ಸುಳ್ಯ: ದ.ಕ.ಜಿಲ್ಲಾ ಲಗೋರಿ ಅಸೋಸಿಯೇಷನ್ ವತಿಯಿಂದ ಸುಳ್ಯದಲ್ಲಿ ಎರಡು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಹೊನಲು ಬೆಳಕಿನ ಲಗೋರಿ ಪಂದ್ಯಾಟದ ಮೆರವಣಿಗೆ ನಡೆಯಿತು.
ಸುಳ್ಯ ಬಸ್ ನಿಲ್ದಾಣದ ಬಳಿಯಿಂದ ಆರಂಭಗೊಂಡು ಪಂದ್ಯಾಟ ನಡೆಯುವ ಪ.ಪೂ.ಕಾಲೇಜಿನ ಕ್ರೀಡಾಂಗಣದವರೆಗೆ ನಡೆದ ಮೆರವಣಿಯೊಂದಿಗೆ ಲಗೋರಿ ಪಂದ್ಯಟಕ್ಕೆ ಚಾಲನೆ ದೊರೆಯಿತು. ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳ ಸದಸ್ಯರು, ಲಗೋರಿ ಅಸೋಸಿಯೇಷನ್, ಸಂಘಟನಾ ಸಮಿತಿ ಪದಾಧಿಕಾರಿಗಳು, ನಿರ್ಣಾಯಕರು ಭಾಗವಹಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೇನ್ಯ ರವೀಂದ್ರನಾಥ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು. ಲಗೋರಿ ಪಂದ್ಯಾಟದ ಸಂಘಟನಾ ಸಮಿತಿಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಪ್ರಧಾನ ಸಂಯೋಜಕ ದೊಡ್ಡಣ್ಣ ಬರೆಮೇಲು, ಸಂಯೋಜಕ ದಿನೇಶ್ ಮಡಪ್ಪಾಡಿ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಲಗೋರಿ ಅಸೋಸಿಯೇಷನ್ ಉಪಾಧ್ಯಕ್ಷ ಮಾಧವ ಬಿ.ಕೆ, ಸಂತೋಷ್ ಮಡ್ತಿಲ, ಶಶಿಧರ ಎಂ.ಜೆ, ಕಿರಣ್ ಕುರುಂಜಿ ಮತ್ತಿತರರು ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel