ವಿಜಯನಗರ ಕಾಲದ ಶಾಸನ ಬೆಳಕಿಗೆ

May 8, 2019
8:00 AM

ಧರ್ಮಸ್ಥಳ :  ಪುನರ್ ಪ್ರತಿಷ್ಠೆ ಮತ್ತು  ಬ್ರಹ್ಮಕಲಶೋತ್ಸವ ನಡೆಯುತ್ತಿರುವ ಬೆಳ್ತಂಗಡಿ ತಾಲೂಕಿನ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ  ವಿಜಯನಗರ ಸಾಮ್ರಾಜ್ಯದ ಅಮೂಲ್ಯ ಶಿಲಾಶಾಸನವೊಂದು ಬೆಳಕಿಗೆ ಬಂದಿದೆ.

Advertisement

ಮಧ್ಯದಲ್ಲಿ ತುಂಡರಿಸಲ್ಪಟ್ಟ ಈ ಜೀರ್ಣಗೊಂಡ ಶಾಸನವನ್ನು ಈಗ ಕಬ್ಬಿಣದ ಪಂಜರದಲ್ಲಿ  ಸಂರಕ್ಷಿಸಿಡಲಾಗಿದೆ. ಆಳೆತ್ತರದ ಶಿಲಾ ಫಲಕದ ಮೇಲೆ ಸುಮಾರು ನಲ್ವತ್ತಏಳು ದೀರ್ಘಪಂಕ್ತಿಗಳಲ್ಲಿ ಇದನ್ನು ಬರೆಯಲಾಗಿದೆ. ಕನ್ನಡ ಭಾಷೆ ಹಾಗೂ ಕನ್ನಡ ಲಿಪಿಯಲ್ಲೇ ಇದ್ದರೂ ಇದನ್ನು ಯಾರೂ ಅಧ್ಯಯನ ಮಾಡಲು ಪ್ರಯತ್ನಸಿರಲಿಲ್ಲ. ನಿವೃತ್ತ ಇತಿಹಾಸ ಪ್ರಾಧ್ಯಾಪಕರೂ, ಶಾಸನ ತಜ್ಞರೂ ಆದ ಡಾ| ವೈ. ಉಮಾನಾಥ ಶೆಣೈಯವರು ಇದನ್ನು ಅಧ್ಯಯನ ಮಾಡಿದಾಗ ಹಲವಾರು ಐತಿಹಾಸಿಕ ವಿಚಾರಗಳು ಬೆಳಕನ್ನು ಕಂಡಿವೆ.

ಈ ಶಿಲಾಶಾಸನ ಶಾಲಿವಾಹನ ಶಕ ಸಾವಿರದ ಮುನ್ನೂರ ಮೂವತ್ತೊಂಭತ್ತನೆಯ ದುರ್ಮುಖಿ ಸಂವತ್ಸರದ ಪುಷ್ಯ ಬಹಳ ಅಮಾವಾಸ್ಯೆ (ಕ್ರಿ.ಶ. 1417ನೇ ಇಸವಿ ಜನವರಿ ತಿಂಗಳ 17ನೇ ತಾರೀಖು) ಆದಿತ್ಯವಾರದಂದು ವಿಜಯನಗರ ಸಾಮ್ರಾಜ್ಯದ ಸಾರ್ವಭೌಮ ಶ್ರೀ ಮನ್ಮಹಾರಾಜಾಧಿರಾಜ ರಾಜ ಪರಮೇಶ್ವರ ಶ್ರೀ ವೀರದೇವರಾಯ ಮಹಾರಾಯರ ಆದೇಶದಂತೆ ಬರೆಯಲಾಗಿತ್ತು. ಇದರಲ್ಲಿ ಭಕ್ತ ಜನರು ಚಂದಕೂರು ದುರ್ಗಾಪರಮೇಶ್ವರಿಯ ದೇವಾಲಯದಲ್ಲಿ ಆಗತಕ್ಕ ಸೇವಾದಿಗಳಿಗೆ ಹಾಗೂ ಬ್ರಾಹ್ಮಣ ಸಂತರ್ಪಣೆಗೆ ಬೇಕಾದ ಭೂಮಿಯನ್ನು ಉಂಬಳಿ ಬಿಟ್ಟ ವಿಚಾರವನ್ನು ತಿಳಿಸಿ ಆ ಬಿಟ್ಟ ಭೂಮಿಯ ಗಡಿರೇಖೆಗಳನ್ನು ಈ ಶಾಸನದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.

ಈ ದೇವಾಲಯಕ್ಕೆ ಸಂಬಂಧಿಸಿ ಒಂದು ಅನ್ನಛತ್ರವೂ ಅದನ್ನು ವ್ಯವಸ್ಥಿತವಾಗಿ ನಡೆಸುವ ಒಂದು ಮಠವೂ ಇಲ್ಲಿ ಇದ್ದಂತೆ ಈ ಶಾಸನದಿಂದ ತಿಳಿಯುತ್ತದೆ. ಬಂಗ ಅರಸರು, ನಡ ಗುತ್ತಿನವರು, ಕೆಲವು ಬ್ರಾಹ್ಮಣರು, ಇನ್ನುಳಿದಂತೆ ಅನೇಕ ಶ್ರೀಮಂತ ಭೂಮಾಲಿಕರು, ಈ ವಿನಿಯೋಗಾದಿಗಳಿಗೆ ಭೂಮಿಯನ್ನು ಧಾರೆಯೆರೆದು ಕೊಟ್ಟಿದ್ದರು. ಉಳಿದವರು ಪ್ರತೀ ವರ್ಷ ತಮ್ಮ ಭೂಮಿಯಿಂದ ಬರುವ ಉತ್ಪತ್ತಿಯ ನಿರ್ದಿಷ್ಟ ಅಂಶವನ್ನು ಭತ್ತದ ರೂಪದಲ್ಲಿ ದೇವಾಲಯಕ್ಕೆ ಕೊಡಬೇಕಾಗಿತ್ತು. ಸುಮಾರು 1600 ಮುಡಿ ಭತ್ತ ದೇಣಿಗೆಯ ರೂಪದಲ್ಲಿ ಬರುತಿತ್ತು. ಇದರ ಸರಿಯಾದ ನಿರ್ವಹಣೆಯನ್ನು ಬಂಗರ ಅರಮನೆಯವರು, ನಡದವರು, ಬೀರಣ್ಣ ಎಂಬ ಅಧಿಕಾರಿ ಮತ್ತು ನಾಲ್ಕೂರು ಗ್ರಾಮದವರು ನೋಡಿಕೊಳ್ಳಬೇಕು. ಇದಕ್ಕೆ ಸೂರ್ಯ, ಚಂದ್ರರೇ ಸಾಕ್ಷಿ. ದಾನ ಮಾಡುವವನು ಸ್ವರ್ಗವನ್ನು ಪಡೆಯುತ್ತಾನೆ. ಯಾವಾತನು ಅದನ್ನು ನಡೆಸುತ್ತಾನೋ ಆತನಿಗೆ ಶ್ರೀ ಮಹಾವಿಷ್ಣುಪದ ಪ್ರಾಪ್ತವಾಗುತ್ತದೆ. ಈ ಊರವರು ಇದನ್ನು ನಡೆಸಿಕೊಂಡು ಬರುತ್ತಾರೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೆಳಗಾವಿಯಲ್ಲಿ 3 ದಿನಗಳ ಮಾವು, ಜೇನು ಮೇಳ | ರೈತರಿಂದ ಪ್ರದರ್ಶನ, ಗ್ರಾಹಕರಿಗೆ ನೇರ ಮಾರಾಟ
April 26, 2025
9:54 PM
by: The Rural Mirror ಸುದ್ದಿಜಾಲ
ಪಡಿತರ ಚೀಟಿದಾರರ ಇ-ಕೆವೈಸಿ ಮರುಸಂಗ್ರಹಿಸುವ ಕೊನೆಯ ಅವಕಾಶ
April 25, 2025
9:30 PM
by: ದ ರೂರಲ್ ಮಿರರ್.ಕಾಂ
ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ
April 25, 2025
7:47 AM
by: The Rural Mirror ಸುದ್ದಿಜಾಲ
ಜಾನುವಾರು ಕಾಲುಬಾಯಿರೋಗ | ಎ.21 ರಿಂದ ಜೂ.4 ಲಸಿಕಾ ಅಭಿಯಾನ
April 18, 2025
6:17 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror