ಗುತ್ತಿಗಾರು : ಅನೂಚಾನ ವೇದ ವಿದ್ಯಾ ಪ್ರತಿಷ್ಠಾನ ಹಾಗೂ ಗುತ್ತಿಗಾರು ಹವ್ಯಕ ವಲಯ ಇದರ ಸಹಯೋಗದೊಂದಿಗೆ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ವಸಂತ ವೇದ ಶಿಬಿರ ಹಾಗೂ ಗಾಯತ್ರಿ ಯಜ್ಞ ಇತ್ತೀಚೆಗೆ ನಡೆಯಿತು.
ವೇದ ಶಿಬಿರವನ್ನು ಉದ್ಘಾಟಿಸಿದ ವಳಲಂಬೆ ಹಿರಿಯರಾದ ವೇ.ಮೂ. ಸುಬ್ರಾಯ ಕೆದಿಲಾಯ, ವೇದ ಶಿಬಿರದ ಅವಶ್ಯಕತೆಯ ಬಗ್ಗೆ ತಿಳಿಸಿ, ಮಕ್ಕಳಿಗೆ ಸಂಸ್ಕಾರ ಹಾಗೂ ಪುರಾಣ ಕತೆಗಳ ಬಗ್ಗೆ ತಿಳಿಸಬೇಕಾದ ಅವಶ್ಯಕತೆ ಇದೆ ಎಂದರು.
ಶಿಬಿರದ ಮುಖ್ಯ ಪ್ರಾಚಾರ್ಯ ವೇ.ಮೂ.ಮಹಾಬಲೇಶ್ವರ ಭಟ್ ಪ್ರಥಮ ಪಾಠವನ್ನು ಶಿಬಿರಾರ್ಥಿಗಳಿಗೆ ಭೋಧಿಸಿದರು.
ಗುತ್ತಿಗಾರು ಹವ್ಯಕ ವಲಯಾಧ್ಯಕ್ಷ ಸೀತಾರಾಮ ಭಟ್ ಸಭಾದ್ಯಕ್ಷತೆ ವಹಿಸಿದ್ದರು. ಅನೂಚಾನ ವಿದ್ಯಾ ಪ್ರತಿಷ್ಠಾನದ ಅಧ್ಯಕ್ಷ ಬಿ.ಕೆ.ಶ್ರೀಕೃಷ್ಣ ಗುಂಡಿಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇ.ಮೂ.ಕರುವಜೆ ಕೇಶವ ಜೋಯಿಸರು ಗಾಯತ್ರೀ ಯಜ್ಞ ಸಂಕಲ್ಪ ಮತ್ತು ಘೃತ ಕಲಶ ಸ್ಥಾಪಿಸಿ ಗಾಯತ್ರೀ ಜಪಾರಂಭಿಸಿದರು.
ವಲಯ ಸಂಸ್ಕಾರ ವಿಭಾಗ ಪ್ರಮುಖ ಸುಬ್ರಹ್ಮಣ್ಯ ಭಟ್ ಜೀರ್ಮುಖಿ ಸ್ವಾಗತಿಸಿದರು. ವಲಯ ಕಾರ್ಯದರ್ಶಿ ಸೂರ್ಯನಾರಾಯಣ ಪುಚ್ಚಪ್ಪಾಡಿ ವಂದಿಸಿದರು. ವಿದ್ಯಾಪ್ರತಿಷ್ಟಾನದ ಕಾರ್ಯದರ್ಶಿ ಶಿವರಾಮ ಕರುವಜೆ ನಿರ್ವಹಿಸಿದರು.
ವಳಲಂಬೆಯಲ್ಲಿ ವಸಂತ ವೇದಶಿಬಿರ ಉದ್ಘಾಟನೆ

Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement
Advertisement
Be the first to comment on "ವಳಲಂಬೆಯಲ್ಲಿ ವಸಂತ ವೇದಶಿಬಿರ ಉದ್ಘಾಟನೆ"