Advertisement
ಸುಳ್ಯ: ನಗರ ಪಂಚಾಯತ್ ಬೂಡು ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ರಿಯಾಝ್ ಕಟ್ಟೆಕ್ಕಾರ್ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಮನೆ ಮನೆ ಭೇಟಿ ನೀಡಿ ಪ್ರತಿಯೊಬ್ಬ ಮತದಾರರನ್ನೂ ಭೇಟಿ ಮಾಡಿ ಮತ ಕೇಳುವುದು ಇವರ ಪ್ರಚಾರ ತಂತ್ರ. ಕಳೆದ ಒಂದು ವರ್ಷದಿಂದ ಬೂಡು ವಾರ್ಡ್ ನ ಜನರ ಪ್ರತಿಯೊಂದು ಅಗತ್ಯತೆಗಳಿಗೂ ಸ್ಪಂದಿಸುತ್ತಾ ಜನ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಆದುದರಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಟಿಕೆಟ್ ಸಿಗದಕ್ಕೆ ಬೇಷರ ಇಲ್ಲ. 13 ಸಾವಿರಕ್ಕೂ ಹೆಚ್ಚು ಮತದಾರರಿರುವ ನಗರ ಪಂಚಯತ್ ನಲ್ಲಿ 20 ಮಂದಿಗೆ ಮಾತ್ರ ಪಕ್ಷಕ್ಕೆ ಸೀಟ್ ನೀಡಲು ಸಾಧ್ಯ. ಅದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಬೂಡು ವಾರ್ಡ್ ನ ಜನರ ಒತ್ತಾಯದ ಮೇರೆಗೆ ಪಕ್ಷೇತರನಾಗಿ ಜನರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಕಳೆದ ಒಂದು ವರುಷದಿಂದ ಮಾಡಿರುವ ಜನ ಸೇವೆಯನ್ನು ಗುರುತಿಸಿ ವಾರ್ಡ್ ನ ಹಲವು ಮಂದಿ ಹಿರಿಯರು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದ್ದರು. ಹಿರಿಯರ ಮತ್ತು ವಾರ್ಡ್ ನಜನರ ಆಶೀರ್ವಾದದಿಂದ ಅಭ್ಯರ್ಥಿಯಾಗಿದ್ದೇನೆ. ಆದುದರಿಂದ ಗೆಲುವಿನ ವಿಶ್ವಾಸ ವಿದೆ ಎಂದು ‘ಸುಳ್ಯನ್ಯೂಸ್.ಕಾಂ’ ನೊಂದಿಗೆ ಮಾತನಾಡುತ್ತಾ ಅವರು ಹೇಳಿದರು. ಇಲ್ಲಿನ ಮೂಲಭೂತ ಅಗತ್ಯತೆಗಳನ್ನು ಪೂರೈಸುವುದರೊಂದಿಗೆ ಬೂಡು ವಾರ್ಡ್ ನ ಸರ್ವತೋಮುಖ ಅಭಿವೃದ್ಧಿ ತನ್ನ ಗುರಿ ಎಂದು ಅವರು ಹೇಳಿದ್ದಾರೆ.
ಸಾಮಾನ್ಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಮಧ್ಯೆ ನೇರ ಸ್ಪರ್ಧೆ ಏರ್ಪಡುತ್ತಿದ್ದ ಬೂಡು ವಾರ್ಡ್ ನಲ್ಲಿ ರಿಯಾಝ್ ಕಟ್ಟೆಕ್ಕಾರ್ ಪಕ್ಷೇತರನಾಗಿ ಎಂಟ್ರಿ ಕೊಟ್ಟಿರುವುದರಿಂದ ಈ ಬಾರಿ ತ್ರಿಕೋನ ಸ್ಪರ್ಧೆ ಯ ರಂಗು ಉಂಟಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ರಿಯಾಝ್ ಕಟ್ಟೆಕ್ಕಾರ್ ಚುನಾವಣಾ ಪ್ರಚಾರ ಆರಂಭ"