ರೈತರಿಗೆ ಕಿಸಾನ್ ಕ್ರೆಡಿಟ್‍ಕಾರ್ಡ್ ವಿತರಣೆ

February 8, 2020
10:02 AM

ಮಂಗಳೂರು: ರೈತ ಬಾಂಧವರಿಗಾಗಿ ಕೇಂದ್ರ ಸರಕಾರ 2019ನೇ ಫೆಬ್ರವರಿ 01 ರಂದು ದೇಶದ ಆಯವ್ಯಯದಲ್ಲಿ ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆ’ಯನ್ನು ಘೋಷಣೆ ಮಾಡಿದೆ.

ಕೇಂದ್ರ ಸರಕಾರದ ಈ ಯೋಜನೆಯು ಒಂದು ವರ್ಷ ಪೊರೈಸುತ್ತಿರುವ ಈ ಸುಸಂದರ್ಭದಲ್ಲಿ, 2020ನೇ ಫೆಬ್ರವರಿ 24 ರ ಒಳಗೆ ಒಂದು ಕೋಟಿ ಕಿಸಾನ್ ಕ್ರೆಡಿಟ್‍ಕಾರ್ಡ್(ಬೆಳೆಸಾಲ)ಗಳನ್ನು ಸದರಿ ಯೋಜನೆಯ ಫಲಾನುಭವಿಗಳಿಗೆ ವಿತರಿಸಲು ಬ್ಯಾಂಕ್‍ಗಳಿಗೆ ನಿರ್ದೇಶಿಸಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿಯಲ್ಲಿ ದೇಶಾದ್ಯಂತ 9.22 ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ ಈಗಾಗಲೇ 6.76 ಕೋಟಿ ಫಲಾನುಭವಿಗಳು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ.) ಹೊಂದಿದ್ದು, 2.46 ಕೋಟಿ ಫಲಾನುಭವಿಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಬಾಕಿ ಇರುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 134165 ರೈತರು ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದು, 98988 ಫಲಾನುಭವಿಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುತ್ತಾರೆ. ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯದ ರೈತರು ತಮ್ಮ ಸೇವಾವಲಯದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಅತ್ಯಂತ ಕಡಿಮೆ ಬಡ್ಡಿ ದರದ ಈ ಬೆಳೆಸಾಲ (ಕೆ.ಸಿ.ಸಿ) ಸೌಲಭ್ಯವನ್ನು ಪಡೆಯಬಹುದಾಗಿದೆ.

ಜಿಲ್ಲೆಯ ಎಲ್ಲಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ , ನಿಯಮಾನುಸಾರ ಬೆಳೆಸಾಲ (ಕೆ.ಸಿ.ಸಿ) ವಿತರಿಸಿ ಕೇಂದ್ರ ಸರಕಾರ 2020 ನೇ ಫೆಬ್ರವರಿ 24 ರವರೆಗೆ   ನಿಗದಿಪಡಿಸಿದ ಗುರಿಸಾಧನೆಗೆ ಜಿಲ್ಲೆಯಿಂದ ಅತಿ ಹೆಚ್ಚಿನ ಕೊಡುಗೆ ನೀಡಲು ನಿರ್ದೇಶಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಇವರ ಪ್ರಕಟಣೆ ತಿಳಿಸಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ರೋಗಕ್ಕೆ “100% ಬಯೋ ಗ್ಯಾರಂಟಿ” ಔಷಧಿ? — ICAR ಸ್ಪಷ್ಟನೆ | ಇನ್ನೂ ಅಧ್ಯಯನವೇ ಆಗಿಲ್ಲ…!
March 17, 2026
7:58 PM
by: ದ ರೂರಲ್ ಮಿರರ್.ಕಾಂ
ಗಲ್ಫ್ ಯುದ್ಧದ ಪರಿಣಾಮ | ₹11.8 ಬಿಲಿಯನ್ ಭಾರತೀಯ ಕೃಷಿ ರಫ್ತು ಮಾರುಕಟ್ಟೆ ಅಪಾಯದಲ್ಲಿ
March 17, 2026
6:44 AM
by: ದ ರೂರಲ್ ಮಿರರ್.ಕಾಂ
ಮಹಿಳಾ ಕೃಷಿಕರ ಸಬಲೀಕರಣಕ್ಕೆ ಜಾಗತಿಕ ಘೋಷಣೆ : 900ಕ್ಕೂ ಹೆಚ್ಚು ಕೃಷಿ ಸಂಸ್ಥೆಗಳನ್ನು ಜೋಡಿಸುವ ರಾಷ್ಟ್ರೀಯ ಜೆಂಡರ್ ಪ್ಲಾಟ್‌ಫಾರ್ಮ್‌ ಘೋಷಣೆ
March 16, 2026
7:06 AM
by: ಮಿರರ್‌ ಡೆಸ್ಕ್
ಮುಂಗಾರು ಬೆಳೆ ಋತುವಿಗೆ ಸಕಲ ಸಿದ್ದತೆ | ದೇಶದಲ್ಲಿ ರಸಗೊಬ್ಬರ ದಾಸ್ತಾನು ದ್ವಿಗುಣ
March 15, 2026
10:00 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror