ವಿದ್ಯಾರ್ಥಿಗಳು ತಪ್ಪು ಮಾಡಿದರೆ ಗಿಡ ನೆಡುವ ಪಾಠ…..! ಹೀಗೊಂದು ಪರಿಸರ ಕಾಳಜಿ…

August 28, 2019
10:18 AM

ಶಾಲೆಯಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದರೆ ತರಗತಿಯಿಂದ ಹೊರಗೆ ನಿಲ್ಲಿಸುವುದು, ಹೆತ್ತವರನ್ನು ಕರೆತರುವುದು  ಇತ್ಯಾದಿ ಇದ್ದೇ ಇದೆ. ಆದರೆ ಗುಜರಾತ್ ನ ಶಿಕ್ಷಣ ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಗಿಡವನ್ನೂ ನೆಡಬೇಕು..!. ಈ ಕಡೆಗೆ ನಮ್ಮ ಫೋಕಸ್…

Advertisement
Advertisement
Advertisement

ಎಲ್ಲರಿಗೂ ಮಾದರಿ ಎನಿಸುವ ಪರಿಸರ ಸ್ನೇಹಿಯಾದ ಕ್ರಮವನ್ನು ತೆಗೆದುಕೊಂಡಿರುವ ಗುಜರಾತ್ ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಶೈಕ್ಷಣಿಕ ಸಂಸ್ಥೆಯೊಂದು, ತನ್ನ ಆವರಣದಲ್ಲಿ ತಪ್ಪು ಮಾಡುವ ವಿದ್ಯಾರ್ಥಿಗಳಿಗೆ ಗಿಡ ನೆಡುವ ಶಿಕ್ಷೆಯನ್ನು ನೀಡುತ್ತಿದೆ.

Advertisement

ಶ್ರೀ ಗಿಜುಭಾಯ್ ಛಗನ್ಭಾಯ್ ಪಟೇಲ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್, ಇಂಟೀರಿಯರ್ ಡಿಸೈನ್ ಆ್ಯಂಡ್ ಫೈನ್ ಆರ್ಟ್ಸ್­ನ ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಗಳು ಗಿಡ ನೆಡುವ ಮೂಲಕ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತವನ್ನು ಕಂಡುಕೊಳ್ಳಬೇಕಾಗಿದೆ. ಈ ಮೂಲಕ ಪ್ರಕೃತಿಯನ್ನು ಉಳಿಸಲು ಕೊಡುಗೆಯನ್ನು ನೀಡಬೇಕಾಗಿದೆ.

ತರಗತಿಗಳಿಗೆ ತಡವಾಗಿ ಬಂದಾಗ ಅಥವಾ ಅಸೈನ್ಮೆಂಟ್ ಅನ್ನು ಸಮಯಕ್ಕೆ ಸರಿಯಾಗಿ ಸಲ್ಲಿಕೆ ಮಾಡದಿದ್ದಾಗ ಶಿಕ್ಷೆಯ ಭಾಗವಾಗಿ ಗಿಡವನ್ನು ನೆಡುವುದು ಕಡ್ಡಾಯವಾಗಿದೆ.

Advertisement

“ಇದು ಪರಿಸರ ಸ್ನೇಹಿ ಶಿಕ್ಷೆಯಾಗಿರುವುದರಿಂದ ವಿದ್ಯಾರ್ಥಿಗಳು ಶಿಕ್ಷೆಯನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ. ಪ್ರತಿ ತಪ್ಪಿಗೂ ಅವರು ಸಸಿ ನೆಡಬೇಕು ಮತ್ತು ಅದನ್ನು ಕಾಲೇಜು ತೊರೆಯುವವರೆಗೂ ನೋಡಿಕೊಳ್ಳಬೇಕು. ತಪ್ಪುಗಳನ್ನು ಮಾಡಿದ ವಿದ್ಯಾರ್ಥಿಗಳಿಗೆ ಈ ಅನನ್ಯ ಶಿಕ್ಷೆಯನ್ನು ನೀಡುವುದು ನನ್ನ ಆಶಯವಾಗಿತ್ತು” ಎಂದು ವಾಸ್ತುಶಿಲ್ಪ ವಿಭಾಗದ ಪ್ರೊಫೆಸರ್ ಮಹೇಶ್ ಪಟೇಲ್ ಹೇಳಿದ್ದಾರೆ.

Advertisement

“ನಾನು ಏನಾದರೂ ತಪ್ಪು ಮಾಡಿದರೆ ನಾನೇ ಇಲ್ಲಿ ಸಸಿಗಳನ್ನು ನೆಡುತ್ತೇನೆ. ಈ ಶಿಕ್ಷೆಯು ನಮ್ಮ ವಿದ್ಯಾರ್ಥಿಗಳಿಗೆ ಉತ್ತಮ ವ್ಯಕ್ತಿಯಾಗಬಲ್ಲ ಕೆಲವು ಪಾಠಗಳನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ. ಈ ಕ್ರಮವು ಚಿಕ್ಕ ವಯಸ್ಸಿನಿಂದಲೂ ಗಿಡಗಳನ್ನು ನೆಡುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ” ಎಂದಿದ್ದಾರೆ.

ತಮ್ಮ ಕೋರ್ಸ್ ಪೂರ್ಣಗೊಂಡ ಬಳಿಕವೂ ಕೆಲವು ವಿದ್ಯಾರ್ಥಿಗಳು ಕ್ಯಾಂಪಸ್ಸಿಗೆ ಬಂದು ತಮ್ಮ ಸಸಿಗಳನ್ನು ನೋಡಿಕೊಂಡು ಹೋಗುತ್ತಾರೆ ಎಂದು ಅವರು ಹೇಳಿದ್ದಾರೆ.

Advertisement

“ಇದು ಶಿಕ್ಷೆಯಲ್ಲ ಒಂದು ಉತ್ತಮ ಕಾರ್ಯಕ್ರಮ. ನಾನು ನನ್ನ ಮೊಬೈಲ್ ಅನ್ನು ಸೈಲೆಂಟ್ ಮೋಡಿನಲ್ಲಿ ಇಡಲು ಮರೆತ ತಪ್ಪಿಗಾಗಿ ಸಸಿಯನ್ನು ನೆಟ್ಟಿದ್ದೇನೆ’ ಎಂದು ಸಂಸ್ಥೆಯ ವಿದ್ಯಾರ್ಥಿ ನಾಯಕ ಹೇಳಿಕೊಂಡಿದ್ದಾರೆ.

ಇದು ಅತ್ಯುತ್ತಮವಾದ ಶಿಕ್ಷೆಯ ವಿಧಾನವಾಗಿದೆ. ಕಾಲೇಜಿನ ಆವರಣದೊಳಗಿರುವ ಅನೇಕ ಸಸಿಗಳನ್ನು ವಿದ್ಯಾರ್ಥಿಗಳೇ ನೆಟ್ಟಿದ್ದಾರೆ ಎಂದು ಇಲ್ಲಿನ ಬೋಧಕರು ಹೇಳುತ್ತಾರೆ.

Advertisement

(ಕೃಪೆ – ನ್ಯೂಸ್13)

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೆನಾಡಿನಲ್ಲಿ ಕಾಡಾನೆ ಹಾವಳಿ ತಡೆಗೆ ಅಧಿವೇಶನದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ
November 25, 2024
7:15 AM
by: The Rural Mirror ಸುದ್ದಿಜಾಲ
ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?
November 24, 2024
7:09 AM
by: ದ ರೂರಲ್ ಮಿರರ್.ಕಾಂ
ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror