ವರ್ಗಾವಣೆಗೊಂಡ ತಹಶೀಲ್ದಾರ್‌ ಎನ್.ಎ.ಕುಂಞಿ ಅಹಮ್ಮದ್ ಗೆ ನ.ಪಂ.ನಲ್ಲಿ ಬೀಳ್ಕೊಡುಗೆ

July 24, 2019
10:00 PM

ಸುಳ್ಯ: ಸುಳ್ಯ ತಹಶೀಲ್ದಾರ್ ಕುಂಞಿ ಆಹಮ್ಮದ್ ಅವರಿಗೆ ವರ್ಗಾವಣೆಯಾಗಿರುವ ಹಿನ್ನಲೆಯಲ್ಲಿ ಸುಳ್ಯ ನ.ಪಂ. ಹಾಗೂ ಸ್ವಚ್ಛ ನಗರ ಸುಳ್ಯ ತಂಡದ ವತಿಯಿಂದ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಯಿತು.

Advertisement
Advertisement
Advertisement
Advertisement

ಜನರ ಕಷ್ಟಗಳಿಗೆ ಸಾಧ್ಯವಾದಷ್ಟು ಸ್ಪಂದಿಸಿದ್ದೇನೆ. ವರ್ಗಾವಣೆಯ ಬಳಿಕ ಜನರ ಪ್ರತಿಕ್ರಿಯೆ ಕಂಡು ವಿಸ್ಮಯಗೊಂಡಿದ್ದೇನೆ. ಸಾವಿರಾರು ಜನ ಫೋನ್ ಮಾಡಿದ್ದಾರೆ. ತಾಯಂದಿರು, ಸಹೋದರಿಯರು ಸಂದೇಶ ಕಳುಹಿಸಿದ್ದಾರೆ. ಸುಳ್ಯದಲ್ಲಿದ್ದಷ್ಟೂ ಸಮಯ ಸಮರ್ಪಣ ಭಾವದಿಂದ ಕೆಲಸ ಮಾಡಿದ ತೃಪ್ತಿ ನನಗಿದೆ. ಪ್ರತಿದಿನವೂ ಎಷ್ಟೇ ಜನ ಬಂದರೂ ಅವರೊಂದಿಗೆ ಮಾತನಾಡಿದ್ದೇನೆ. ನಾನಿರೋದೆ ಹೀಗೆ, ಇದೇ ನನ್ನ ಶೈಲಿ’ ಎಂದು ಕುಂಞಿ ಅಹಮ್ಮದ್ ಹೇಳಿದರು. ಸುಳ್ಯ ನಗರದ ಆಡಳಿತಾಧಿಕಾರಿಯಾಗಿ ಅನೇಕ ಯೋಜನೆಗಳಿಗೆ ಪ್ರಯತ್ನಿಸಿದ್ದೇನೆ. ಶಾಶ್ವತ ಕುಡಿಯುವ ನೀರಿನ ಯೋಜನೆ, ಕುಡಿಯುವ ನೀರಿನ ಘಟಕ, ಸುಸಜ್ಜಿತ ಮಾಂಸ ಮಾರುಕಟ್ಟೆ ಸಂಕೀರ್ಣ, ಅಂಬೇಡ್ಕರ್ ಪುತ್ಥಳಿ ಸೇರಿದಂತೆ ಯೋಜನೆಗಳು ಸಿದ್ಧವಾಗಿದೆ. ಮುಂದಿನ ಆಡಳಿತದವರು ಇದಕ್ಕೆ ಪ್ರಯತ್ನ ಪಡಬೇಕು. ಇನ್ನೂ ಸ್ವಲ್ಪ ಸಮಯ ಸುಳ್ಯದಲ್ಲಿದ್ದಿದ್ದರೆ ಸುಳ್ಯದ ಚಿತ್ರಣವನ್ನೆ ಬದಲಿಸಬಹುದಿತ್ತು ಎಂದು ಹೇಳಿದರು.

Advertisement

ಸುಳ್ಯ ನ.ಪಂ. ಮುಖ್ಯಾಧಿಕಾರಿ ಮತ್ತಡಿ, ನ.ಪಂ. ಸದಸ್ಯರಾದ ಎಂ. ವೆಂಕಪ್ಪ ಗೌಡ, ವಿನಯ ಕುಮಾರ್ ಕಂದಡ್ಕ, ಸರೋಜಿನಿ ಪೆಲತ್ತಡ್ಕ, ಸ್ವಚ್ಛ ನಗರ ತಂಡದ ಪಿ.ಬಿ. ಸುಧಾಕರ್ ರೈ, ವಿನೋದ್ ಲಸ್ರಾದೊ, ನ.ಪಂ. ಇಂಜಿನಿಯರ್ ಶಿವಕುಮಾರ್, ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ, ನ.ಪಂ. ಉದ್ಯೋಗಿ ಸುದೇವ್ ಜಯನಗರ ಮೊದಲಾದವರು ಮಾತನಾಡಿದರು.

ಆರೋಗ್ಯಾಧಿಕಾರಿ ರವಿಕೃಷ್ಣ ಸ್ವಾಗತಿಸಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ತಿಮ್ಮಪ್ಪ ವಂದಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ
February 25, 2025
7:20 AM
by: ದ ರೂರಲ್ ಮಿರರ್.ಕಾಂ
ಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ
February 25, 2025
7:10 AM
by: The Rural Mirror ಸುದ್ದಿಜಾಲ
ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು
February 25, 2025
7:05 AM
by: The Rural Mirror ಸುದ್ದಿಜಾಲ
ಏರುತ್ತಿರುವ ತಾಪಮಾನ | 2030 ರ ವೇಳೆಗೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ | ಕೃಷಿ ಸಾಲ ಮರುಪಾವತಿ ಮೇಲೆ ಹೊಡೆತ..? |
February 24, 2025
10:54 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror