“ವಾಯು” ಚಂಡಮಾರುತ ಗುಜರಾತ್ ಕಡೆಗೆ : ಕರಾವಳಿ ತೀರದ ಜನರ ಸ್ಥಳಾಂತರ

Advertisement

ಗುಜರಾತ್ :  ವಾಯು ಚಂಡಮಾರುತ ತನ್ನ ಪ್ರಭಾವ ಹೆಚ್ಚಿಸಿದೆ. ಜೂ.12  ಬುಧವಾರ ರಾತ್ರಿಯ ಒಳಗೆ  130-140 ಕಿ.ಮೀ. ವೇಗದಲ್ಲಿ ಗುಜರಾತ್‌ ಕರಾವಳಿ ಭಾಗವನ್ನು ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತವು ಉತ್ತರದ ಕಡೆ ಬೀಸಲಿದ್ದು  ಗುಜರಾತ್ ಮೀನುಗಾರರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದ್ದು ಕರಾವಳಿ ತೀರದ ಜನರ ಸ್ಥಳಾಂತರ ಮಾಡಲಾಗುತ್ತಿದೆ. ಈ ನಡುವೆ ಗೃಹಸಚಿವ ಅಮಿತ್ ಶಾ, ಗೃಹ ಕಾರ್ಯದರ್ಶಿ, ಭೂ ವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ, ಹವಾಮಾನ ಉಲಾಖೆ ಮತ್ತು ಗೃಹ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳ ಸಭೆಯೂ ಇಂದು ನಡೆದಿದೆ. ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು.

Advertisement

ಮಂಗಳವಾರ ಸಂಜೆ  ವೇಳೆಗೆ ‘ವಾಯು’ ಚಂಡಮಾರುತ ಗೋವಾದಿಂದ 350 ಕಿ.ಮೀ ನೈರುತ್ಯಕ್ಕೆ ಹಾಗೂ ಮುಂಬಯಿನಿಂದ 510 ಕಿ.ಮೀ ಮತ್ತು ವೆರಾವಲ್‌ನಿಂದ 650 ಕಿ.ಮೀ ದಕ್ಷಿಣ-ನೈರುತ್ಯ ಭಾಗದಲ್ಲಿ ಕೇಂದ್ರೀಕೃತವಾಗಿತ್ತು. ಅದು ಉತ್ತರದ ಕಡೆಗೆ ಮುಂದುವರಿಯುತ್ತಿದ್ದು, ಮುಂದಿನ 12 ಗಂಟೆಗಳಲ್ಲಿ ತೀವ್ರ ಚಂಡಮಾರುತವಾಗಿ ಶಕ್ತಿ ವೃದ್ಧಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Advertisement
Advertisement

ಚಂಡಮಾರುತದ ಕಾರಣದಿಂದ ಮುಂದಿನ 24 ಗಂಟೆಗಳಲ್ಲಿ ಗುಜರಾತ್, ಕರ್ನಾಟಕ, ಗೋವಾ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.ಕೇರಳದಲ್ಲಿಯೂ ವಾಯು ಚಂಡಮಾರುತದಿಂದ ಮುಂಗಾರು ವಿಳಂಬವಾಗಿದೆ. ಕೇರಳದಲ್ಲೂ ಯಾವುದೇ ಅನಾಹುತ ಸಂಭವಿಸಿದಂತೆ ಈಗಾಗಲೇ  ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ರಾಜ್ಯದ ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಮಲೆನಾಡು ಭಾಗದಲ್ಲಿ  ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.  ಚೆನ್ನೈ  ಪ್ರದೇಶದಲ್ಲೂ  ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ ಪ್ರಭಾವ ಹೆಚ್ಚಿಸಿದೆ.

ಹವಾಮಾನ ಇಲಾಖೆಯ ಸೂಚನೆ ಮೇರೆಗೆ ತಕ್ಷಣ ಎಲರ್ಟ್ ಆಗಿರುವ ಗೃಹ ಸಚಿವಾಲಯ, ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ 26 ತಂಡಗಳನ್ನು ಸಜ್ಜುಗೊಳಿಸಿದೆ. ದೋಣಿಗಳು, ಮರ ಕತ್ತರಿಸುವ ಉಪಕರಣಗಳು, ದೂರ ಸಂಪರ್ಕ ಸಲಕರಣೆಗಳು- ಎಲ್ಲವನ್ನೂ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಅಲ್ಲದೆ ಇನ್ನೂ 10 ಹೆಚ್ಚುವರಿ ತಂಡಗಳನ್ನು ಸನ್ನದ್ಧಗೊಳಿಸಲು ಸೂಚನೆ ನೀಡಿದೆ.  ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರಬೇಕು ಎಂದು ಎಲ್ಲಾ ಇಲಾಖೆಗಳಿಗೆ, ವಿಭಾಗಗಳಿಗೆ ಸೂಚನೆ ನೀಡಿದೆ.

Advertisement

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "“ವಾಯು” ಚಂಡಮಾರುತ ಗುಜರಾತ್ ಕಡೆಗೆ : ಕರಾವಳಿ ತೀರದ ಜನರ ಸ್ಥಳಾಂತರ"

Leave a comment

Your email address will not be published.


*