ರಾಜೀನಾಮೆಗೂ ಚುನಾವಣಾ ಸೋಲಿಗೂ ಸಂಬಂಧವಿಲ್ಲ- ಜಯಪ್ರಕಾಶ್ ರೈ

Advertisement

ಸುಳ್ಯ: ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಕ್ಕೆ ಮತ್ತು ಚುನಾವಣಾ ಸೋಲಿಗೂ ಯಾವುದೇ ಸಂಬಂಧ ಇಲ್ಲ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯನ್. ಜಯಪ್ರಕಾಶ್ ರೈ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜೀನಾಮೆಯನ್ನು ಅಧಿಕೃತವಾಗಿ ಘೋಷಿಸಿದರು. ಮೂರು ತಿಂಗಳ ಕಾಲ ವಿದೇಶ ಪ್ರವಾಸ ಕೈಗೊಳ್ಳುವುದರಿಂದ ಇಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಬ್ಲಾಕ್ ಅಧ್ಯಕ್ಷತೆಯಂತಹ ಪ್ರಮುಖ ಮತ್ತು ಜವಾಬ್ದಾರಿಯುತ ಸ್ಥಾನವನ್ನು ಖಾಲಿ ಇಡಲು ಸಾಧ್ಯವಿಲ್ಲ. ಆದುದರಿಂದ ರಾಜಿನಾಮೆ ಸಲ್ಲಿಸಲಾಗಿದೆ‌. ಈ ಕುರಿತು ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ರಾಜಿನಾಮೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿರುವ ಊಹಾಪೋಹಗಳೆಲ್ಲವೂ ಕಪೋಲ ಕಲ್ಪಿತ. ಕಾಂಗ್ರೆಸ್‌ ನಲ್ಲಿ ಅಧ್ಯಕ್ಷರಾಗಲು ಅರ್ಹತೆ ಇರುವ ಹಲವು ಮಂದಿ ನಾಯಕರಿದ್ದಾರೆ. ರಾಜೀನಾಮೆ ಕುರಿತು ಮತ್ತು ಹೊಸ ಅಧ್ಯಕ್ಷರ ಕುರಿತು ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು. ಕಳೆದ ಎರಡು ವರ್ಷಗಳಲ್ಲಿ ಪಕ್ಷ ಸಂಘಟನೆಗಾಗಿ ಸಾಕಷ್ಟು ಕೆಲಸ ಮಾಡಿದ್ದೇವೆ. ಜಿಲ್ಲೆಯಲ್ಲಿ ಸುಳ್ಯ ಬ್ಲಾಕ್ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಚೆನ್ನಾಗಿ ಕೆಲಸ ಮಾಡಿದರೂ ಚುನಾವಣೆಯಲ್ಲಿ ಗೆಲುವು ಸಾಧ್ಯವಾಗಿಲ್ಲ. ಪುಟ್ ಬಾಲ್ ಪಂದ್ಯದಲ್ಲಿ ಚೆನ್ನಾಗಿ ಆಟ ಆಡಿದರೂ ಗೋಲ್ ಬಾರಿಸದಿದ್ದರೆ ಸೋಲುವುದು ಸಹಜ ಎಂದರು. ಸಂಘಟನಾತ್ಮಕವಾಗಿ ಪಕ್ಷ ಬೆಳೆದಿದ್ದರೂ ಚುನಾವಣಾ ಗೆಲುವಿಗೆ ಇನ್ನೂ ಕೆಲವು ಕಾಲ ತಾಳ್ಮೆಯಿಂದ ಕಾಯ ಬೇಕಾಗಿದೆ. ಈಗ ಹಳ್ಳಿಯಿಂದ ದಿಲ್ಲಿವರೆಗೂ ಹರಡಿರುವ ಮೋದಿ ಅಲೆಯಿಂದಾಗಿ ಕಾಂಗ್ರೆಸ್ ಗೆ ಸೋಲಾಗಿದೆ‌ ರಾಜಕೀಯ ಸ್ಥಿತ್ಯಂತರಗಳು ಸಾಮಾನ್ಯ ಮುಂದೆ ಬದಲಾವಣೆಗಳು ಸಂಭವಿಸುವಾಗ ಕಾಂಗ್ರೆಸ್ ಗೆ ಮತ್ತೆ ಅವಕಾಶ ಬರಲಿದೆ ಎಂದರು.

Advertisement

ಬಿಜೆಪಿ ಗೆದ್ದು ಸೋತಿದೆ..!

ನಗರ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 9-10 ಸ್ಥಾನಗಳಲ್ಲಿ ಗೆಲುವಿನ ನಿರೀಕ್ಷೆ ಇತ್ತು. ಆದರೆ ಹಲವಾರು ಕಾರಣಗಳಿಂದ ಗೆಲುವು ಸಾಧ್ಯವಾಗಿಲ್ಲ. ನ.ಪಂ.ಚುನಾವಣೆಯಲ್ಲಿ ಬಿಜೆಪಿ ಗೆದ್ದು ಸೋತಿದೆ ಎಂದ ಜಯಪ್ರಕಾಶ್ ರೈ ಕಳೆದ ಮೂರು ಬಾರಿ ಅಧಿಕಾರಕ್ಕೆ ಬಂದರೂ ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ಸಮಸ್ಯೆ, ಕಸ ವಿಲೇವಾರಿ ಸಮಸ್ಯೆ ಪರಿಹರಿಸಲು ಬಿಜೆಪಿ ಆಡಳಿತದಿಂದ ಸಾಧ್ಯವಾಗಿಲ್ಲ. ಅದಕ್ಕೆ ದೊಡ್ಡ ಮೊತ್ತದ ಅನುದಾನದ ಅಗತ್ಯವಿದೆ. ಆದುದರಿಂದ ಅದರ ಪರಿಹಾರಕ್ಕೆ ನ.ಪಂ‌.ನಿಂದ ಮಾತ್ರ ಸಾಧ್ಯವಾಗುವುದಿಲ್ಲ. ಜೊತೆಗೆ ನಗರದಲ್ಲಿ ಅಗಾಧವಾದ ಸಮಸ್ಯೆಗಳಿವೆ. ಇವುಗಳ ಪರಿಹಾರ ಮಾಡಲು ಸಾಧ್ಯವಾಗದಿದ್ದರೆ ಬಿಜೆಪಿ ಗೆದ್ದರೂ ಸೋತಂತೆ ಎಂದು ಅವರು ಬೊಟ್ಟು ಮಾಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಧರ್ಮಪಾಲ ಕೊಯಿಂಗಾಜೆ, ನಂದರಾಜ ಸಂಕೇಶ ಉಪಸ್ಥಿತರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ರಾಜೀನಾಮೆಗೂ ಚುನಾವಣಾ ಸೋಲಿಗೂ ಸಂಬಂಧವಿಲ್ಲ- ಜಯಪ್ರಕಾಶ್ ರೈ"

Leave a comment

Your email address will not be published.


*