ವಿದ್ಯುತ್ ಬಳಕೆದಾರರ ಪ್ರಯತ್ನ : ಸ್ಪಂದಿಸಿದ ಅರಣ್ಯ ಇಲಾಖೆ : ಬಳಕೆದಾರರಿಂದ ಶುರುವಾಗಿದೆ ಹಂತ ಹಂತದ ಹೋರಾಟ

Advertisement

ಬೆಳ್ಳಾರೆ: ಕಳೆದ ಅನೇಕ ವರ್ಷಗಳಿಂದ ಮಾಡಾವು ಸಬ್ ಸ್ಟೇಶನ್ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಸ್ಟೇಶನ್ ಕಾಮಗಾರಿ ನಡೆದರೂ ವಿದ್ಯುತ್  ಲೈನ್ ಸಮಸ್ಯೆ ಇತ್ತು. ಇದಕ್ಕೆ ಪ್ರಮುಖವಾಗಿ ವಿವಿದೆಡೆ ಅರಣ್ಯ ಇಲಾಖೆ ಅಡ್ಡಿ ಹಾಗೂ ಇತರ ಸಮಸ್ಯೆಗಳು ಇದ್ದವು. ಇದೀಗ ವಿದ್ಯುತ್ ಬಳಕೆದಾರರು ಅರಣ್ಯ ಇಲಾಖೆಯನ್ನು  ಸಂಪರ್ಕಿಸಿ  ವಿದ್ಯುತ್ ಲೈನ್ ಗೆ ಅಡ್ಡಿ ಮಾಡದಂತೆ ವಿನಂತಿ ಮಾಡಿದ ಮೇರೆಗೆ ತಕ್ಷಣವೇ ಇಲಾಖೆಯು ಸ್ಪಂದಿಸಿ ಸಾರ್ವಜನಿಕ ಹಿತಾಸಕ್ತಿ ಬೇಡಿಕೆ ಆಧಾರದಲ್ಲಿ ತಕ್ಷಣವೇ ಮಹಜರು ನಡೆಸಿದರು ಮತ್ತು ಯಾವುದೇ ಆಕ್ಷೇಪವಿಲ್ಲ ಎಂದು ಸರ್ವಾನುಮತದಿಂದ ನಿರ್ಣಯಿಸಿದರು.

Advertisement

ಇದೀಗ ವಿದ್ಯುತ್ ಬಳಕೆದಾರರು ಸಮಸ್ಯೆಯನ್ನು  ಬಗೆಹರಿಸಿ ಅತಿ ಶೀಘ್ರದಲ್ಲೇ ವಿದ್ಯುತ್ ಸಮಸ್ಯೆ ನಿವಾರಣೆಗೆ ಪ್ರಯತ್ನ ಮುಂದುವರಿಸಿದ್ದಾರೆ. ಇದಕ್ಕಾಗಿಯೇ  ಪುತ್ತೂರು ತಾಲೂಕು ಮಾಡಾವು ಪ್ರಸ್ಥಾವಿತ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ  ವಿವಿಧ ಸಂಘಟನೆಗಳನ್ನೊಳಗೊಂಡ  ವಿದ್ಯುತ್ ಬಳಕೆದಾರರ ಕ್ರಿಯಾ ಸಮಿತಿ ಬೆಳ್ಳಾರೆಯಲ್ಲಿ ರಚನೆಯಾಗಿ ಕೆಲಸ ನಿರ್ವಹಿಸುತ್ತಿದೆ. ಅತಿ ಶೀಘ್ರದಲ್ಲೇ ಸಬ್ ಸ್ಟೇಶನ್ ಚಾಲೂ ಆಗಲು ಪ್ರಯತ್ನ ನಡೆಸುತ್ತಿದೆ. ಪ್ರಮುಖವಾಗಿ ಜಯಪ್ರಸಾದ್ ಜೋಶಿ ಬೆಳ್ಳಾರೆ, ಸುರೇಶ್ಚಂದ್ರ ಕಲ್ಮಡ್ಕ , ರಮೇಶ್ ಕೋಟ್, ರಾಮಚಂದ್ರ ದೇವಸ್ಯ , ಭಾರತೀಯ ಕಿಸಾನ್ ಸಂಘದ ಪ್ರಮುಖರು ಸಕ್ರಿಯವಾಗಿ ಕೆಲಸ ಆರಂಭಿಸಿದ್ದಾರೆ.

Advertisement
Advertisement

ಸಬ್ ಸ್ಟೇಶನ್ ಗೆ ಬರುವ ವಿದ್ಯುತ್ ಲೈನ್ ನ ಕೆಲವು ಕಡೆ ಖಾಸಗಿ ವ್ಯಕ್ತಿಗಳು  ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಕೆಲವು ಆಕ್ಷೇಪಣೆದಾರರನ್ನು ಮನವೊಲಿಸಿ ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳು ಅವರಲ್ಲಿ ಸಂವಾದ ನಡೆಸುವಂತೆ ಸಲಹೆ  ಮಾಡಲಾಗಿದ್ದು ಅದಕ್ಕೂ ಸ್ಪಂದನೆ ದೊರೆತಿದೆ.  ಆಕ್ಷೇಪಣೆದಾರರನ್ನು  ಸಂಪರ್ಕಿಸಿ ಅವರ ಸಮಸ್ಯೆಯನ್ನು ನೇರ ಅಧಿಕಾರಿಗಳ ಗಮನಕ್ಕೆ ತಂದು ಅವರಿಗೆ ಕಾನೂನು ಬದ್ಧ ಸೂಕ್ತ ಪರಿಹಾರದ ವ್ಯವಸ್ಥೆ ಮಾಡುವ ಸಲಹೆ ನೀಡಲಾಗಿದೆ.  ಗುತ್ತಿಗೆದಾರರು ನಿಧಾನಗತಿ ಅನುಸರಿಸುತ್ತಿರುವುದನ್ನು ಹಾಗೂ ಪ್ರಗತಿ ಇಲ್ಲದಿರುವುದನ್ನು ಮನಗಂಡು ಅಧಿಕಾರಿಗಳ ಸಮಕ್ಷಮದಲ್ಲಿಯೇ ಅವರನ್ನು ವಿಚಾರಿಸಿ ಸೂಕ್ತ ಎಚ್ಚರಿಕೆ ನೀಡಿ ಸ್ಪಂದಿಸದಿದ್ದಲ್ಲಿ ಕಪ್ಪು ಪಟ್ಟಿಗೆ ಸೇರಿಸಲು ಬಳಕೆದಾರರು ಒತ್ತಾಯಿಸಿದ್ದಾರೆ.

ಕಾಮಗಾರಿ ವೇಗ ಪಡೆಯದೇ ಇದ್ದರೆ  ಮುಂದಿನ ಹಂತದಲ್ಲಿ ಇನ್ನೊಂದು ಸುತ್ತಿನ ಮನವಿ, ಹಕ್ಕೊತ್ತಾಯ, ಕಾರ್ಡ್ ಚಳವಳಿ ಇತ್ಯಾದಿಗಳನ್ನು ನಡೆಸಲಾಗುವುದು. ಜನ ಪ್ರತಿನಿಧಿಗಳಿಗೂ ಮನವಿ ಸಲ್ಲಿಸಲ್ಲಿದ್ದು ಅವರದೂ ಈ ನಿಟ್ಟಿನಲ್ಲಿ ಪೂರಕ ಭರವಸೆಯ  ನಿರೀಕ್ಷೆ   ಇದೆ. ಈ ರೀತಿಯಾಗಿ ಹಂತ ಹಂತವಾಗಿ ಹಕ್ಕೊತ್ತಾಯಗಳನ್ನು ವಿದ್ಯುತ್ ವಿತರಣಾ  ಕೇಂದ್ರದ ಕಾರ್ಯಾರಂಭದವರೆಗೆ ಬಳಕೆದಾರರ ವೇದಿಕೆ ನಿರಂತರ ಪ್ರಯತ್ನ  ನಡೆಸಲಿದೆ. ಆದರೆ   ಎಲ್ಲರ ಸಹಕಾರದಿಂದ ಮತ್ತಷ್ಟು ವೇಗ ಪಡೆಯಲು ಸಾಧ್ಯವಿದೆ. ಹೀಗಾಗಿ  ಪ್ರಸ್ಥಾವಿತ 110 ಕೆ.ವಿ ಸ್ಟೇಷನ್‍ನಿಂದ ವಿದ್ಯುತ್ ಪಡೆಯುವ ಎಲ್ಲಾ ಬಳಕೆದಾರರು, ವ್ಯಾಪ್ತಿಯ ಜನ ಪ್ರತಿನಿಧಿಗಳು, ಗ್ರಾಮ ಪಂಚಾಯತ್‍ಗಳು ಎಲ್ಲಾ ಸ್ತರದ ನಾಗರಿಕರು ಪಕ್ಷ ಬೇಧ ಮರೆತು ಕೈಜೋಡಿಸಬೇಕು ಎಂದು ಸುಳ್ಯನ್ಯೂಸ್.ಕಾಂ   ಜೊತೆ ಮಾತನಾಡಿದ  ಬಳಕೆದಾರರ ವೇದಿಕೆ ಸಂಚಾಲಕ  ಜಯಪ್ರಸಾದ್ ಜೋಶಿ   ಮನವಿ ಮಾಡಿದ್ದಾರೆ.

Advertisement

 

 

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ವಿದ್ಯುತ್ ಬಳಕೆದಾರರ ಪ್ರಯತ್ನ : ಸ್ಪಂದಿಸಿದ ಅರಣ್ಯ ಇಲಾಖೆ : ಬಳಕೆದಾರರಿಂದ ಶುರುವಾಗಿದೆ ಹಂತ ಹಂತದ ಹೋರಾಟ"

Leave a comment

Your email address will not be published.


*