ವಿದ್ಯಾಬೋಧಿನಿಯಲ್ಲಿ ಸ್ಮೃ ತಿ ದಿನಾಚರಣೆ ಮತ್ತು ಸಾಹಿತ್ಯೋತ್ಸವ

July 12, 2019
11:00 AM

ಬಾಳಿಲ: ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಸಂಸ್ಥಾಪಕ ನೆಟ್ಟಾರು ವೆಂಕಟಸುಬ್ಬರಾವ್ ಸ್ಮೃತಿ ದಿನಾಚರಣೆ ಹಾಗೂ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಪೆರಡಾಲ ನವಜೀವನ ಪ್ರೌಢಶಾಲಾ ಶಿಕ್ಷಕಿ ಪ್ರಭಾವತಿ ಕೆದಿಲಾಯ ಉದ್ಘಾಟಿಸಿ ಕನ್ನಡ ಭಾಷೆಯ ಉಳಿಕೆಗಾಗಿ ಪ್ರಯತ್ನಿಸುವ ವಿಚಾರದ ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿನಿಯರು ಶಾಲಾ ಸಂಸ್ಥಾಪಕ ದಿ|ವೆಂಕಟಸುಬ್ಬ ರಾವ್ ಕುರಿತು ಗೀತೆಗಳನ್ನು ಹಾಡಿದರು. ವಿದ್ಯಾರ್ಥಿ ಧನುಷ್ ಸಂಸ್ಥಾಪಕರ ಕುರಿತು ಮಾತನಾಡಿದರು. ಬಳಿಕ ತಾಲೂಕು ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಿತು. ಪ್ರೌಢಶಾಲಾ ವಿಭಾಗಕ್ಕೆ ಭಾವಗೀತೆ, ಆಶುಭಾಷಣ ಮತ್ತು ರಸಪ್ರಶ್ನೆ, ಪ್ರಥಮಿಕ ವಿಭಾಗ ವಿದ್ಯಾರ್ಥಿಗಳಿಗೆ ಹಾಡು, ಚಿತ್ರ ರಚನೆ ಸ್ಪರ್ಧೆಗಳು ನಡೆಯಿತು.

ನೂರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅಂತಿಮವಾಗಿ ಆತಿಥೇಯ ವಿದ್ಯಾಬೋಧಿನಿ ಪ್ರೌಢಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಎನ್.ವೆಂಕಟ್ರಮಣ ಭಟ್ ವಹಿಸಿದರು. ಪ್ರಭಾರ ಮುಖ್ಯ ಶಿಕ್ಷಕ ಯಶೋಧರ ನಾರಾಲು ಪ್ರಸ್ತಾವಿಸಿ, ಸ್ವಾಗತಿಸಿದರು. ಶಿಕ್ಷಕ ವೆಂಕಟೇಶ್‍ಕುಮಾರ್ ವಂದಿಸಿದರು. ಲೋಕೇಶ್ ಬೆಳ್ಳಿಗೆ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶಿ ಗೋವಿನ ಹಾಲು, ತುಪ್ಪದ ಮಹತ್ವದ ಪ್ರತಿಪಾದನೆ – ಪಾರಂಪರಿಕ ಆಹಾರ ಪದ್ಧತಿಗೆ ಒತ್ತು
September 26, 2026
7:36 PM
by: ದ ರೂರಲ್ ಮಿರರ್.ಕಾಂ
ಕುಟುಂಬದ ಸೌಂದರ್ಯ ವೈಭವದಲ್ಲಲ್ಲ, ಸೌಹಾರ್ದತೆಯಲ್ಲಿ: ಸಂಬಂಧ ಉಳಿಸುವುದೇ ನಿಜವಾದ ಗೆಲುವು
September 26, 2026
7:21 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹವಾಮಾನ ಬದಲಾವಣೆ ತಡೆಯಲು ಕಾನೂನು ಮಾತ್ರ ಸಾಲದು – ಸಾಮೂಹಿಕ ಪ್ರಯತ್ನ ಅಗತ್ಯ
September 26, 2026
7:10 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 26.09.2026 | ಸೆ.28ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು: ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
September 26, 2026
1:35 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror