂಭಿಸಲಾಗಿತ್ತು. ತರಾತುರಿಯಲ್ಲಿ ಕಾಮಗಾರಿ ಮುಗಿಸುತ್ತಿದ್ದು, ಸಮರ್ಪಕವಾಗಿ ಡಾಮರೀಕರಣ ನಡೆಯುತ್ತಿಲ್ಲ. ಹೀಗಾಗಿ ರಸ್ತೆ ಮತ್ತೆ ಇದೇ ಮಳೆಗಾಲದಲ್ಲಿ ಹದಗೆಡಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದು ಜನರ ಹಣ, ಯಾವುದೇ ಗುತ್ತಿಗೆದಾರರು ತಮ್ಮ ಸ್ವಂತ ಹಣವನ್ನು ಉಪಯೋಗ ಮಾಡುತ್ತಿಲ್ಲ ಹಾಗೂ ಕಾಮಗಾರಿಯ ಗುಣಮಟ್ಟದ ಬಗ್ಗೆ ಜನರು ಪ್ರಶ್ನಿಸುವುದರಲ್ಲೂ ತಪ್ಪಿಲ್ಲ. ಈಗಿನ ಕಾಮಗಾರಿ ನೋಡಿದರೆ ಮಳೆಗಾಲದ ಮುನ್ನವೇ ಕಿತ್ತುಹೋಗುವ ಸಾಧ್ಯತೆ ಇದೆ. ಹೀಗಾಗಿ  ಶೀಘ್ರವೇ ಗುತ್ತಿಗೆದಾರರ ಮೇಲೆ ಶಿಸ್ತು ಕ್ರಮಕೈಗೊಳ್ಳುವಂತೆ ಅಲೆಕ್ಕಾಡಿ-ಎಡಮಂಗಲದ ಸಾರ್ವಜನಿಕರು ಆಗ್ರಹಿಸಿದ್ದಾರೆ. ಯಾವುದೇ   ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರದೇ ಇದ್ದರೆ ಪ್ರತೀ ವರ್ಷವೂ ಅನುದಾನಗಳು ಲಭ್ಯವಾಗುತ್ತದೆಯೇ ? . ಹೀಗಾಗಿ ಗುಣಮಟ್ಟದ ಕಾಮಗಾರಿ ನಡೆಯದೇ ಇದ್ದರೆ ಜನರೇ ಸಂಕಷ್ಠ ಪಡಬೇಕಾಗುತ್ತದೆ. ಹೀಗಾಗಿ ಕಾಮಗಾರಿ ಗುಣಮಟ್ಟದ ಬಗ್ಗೆ ಮಾತನಾಡದೇ ಇರುವುದು ಹೇಗೆ ಎಂಬುದು ಜನರ ಪ್ರಶ್ನೆ.

 

Advertisement

ಕಡಬ ತಾಲೂಕು ಕೇಂದ್ರವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದೆ. ಹೀಗಾಗಿ ಈ ಕಾಳಜಿಯಿಂದ ಜನತೆ ಶಾಶ್ವತ ರಸ್ತೆಯಯತ್ತ ಮನಸ್ಸು ಮಾಡಿದ್ದಾರೆ. ಕಾಣಿಯೂರು, ಪುಣ್ಚತ್ತಾರು, ನಿಂತಿಕಲ್ಲು, ಬೆಳ್ಳಾರೆ ಭಾಗದ ಜನರು ಕಡಬ ಸಂಪರ್ಕಿಸಲು ಇದೇ ರಸ್ತೆಯನ್ನು ಪ್ರಧಾನವಾಗಿ ಅವಲಂಬಿಸಿದ್ದು, ನಿತ್ಯವೂ ಸಾವಿರಾರು ವಾಹನಗಳು ಓಡಾಡುವ ರಸ್ತೆ ಇದಾಗಿದೆ. 3.5 ಮೀ ಅಗಲವಿರುವ ಈ ರಸ್ತೆಯನ್ನು ವಿಸ್ತರಿಸಲು ಗ್ರಾಮಸ್ಥರು ಈ ಹಿಂದೆಯೆ ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ರಸ್ತೆಯ ಮರು ಡಾಮರೀಕರಣದ ಸಂದರ್ಭದಲ್ಲಿಯೂ ಅದನ್ನು ಈಡೇರಿಸಿಲ್ಲ. ಇದರಿಂದ ರಸ್ತೆಯ ಬದಿಗಳೆರಡರಲ್ಲಿ ಎತ್ತರದ ಜಾಗ ನಿರ್ಮಾಣವಾಗಿದ್ದು ಸರಿಯಾಗಿ ರೋಲ್ ಮಾಡಲಿಲ್ಲ ಎಂದು ಸ್ಥಳೀಯರು ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಹೀಗಿದ್ದರೂ ಸುಳ್ಯ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ ಎಂಬ ಆರೋಪ ಇದೆ.

ಈ ಬಗ್ಗೆ ಮಾಧ್ಯಮದ ಮಂದಿ  ಶಾಸಕ ಎಸ್ ಅಂಗಾರ  ಅವರ ಗಮನಕ್ಕೆ ತಂದಾಗ ” ಈ ಬಗ್ಗೆ ಗಮನಕ್ಕೆ ಬಂದಿದೆ. ಇಂಜಿನಿಯರ್ ಅವರಿಗೆ ತಿಳಿಸಲಾಗಿದೆ. ಸ್ಥಳಕ್ಕೆ ಎ ಇ ಭೇಟಿ ನೀಡಿದ್ದಾರೆ. ರಸ್ತೆಯ ದಪ್ಪ ಮುಕ್ಕಾಲು ಇಂಚು ಇರುವುದಾಗಿದೆ” ಎಂದು ಹೇಳಿದ್ದಾರೆ.

Advertisement

 

ಬಹಳ ಅಚ್ಚರಿಯ ವಿಷಯ ಎಂದರೆ ಈ ಘಟನೆ ನಡೆದ ಬಳಿಕ ಪಿ ಎಂ ಜಿ ಎಸ್ ವೈ ಇಂಜಿನಿಯರ್ ಅವರನ್ನು ನಿರಂತರವಾಗಿ ಸಂಪರ್ಕ ಮಾಡಲು ಪ್ರಯತ್ನ ಮಾಡಿದರೂ ಕರೆ ಸ್ವೀಕಾರ ಮಾಡುತ್ತಿಲ್ಲ. ಇದೇ ಇಂಜಿನಿಯರ್ ಈ ಹಿಂದೆ ಸಣ್ಣ ನಿರಾವರಿ ಇಲಾಖೆಯಲ್ಲೂ ಇದೇ ಮಾದರಿಯ ಕೆಲಸ ಮಾಡಿದ್ದರು ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಕಿಂಡಿ ಅಣೆಕಟ್ಟು ನಿರ್ಮಾಣದ ಸಂದರ್ಭವೂ ಹಲವು ಕಡೆ ಇಂತಹದ್ದೇ ಆರೋಪ ವ್ಯಕ್ತವಾಗಿತ್ತು. ಸಾರ್ವಜನಿಕ ಇಲಾಖೆಯ, ಸರಕಾರಿ ಇಲಾಖೆಯ ಅಧಿಕಾರಿಯಾಗಿ ಸಾರ್ವಜನಿಕರ ಕರೆ ಸ್ವೀಕಾರ ಮಾಡದೇ ಇರುವಂತಹ ಅಧಿಕಾರಿಗಳನ್ನು ಸುಳ್ಯ ಶಾಸಕರು ಸಹಿಸಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಈಗ ಎಲ್ಲರೂ ಕೇಳುವಂತಾಗಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ | KRS ಸಂಪೂರ್ಣ ಭರ್ತಿ ಸಾಧ್ಯತೆ
July 20, 2024
11:30 AM
by: The Rural Mirror ಸುದ್ದಿಜಾಲ
ಶಿರೂರು ಗುಡ್ಡ ಕುಸಿತ ಪ್ರಕರಣ | ನದಿಯಲ್ಲಿ ತೇಲಿ ಹೋಗಿದ್ದ ಗ್ಯಾಸ್ ಟ್ಯಾಂಕರ್‌ನಿಂದ ನೀರು, ಗಾಳಿಯಲ್ಲಿ 18 ಕ್ವಿಂಟಲ್ ಗ್ಯಾಸ್ ಹೊರಕ್ಕೆ
July 19, 2024
11:18 AM
by: The Rural Mirror ಸುದ್ದಿಜಾಲ
ಕರಾವಳಿಯಲ್ಲಿ ಮುಂದುವರಿದ ಮಳೆ | ಇನ್ನೂ ಎರಡು ದಿನ “ಮಳೆ ಎಚ್ಚರಿಕೆ” | ಕೇರಳದಲ್ಲಿ ಮಳೆ ದುರ್ಘಟನೆಗೆ 4 ಮಂದಿ ಬಲಿ | ಚಿಕ್ಕಬಳ್ಳಾಪುರದಲ್ಲಿ ಮಳೆಗಾಗಿ ಪ್ರಾರ್ಥನೆ |
July 18, 2024
8:54 PM
by: ದ ರೂರಲ್ ಮಿರರ್.ಕಾಂ
ಬೆಂಗಳೂರು ಮುಳಿಯದಲ್ಲಿ ಮುಳಿಯ ಪಾಕೋತ್ಸವ…
July 18, 2024
10:39 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror