ಲಾಕ್ಡೌನ್ 4.0 ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ | ಮೇ.18 ಕ್ಕೆ ಮೊದಲು ಹೊಸ ಮಾರ್ಗಸೂಚಿ | 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ಘೋಷಣೆ |

May 12, 2020
8:45 PM

ನವದೆಹಲಿ: ಭಾರತದಲ್ಲಿ ಲಾಕ್ಡೌನ್ 4.0 ಪಕ್ಕಾ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಆದರೆ,   ಹೊಸ ರೂಪು ರೇಷೆಗಳಿಂದ ಸುಧಾರಿತವಾಗಿರಲಿದೆ  ಎಂದು ತಿಳಿಸಿದ್ದಾರೆ. ಮೇ.18 ಕ್ಕೂ ಮೊದಲು ಹೊಸ ಮಾರ್ಗಸೂಚಿಗಳನ್ನು ಘೋಷಿಸುವುದಾಗಿ ಘೋಷಣೆ ಮಾಡಿದ್ದಾರೆ.

Advertisement

ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕೊರೊನಾ ವಿರುದ್ಧ ಸಕಾರಾತ್ಮಕವಾಗಿ ಹೋರಾಡಿದಲ್ಲಿ ಮಾತ್ರ ಕೊರೊನಾ ವೈರಸ್ ವಿರುದ್ಧ ಜಯ ಗಳಿಸಲು ಸಾಧ್ಯವಾಗುತ್ತದೆ. ಕೊರೊನಾ ವೈರಸ್ ವಿರುದ್ಧ ಹೋರಾಡಲು ಹಲವು ರಾಷ್ಟ್ರಗಳು ವಿಫಲವಾಗಿದೆ, ಭಾರತವು ಎಲ್ಲರ ಸಹಕಾರದಿಂದ ಇದುವರೆಗೆ ಯಶಸ್ಸು ಕಂಡಿದೆ ಎಂದ ಪ್ರಧಾನಿಗಳು  ದೇಶದ ಶ್ರಮಿಕರು, ರೈತರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರಿಗಾಗಿ  20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ದೇಶದ ಜಿಡಿಪಿಯ ಶೇ.10ರಷ್ಟು ಅನುದಾನ ಇದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.  ಭಾರತದಲ್ಲಿ ಘೋಷಣೆಯಾಗಿರುವ ಆರ್ಥಿಕ ಪ್ಯಾಕೇಜ್ ಮುಂದಿನ ದಿನಗಳಲ್ಲಿ ಎಲ್ಲ ವಲಯಗಳಿಗೆ ಪೂರಕವಾಗಲಿದ್ದು ,  ಜನ್ ಧನ್, ಆಧಾರ್ ಹಾಗೂ ಮೊಬೈಲ್ ಮೂಲಕ ನೇರವಾಗಿ ಜನರ ಖಾತೆಗೆ ಹಣ ಬೀಳಲಿದೆ ಎಂದರು. ಸ್ವದೇಶಿ ವಸ್ತುಗಳ ಉತ್ಪಾದನೆ ಪೂರೈಕೆಗೆ ಆರ್ಥಿಕ ಪ್ಯಾಕೇಜ್ ನಲ್ಲಿ ಒತ್ತು ನೀಡಲಿದೆ ಎಂದರು.

ಕೊರೊನಾ ವೈರಸ್ ಬಹಳ ಸಮಯದವರೆಗೆ ಇರುತ್ತದೆ, ಅದು ನಮ್ಮ ಜೀವನದ ಭಾಗವಾಗಲಿದೆ ಎಂದು  ವಿಜ್ಞಾನಿಗಳು ಹೇಳುತ್ತಾರೆ. ಆದರೆ ನಮ್ಮ ಜೀವನವು ಕೊರೊನಾ ಸುತ್ತಲೂ ಸೀಮಿತವಾಗಿರಲು ಸಾಧ್ಯವಿಲ್ಲ. ನಾವು, ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಂಡರೆ  ನಮ್ಮ ಮೇಲೆ ಪರಿಣಾಮ ಬೀರುವುದು  ದೂರ ಮಾಡಬಹುದು. ಆದ್ದರಿಂದ ಲಾಕ್ಡೌನ್ 4 ಹೊಸ ನಿಯಮಗಳೊಂದಿಗೆ ಹೊಸ ರೂಪದಲ್ಲಿರುತ್ತದೆ ಎಂದರು.

ಸ್ಥಳೀಯ ವ್ಯವಹಾರ ಉತ್ತೇಜಿಸಲು ಕರೆ :

ಭಾರತೀಯರು ಸ್ಥಳೀಯ ವ್ಯವಹಾರಗಳಿಗೆ ಉತ್ತೇಜನ ನೀಡಬೇಕು ಎಂದು ಪ್ರಧಾನಿಗಳು ಕರೆ ನೀಡಿದ್ದಾರೆ.  
“Indians must be vocal for local ” ಎಂಬುದು ಮಂತ್ರವಾಗಿರಲಿ ಎಂಬುದನ್ನು  ಒತ್ತಿ ಹೇಳಿದ್ದಾರೆ. ನಾವು ನಮ್ಮ ಜೀವನದ ಮಂತ್ರವನ್ನು ‘ಸ್ಥಳೀಯ’ವನ್ನಾಗಿ ಮಾಡಬೇಕು ಎಂದು ಸಮಯವು ನಮಗೆ ಕಲಿಸಿದೆ. ಇಂದು ಇರುವ ಜಾಗತಿಕ ಬ್ರ್ಯಾಂಡ್‌ಗಳು ಒಂದು ಕಾಲದಲ್ಲಿ ಸ್ಥಳೀಯವಾಗಿದ್ದವು ಆದರೆ ಅಲ್ಲಿನ ಜನರು ಅವರನ್ನು ಬೆಂಬಲಿಸಲು ಪ್ರಾರಂಭಿಸಿದಾಗ ಅವರು ಜಾಗತಿಕರಾದರು. ಅದಕ್ಕಾಗಿಯೇ ಇಂದಿನಿಂದಲೇ  ಪ್ರತಿಯೊಬ್ಬ ಭಾರತೀಯರು ನಮ್ಮ ಸ್ಥಳೀಯರಿಗೆ ಧ್ವನಿಯಾಗಬೇಕು ಎಂದರು.

Advertisement
Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರಕಲಾ ಪ್ರದರ್ಶನ | ಐದು ಜನರ ಕಲಾವಿದರ ಕಲಾಕೃತಿಗಳ ಅನಾವರಣ
July 2, 2025
9:53 PM
by: The Rural Mirror ಸುದ್ದಿಜಾಲ
ಹಾಸನದಲ್ಲಿ ಹೃದಯಾಘಾತ ಪ್ರಕರಣ | ಕೋವಿಡ್ ಲಸಿಕೆ ಮತ್ತು ಹಠಾತ್ ಸಾವುಗಳಿಗೆ ಯಾವುದೇ ಸಂಬಂಧವಿಲ್ಲ
July 2, 2025
9:36 PM
by: The Rural Mirror ಸುದ್ದಿಜಾಲ
ದೇಶದಾದ್ಯಂತ ಹೆಚ್ಚಿನ ಭಾಗಗಳಲ್ಲಿ ಜುಲೈನಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆ ಸಾಧ್ಯತೆ
July 2, 2025
7:17 AM
by: The Rural Mirror ಸುದ್ದಿಜಾಲ
ಚಿಕ್ಕಬಳ್ಳಾಪುರದ  ಗುಡಿಬಂಡೆಯಲ್ಲಿ ಚಿರತೆ ಸೆರೆ ಹಿಡಿದ ಗ್ರಾಮಸ್ಥರು
July 1, 2025
10:03 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group