ವರ್ಷಕ್ಕೆ 10 ಸಾವಿರ ಜನರನ್ನು ಮದ್ಯ ವ್ಯಸನ ಮುಕ್ತರನ್ನಾಗಿಸುತ್ತಿದೆ ಮದ್ಯವರ್ಜನ ಶಿಬಿರ

September 14, 2019
6:17 PM

ಧರ್ಮಸ್ಥಳ: ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ  ಮದ್ಯ ವ್ಯಸನ ಮುಕ್ತ ಸಾಧಕರ ಸಮಾವೇಶ ನಡೆಯಿತು.

Advertisement
Advertisement

ಸಮಾವೇಶವನ್ನು ಉದ್ಘಾಟಿಸಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ,  ರಾಜ್ಯದಲ್ಲಿ 10,700 ಬಾರ್ ಗಳಿದ್ದು ಸರಕಾರಕ್ಕೆ ವಾರ್ಷಿಕ ಹದಿನೆಂಟು ಸಾವಿರ ಕೋಟಿ ರೂ. ಆದಾಯ ಬರುತ್ತದೆ.ಆದರೆ, ಮದ್ಯ ವ್ಯಸನಿಗಳು ಮಾಡುವ ಅನಾಹುತ, ಗೊಂದಲ, ಸಾಮಾಜಿಕ ಸಮಸ್ಯೆಗಳನ್ನು ತಡೆಗಟ್ಟಲು ಇದಕ್ಕಿಂತ ಶೇ. ಹತ್ತರಷ್ಟು ಹೆಚ್ಚು ವೆಚ್ಚವಾಗುತ್ತಿದೆ. ಆದುದರಿಂದ ಹೊಸ ಬಾರ್ ಗಳಿಗೆ ಪರವಾನಿಗೆ ನೀಡುವಾಗಆತ್ಮಾವಲೋಕನ ಮಾಡಬೇಕಾದ ಅನಿವಾರ್ಯತೆ ಎಂದರು. ಮದ್ಯಪಾನ ಸಂಯಮ ಮಂಡಳಿ ಮೂಲಕ ಸರಕಾರವು ಮದ್ಯ ವ್ಯಸನಿಗಳಿಂದ ಆಗುವ ಹಾನಿ ಹಾಗೂ ಗೊಂದಲದ ಸಮಸ್ಯೆ ನಿವಾರಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ.ಆದರೆ ಧರ್ಮಸ್ಥಳದ ಆಶ್ರಯದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೇತೃತ್ವದಲ್ಲಿ ಮದ್ಯ ವರ್ಜನ ಶಿಬಿರಗಳ ಮೂಲಕ ಮಾನಸಿಕ ಪರಿವರ್ತನೆ ಮೂಲಕ ಮದ್ಯ ವ್ಯಸನಿಗಳನ್ನು ಪಾನ ಮುಕ್ತರಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವಕಾಯಕ ಶ್ಲಾಘನೀಯವಾಗಿದೆಎಂದು ಹೇಳಿ ಸರ್ಕಾರದ ಪರವಾಗಿ ಸಚಿವರು ಹೆಗ್ಗಡೆಯವರನ್ನು ಅಭಿನಂದಿಸಿದರು.

ವ್ಯಸನಮುಕ್ತರ ಪರವಾಗಿ ಬೈಂದೂರಿನ ಶೇಖರ ಶೆಟ್ಟಿ ಮತ್ತು ನೇತ್ರಾವತಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

 

Advertisement

ಹೇಮಾವತಿ ವೀ. ಹೆಗ್ಗಡೆಯವರು ಮಾತನಾಡಿ, ಮದ್ಯ ವ್ಯಸನಿಗಳು ಬದುಕಿದ್ದರೂ ಸತ್ತ ಹಾಗೆ. ಕುಟುಂಬದಲ್ಲಿ, ಸಮಾಜದಲ್ಲಿ ಅವಮಾನ, ಅಪಹಾಸ್ಯ, ಕೀಳರಿಮೆಗೆ ಒಳಗಾಗುತ್ತಾರೆ.ವ್ಯಸನಮುಕ್ತರಾದವರು ದ್ವಿಜರಾಗಿ ಮರುಜನ್ಮ ಪಡೆದಿದ್ದುತಮ್ಮ ಸಂಕಲ್ಪಕ್ಕೆ ವಿಕಲ್ಪ ಬಾರದಂತೆ ಎಚ್ಚರಿಕೆಯಿಂದ ಸಾರ್ಥಕಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

ಕರ್ನಾಟಕರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ರೋಹಿಣಿ, ಕೆ.ಮಾತನಾಡಿ, ಚಟ್ಟಕ್ಕೆಏರಿಸುವ ಚಟಗಳುಯಾರಿಗೂ ಬೇಡ.ವ್ಯಸನ ಮುಕ್ತರು ಪತ್ನಿ, ಮಕ್ಕಳು ಹಾಗೂ ಕುಟುಂಬದವರೊಂದಿಗೆ ಶಾಂತಿ, ನೆಮ್ಮದಿಯಜೀವನ ನಡೆಸಬೇಕುಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮದ್ಯಪಾನವೇ ಅತಿ ಹೆಚ್ಚಿನ ಅಪಘಾತಗಳಿಗೆ ಕಾರಣವಾಗಿದೆ.ಮದ್ಯವ್ಯಸನಿಗಳು ಪಾಪಿಗಳಲ್ಲ, ಮೋಸ ಮಾಡುವವರಲ್ಲ. ವ್ಯಸನ ಮುಕ್ತರಾದವರು ಧರ್ಮಸ್ಥಳದಲ್ಲಿ ಕುಟುಂಬ ಸಮೇತರಾಗಿ ದೇವರದರ್ಶನ ಪಡೆದು ಶುದ್ಧೀಕರಣಗೊಂಡು ಪವಿತ್ರಾತ್ಮರಾಗಿದ್ದೀರಿ.ದೃಢಸಂಕಲ್ಪದಿಂದ ಮತ್ತೆ ಎಂದೂ ಮದ್ಯ ವ್ಯಸನಕ್ಕೆ ಬಲಿಯಾಗದೆ ಇತರ ವ್ಯಸನಿಗಳನ್ನೂ ಪರಿವರ್ತನೆ ಮಾಡಿ ಸಾರ್ಥಕಜೀವನ ಮಾಡುವಂತೆ ಪ್ರೇರಣೆ ನೀಡಬೇಕು. ಮದ್ಯಪಾನದಿಂದ ವ್ಯಕ್ತಿತ್ವ ನಾಶವಾಗುತ್ತದೆ.ವ್ಯಸನ ಮುಕ್ತರಾದಾಗ ಆಯುಷ್ಯ, ಆರೋಗ್ಯ ಮತ್ತು ಸಂಪತ್ತು ವೃದ್ಧಿಯಾಗುತ್ತದೆ.ಸಮಾಜದಲ್ಲಿಗೌರವ ಸಿಗುತ್ತದೆ.ಸಾಂಸಾರಿಕ ನೆಮ್ಮದಿಯೊಂದಿಗೆ ಪರಸ್ಪರ ಪ್ರೀತಿ-ವಿಶ್ವಾಸದಿಂದ ಸೌಹಾರ್ದಯುತಕೌಟುಂಬಿಕಜೀವನ ನಡೆಸಬೇಕುಎಂದುಅವರು ಸಲಹೆ ನೀಡಿದರು.

ರಾಜ್ಯದ 38 ತಾಲೂಕುಗಳಿಂದ 3,559 ಮದ್ಯವ್ಯಸನ ಮುಕ್ತರು ಸಮಾವೇಶದಲ್ಲಿ ಭಾಗವಹಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಕಾರ್ಯನಿರ್ವಾಹಕ ನಿರ್ದೇಶಕಡಾ.ಎಲ್.ಎಚ್.ಮಂಜುನಾಥ್, ಜನಜಾಗೃತಿ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷರಾದ ದೇವದಾಸ್ ಹೆಬ್ಬಾರ್, ತಾಲೂಕು ಅಧ್ಯಕ್ಷರಾದ ಕೆ.ಪ್ರತಾಪಸಿಂಹ ನಾಯಕ್, ಶಾರದಾರೈ, ವಸಂತ ಸಾಲ್ಯಾನ್ ಉಪಸ್ಥಿತರಿದ್ದರು.

ವಿವೇಕ್ ವಿ.ಪಾೈಸ್ ಸ್ವಾಗತಿಸಿದರು.ಬೆಂಗಳೂರಿನ ವಿ.ರಾಮಸ್ವಾಮಿ ಧನ್ಯವಾದವಿತ್ತರು. ಯೋಜನಾಧಿಕಾರಿಗಳಾದ ಚೆನ್ನಪ್ಪಗೌಡ ಮತ್ತುಗಣೇಶ್ ಪಿ.ಆಚಾರ್ಯಕಾರ್ಯಕ್ರಮ ನಿರ್ವಹಿಸಿದರು.

Advertisement

 

Advertisement

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆಪ್‌ನಲ್ಲಿ ವಿವರ ದಾಖಲಿಸಲು ರೈತರಿಗೆ ಮನವಿ
June 28, 2025
9:16 PM
by: The Rural Mirror ಸುದ್ದಿಜಾಲ
ನಾರಾಯಣಪುರ ಅಣೆಕಟ್ಟೆಯ ನೀರಿನ ಮಟ್ಟ ಹೆಚ್ಚಳ | ನದಿ ಪಾತ್ರದ ಜನರಿಗೆ ಜಾಗ್ರತೆಯಿಂದ ಇರಲು ಎಚ್ಚರಿಕೆ
June 28, 2025
8:36 PM
by: The Rural Mirror ಸುದ್ದಿಜಾಲ
ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ
June 28, 2025
8:29 PM
by: The Rural Mirror ಸುದ್ದಿಜಾಲ
ಕೃಷಿ ಕೂಡಾ ಅತಿ ಹೆಚ್ಚು ಉದ್ಯೋಗ ಒದಗಿಸುವ ಕ್ಷೇತ್ರ
June 28, 2025
8:14 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group