ಲಂಚ ಪ್ರಕರಣಕ್ಕೂ ಸವಣೂರು ಗ್ರಾ.ಪಂ.ಗೂ ಸಂಬಂಧವಿಲ್ಲ : ಸವಣೂರು ಗ್ರಾ.ಪಂ ತುರ್ತು ಸಭೆ

August 22, 2019
12:00 PM

ಸವಣೂರು : ಬೆಳಂದೂರು ಗ್ರಾ.ಪಂ.ನಲ್ಲಿ ನಡೆದ ಲಂಚ ಸ್ವೀಕಾರ ಪ್ರಕರಣಕ್ಕೂ ಸವಣೂರು ಗ್ರಾ.ಪಂ.ಗೂ ಯಾವುದೇ ಸಂಬಂಧವಿಲ್ಲ.ಆದರೆ ಕೆಲ ಮಾಧ್ಯಮಗಳಲ್ಲಿ ಸವಣೂರು ಗ್ರಾ.ಪಂ.ನಲ್ಲಿ ಲಂಚಾವತರ ಎಂದು ಪ್ರಕಟಿಸಿದ್ದಾರೆ.ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಸವಣೂರು ಗ್ರಾ.ಪಂ.ನ ತುರ್ತು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

Advertisement
Advertisement
Advertisement

ಮಾಧ್ಯಮಗಳಲ್ಲಿ ಸವಣೂರು ಗ್ರಾ.ಪಂ.ನ ಹೆಸರನ್ನು ಸೇರಿಸಿಕೊಂಡು ಗ್ರಾ.ಪಂ.ಗೆ ಕೆಟ್ಟ ಹೆಸರು ತರುವ ಪ್ರಯತ್ನವಾಗುತ್ತಿದೆ ಎಂದು ಸವಣೂರು ಗ್ರಾ.ಪಂ.ನಲ್ಲಿ ಆ.21 ರಂದು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದ ಸದಸ್ಯರು ಇದನ್ನು ಖಂಡಿಸಲಾಗುವುದು ಎಂದರು.

Advertisement

ನನಗೂ ಪ್ರಕರಣಕ್ಕೂ ಸಂಬಂಧವಿಲ್ಲ : ಎಂ.ಎ.ರಫೀಕ್
ಬೆಳಂದೂರುನಲ್ಲಿ ನಡೆದ ಘಟನೆಗೂ ಸವಣೂರು ಗ್ರಾ.ಪಂ.ವ್ಯಾಪ್ತಿಯ ಕೆಲ ಘಟನೆಗಳಿಗೂ ಸಂಬಂಧವಿದೆ ಎಂಬ ಸಂಶಯವಿದೆ. ಪಾಲ್ತಾಡಿ ಗ್ರಾಮದ ಪಂಚೋಡಿ ಎಂಬಲ್ಲಿ ಸರಕಾರಿ ಜಾಗ ಅತಿಕ್ರಮಣ ವಿಚಾರಕ್ಕೆ ಗ್ರಾ.ಪಂ.ನಿಂದ ಅಗಳು ನಿರ್ಮಾಣ ಮಾಡಿದರಿಂದ ಈ ರೀತಿ ಮಾಡಿರುವ ಕುರಿತು ಸಂಶಯವಿದೆ.ಈ ವಿಚಾರಕ್ಕೆ ಕುರಿತಂತೆ ಸವಣೂರು ಗ್ರಾ.ಪಂ.ನ ಸದಸ್ಯರು ಪಿಡಿಓ ಅವರಿಗೆ ನಿರಂತರ ಕರೆಮಾಡಿರುವುದರಿಂದ ಮತ್ತು ಕಚೇರಿಗೆ ಬಂದು ಪಿಡಿಓ ಅವರಿಗೆ ಚಾಲೆಂಜ್ ಮಾಡಿರುವುದರಿಂದ ಈ ಸಂಶಯ ಇದೆ ಎಂದು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಎಂ.ಎ.ರಫೀಕ್ ಅವರು ನಾನು ಪಾಲ್ತಾಡಿಯ ಸರಕಾರಿ ಜಾಗ ಅತಿಕ್ರಮಣ ವಿಚಾರಕ್ಕಾಗಿ ಪಿಡಿಓ ಅವರಲ್ಲಿ ಮಾಹಿತಿ ಕೇಳಿದ್ದೇನೆ.ಜತೆಗೆ ಸವಣೂರು ಗ್ರಾ.ಪಂ,ವ್ಯಾಪ್ತಿಯ ಸರಕಾರಿ ಜಾಗಗಳ ಕುರಿತು ಮಾಹಿತಿ ಕೇಳಿದ್ದೇನೆ.ಈ ಸಂದರ್ಭ ಪಿಡಿಓ ಅವರೇ ನನ್ನನ್ನು ನೀವು ಡಬಲ್ ಗೇಮ್ ಆಡುತ್ತಿರೀ ಎಂದಾಗ ನಾನೂ ಏರುಧ್ವನಿಯಲ್ಲಿ ಮಾತಾಡಿದ್ದೇನೆ ಹೊರತು ಬೆಳಂದೂರು ಗ್ರಾ.ಪಂ.ನಲ್ಲಿ ಲಂಚ ಸ್ವೀಕರಿಸಿ ಸಿಕ್ಕಿ ಬಿದ್ದ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ.ಈ ಕುರಿತು ತಾನೂ ಯಾವುದೇ ಕಾರಣಿಕ ಪುಣ್ಯಕ್ಷೇತ್ರದಲ್ಲೂ ಹೇಳಲು ಸಿದ್ದ ಎಂದರು.

ನೀರಿನ ಕಾರ್ಖಾನೆ ಆರಂಭಕ್ಕೆ ಲಂಚ ಪ್ರಕರಣ ತಳುಕು:
ಬೆಳಂದೂರು ಗ್ರಾ.ಪಂ.ನಲ್ಲಿ ಪ್ರಭಾರ ಅಭಿವೃದ್ದಿ ಅಧಿಕಾರಿಯಾಗಿದ್ದ ಸವಣೂರು ಗ್ರಾ.ಪಂ.ಅಭಿವೃದ್ಧಿಕಾರಿಯವರನ್ನು ಸವಣೂರು ಗ್ರಾಮದ ಕಾಸಿಲೆ ಎಂಬಲ್ಲಿ ನಿರ್ಮಾಣವಾಗಿರುವ ಕೈರಳಿ ಮಿನರಲ್ ವಾಟರ್ ಆ್ಯಂಡ್ ಬೇವರೇಜ್ ಸಂಸ್ಥೆಗೆ ಅನುಮತಿ ನೀಡುವ ಕುರಿತು ಒತ್ತಡ ಸೃಷ್ಟಿಗೆ ಬೆಳಂದೂರು ಗ್ರಾ.ಪಂ.ನ ಪ್ರಕರಣ ಸೃಷ್ಟಿಸಿದ್ದಾರೆ ಎಂದು ಸದಸ್ಯ ಸತೀಶ್ ಅಂಗಡಿಮೂಲೆ ಅವರು ಸಂಶಯ ವ್ಯಕ್ತಪಡಿಸಿದರು.
ಲಂಚ ಪ್ರಕರಣದ ಬಳಿಕ ನಡೆದ ಬೆಳವಣಿಗೆಯಲ್ಲಿ ಬೆಳಂದೂರು ಗ್ರಾ.ಪಂ.ನಲ್ಲಿ ಲಂಚ ನೀಡಿರುವ ಪ್ರಕರಣದ ದೂರುದಾರರಾದ ಬೆಳಂದೂರು ಗ್ರಾಮದ ಅಮೈ ನಿವಾಸಿಗಳಾದ ಮುನೀರ್ ಎಚ್ ಮುಕ್ಕೂರು ಮತ್ತು ಮಜೀದ್ ಅವರು ಖುದ್ದಾಗಿ ಸವಣೂರು ಗ್ರಾ.ಪಂ.ಸಿಬಂದಿಗಳಾದ ಪ್ರಮೋದ್ ಕುಮಾರ್ ರೈ ಹಾಗೂ ದಯಾನಂದ ಅವರಲ್ಲಿ ಮಾತನಾಡಿ,ಕಾಸಿಲೆಯಲ್ಲಿನ ನೀರಿನ ಕಾರ್ಖಾನೆಗೆ ತಾವು ಅನುಮತಿ ನೀಡಿದರೆ ಮತ್ತು ಕಾರ್ಖಾನೆ ವಿರುದ್ದ ದೂರು ನೀಡಿರುವ ಪ್ರಕಾಶ್‍ಚಂದ್ರ ರೈ ಮುಗೇರುಗುತ್ತು ಅವರಲ್ಲಿ ದೂರು ಹಿಂದಕ್ಕೆ ಪಡೆದುಕೊಳ್ಳುವಂತೆ ಹಾಗೂ ಮುಂದೆ ಯಾವುದೇ ದೂರು ನೀಡುವುದಿಲ್ಲ ಎಂದು ಬರೆದುಕೊಟ್ಟರೆ ಪ್ರಕರಣ ಹಿಂದಕ್ಕೆ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ ಎಂದು ಸಿಬಂದಿಗಳಾದ ಪ್ರಮೋದ್ ಕುಮಾರ್ ರೈ ಮತ್ತು ದಯಾನಂದ ಅವರು ಸಭೆಯಲ್ಲಿ ತಿಳಿಸಿದರು.

Advertisement

ಸವಣೂರಿನಲ್ಲಿ ಭ್ರಷ್ಠಾಚಾರ ನಡೆದಿಲ್ಲ : ಜನತೆಗೆ ಸತ್ಯಾಂಶ ಬೇಕು
ಘಟನೆ ಕುರಿತು ಸಾರ್ವಜನಿಕರು ಗ್ರಾ.ಪಂ.ಸದಸ್ಯರಾದ ನಮ್ಮನ್ನು ಸಂಶಯದಿಂದ ನೋಡುವಂತಾಗಿದೆ.ಯಾವುದೋ ಕಾರಣಕ್ಕಾಗಿ ಹಣ ನೀಡಿ ವಿಡಿಯೋ ಮಾಡಿ ಸವಣೂರು ಗ್ರಾ.ಪಂ.ನ ಹೆಸರನ್ನು ತಳುಕು ಹಾಕಿರುವವರ ವಿರುದ್ದ ದೂರು ನೀಡಬೇಕು.ಈ ಕುರಿತು ಕೆಲ ದೃಶ್ಯ ಮಾಧ್ಯಮದಲ್ಲೂ ಸವಣೂರಿನಲ್ಲಿ ನಡೆದ ಘಟನೇ ಎಂದೇ ಬಿಂಬಿಸಲಾಗಿದೆ.ಇದರಿಂದ ಏನಾದರೂ ತೊಂದರೆ ಉಂಟಾದರೆ ವಿಡಿಯೋ ಚಿತ್ರೀಕರಣ ಮಾಡಿದವರೇ ನೇರ ಹೊಣೆಗಾರರು.ಇದರಿಂದಾಗಿ ಸವಣೂರು ಗ್ರಾ.ಪಂ.ಗೆ ಅವಮಾನ ಮಾಡಲಾಗಿದೆ.ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ವಾರ್ತಾ ಇಲಾಖೆಗೆ ದೂರು ನೀಡುವಂತೆ ನಿರ್ಣಯ ತೆಗೆದುಕೊಳ್ಳಬೇಕು ಸದಸ್ಯರಾದ ಗಿರಿಶಂಕರ ಸುಲಾಯ,ಅಬ್ದುಲ್ ರಝಾಕ್ ಹೇಳಿದರು.ಈ ಕುರಿತು ತಾ.ಪಂ.ಇಓ ಅವರಿಗೆ ನೀಡಿರುವ ದೂರಿನಲ್ಲಿ ಯಾವ ರೀತಿ ಇದೆ ಎಂಬುದನ್ನೂ ತಿಳಿಯಬೇಕು ಎಂ.ಎ.ರಫೀಕ್‍ಹೇಳಿದರು. ಸದಸ್ಯರಾದ ಸತೀಶ್ ಬಲ್ಯಾಯ ಅವರೂ ಧ್ವನಿಗೂಡಿಸಿದರು.

ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ರವಿಕುಮಾರ್,ಸದಸ್ಯರಾದ ಸದಸ್ಯರಾದ ಸತೀಶ್ ಬಲ್ಯಾಯ, ಪ್ರಕಾಶ್, ಮೀನಾಕ್ಷಿ ಬಂಬಿಲ , ಅಬ್ದುಲ್ ರಝಾಕ್ ಕೆನರಾ,ಗಿರಿಶಂಕರ ಸುಲಾಯ,ಎಂ.ಎ.ರಫೀಕ್,ಚೆನ್ನು ಮಾಂತೂರು,ಸುಧಾ ನಿಡ್ವಣ್ಣಾಯ,ನಾಗೇಶ್ ಓಡಂತರ್ಯ,ಪ್ರಕಾಶ್ ಕುದ್ಮನಮಜಲು,ಜಯರಾಮ ರೈ ಬಿ.ಎನ್,ರಾಜೀವಿ ವಿ.ಶೆಟ್ಟಿ,ಗಾಯತ್ರಿ ಬರೆಮೇಲು,ಮೀನಾಕ್ಷಿ ಬಂಬಿಲ,ದಿವಾಕರ ಬಂಗೇರ ಬೊಳಿಯಾಲ,ವೇದಾವತಿ ಅಂಜಯ,ವಸಂತಿ ಬಸ್ತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?
November 24, 2024
7:09 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ
ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
November 23, 2024
6:21 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror