ರೈತರಿಗೂ ಇನ್ನು ಸಿಗಲಿದೆ ಪೆನ್ಷನ್ : ನಮೋ 2.0 ಸರಕಾರದಿಂದ ಕೃಷಿಗೆ ಕೊಡುಗೆ

Advertisement

ಬೆಂಗಳೂರು:  ನರೇಂದ್ರ ಮೋದಿ ಸರಕಾರದ 2 ನೇ ಅವಧಿಯ ಮೊದಲ ಸಚಿವ ಸಂಪುಟ ಸಭೆಯಲ್ಲಿ ರೈತರಿಗೆ ಕೊಡುಗೆ ನೀಡಿದೆ. ಇದು  2 ನೇ ಅವಧಿಯ 1 ನೇ ಹೆಜ್ಜೆ.

Advertisement

ಎಲ್ಲಾ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಪಿಂಚಣಿ ಯೋಜನೆ ಜಾರಿ ಮಾಡಲು ಹಾಗೂ 1 ಲಕ್ಷ ರೂ.ವರೆಗೆ ಬಡ್ಡಿರಹಿತ ಅಲ್ಪಾವಧಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಗಳನ್ನು ನೀಡಲು ಉದ್ದೇಶಿಸಲಾಗಿದೆ. ಇನ್ನು  ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ರೈತರಿಗೆ ವಾರ್ಷಿಕ 6,000 ರೂ. ನೀಡುವುದನ್ನು ಎಲ್ಲ ರೈತರಿಗೂ ವಿಸ್ತರಿಸಲಾಗಿದೆ. ಈ ಮೊದಲು ಕಿಸಾನ್ ಯೋಜನೆಯು 2 ಹೆಕ್ಟೇರ್‌ವರೆಗೆ ಭೂಮಿಯುಳ್ಳ ರೈತರಿಗೆ ಮಾತ್ರ ಅನ್ವಯವಾಗುತ್ತಿತ್ತು.ಇದರಿಂದ ದೇಶದ ಸುಮಾರು 15 ಕೋಟಿ ರೈತರಿಗೆ ಅನುಕೂಲವಾಗಲಿದ್ದು, ಒಟ್ಟು ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ ಸಹಾಯಧನ ನೀಡಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ. ಪ್ರಧಾನ ಮಂತ್ರಿ ಕಿಸಾನ್ ಪೆನ್ಷನ್ ಯೋಜನಾ ಅಡಿ 18ರಿಂದ 40 ವರ್ಷದವರೆಗಿನ ನೋಂದಾಯಿತ ಸಣ್ಣ ಹಾಗೂ ಅತಿ ಸಣ್ಣ ರೈತರು 60 ವರ್ಷ ಕ್ರಮಿಸಿದ ಬಳಿಕ ಕನಿಷ್ಠ 3 ಸಾವಿರ ರೂ. ನಿಗದಿತ ಪಿಂಚಣಿ ಪಡೆದುಕೊಳ್ಳುವ ಯೋಜನೆ ಇದಾಗಿದೆ.

Advertisement
Advertisement

ಈ ಎರಡು ಯೋಜನೆಗಳಿಂದ 26.5 ಕೋಟಿ ರೈತರಿಗೆ ಅನುಕೂಲವಾಗಲಿದೆ ಹಾಗೂ 2 ಕೋಟಿ ಅಧಿಕ ರೈತರನ್ನು ಸೇರಿಸಿಕೊಂಡು ಒಟ್ಟು 14.5 ಕೋಟಿ ಫಲಾನುಭವಿಗಳಾಗುತ್ತಾರೆ ಎಂದು ಅಂದಾಜಿಸಲಾಗಿದೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ರೈತರಿಗೂ ಇನ್ನು ಸಿಗಲಿದೆ ಪೆನ್ಷನ್ : ನಮೋ 2.0 ಸರಕಾರದಿಂದ ಕೃಷಿಗೆ ಕೊಡುಗೆ"

Leave a comment

Your email address will not be published.


*