ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಿಂಧೂರ ಸರಸ್ವತಿಗೆ ರಾಂಕ್

February 3, 2020
6:51 PM

ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿನಿ ಸಿಂಧೂರ ಸರಸ್ವತಿ ಇವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ 2018-19ನೇ ಶೈಕ್ಷಣಿಕ ಸಾಲಿನ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಹಾಗೂ 6 ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.

ಪ್ರಥಮ ರಾಂಕ್ ನೊಂದಿಗೆ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ ಪ್ರಥಮ ರಾಂಕ್ ವಿಜೇತರಿಗೆ ಕೊಡಲಾಗುವ ಜೈನ್ ವಿಶ್ವವಿದ್ಯಾನಿಲಯದ ಚಿನ್ನದ ಪದಕ, ಡಾ.ಆರ್.ಎನ್.ಶೆಟ್ಟಿ ಚಿನ್ನದ ಪದಕ, ಎಸ್‍ಜೆಸಿಇ ಬೆಳ್ಳಿಹಬ್ಬದ ಚಿನ್ನದ ಪದಕ, ಜ್ಯೋತಿ ಚಿನ್ನದ ಪದಕ, ಆರ್.ಎನ್.ಶೆಟ್ಟಿ ಚಿನ್ನದ ಪದಕ ಮತ್ತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಚಿನ್ನದ ಪದಕ ಹೀಗೆ 6 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಫೆಬ್ರವರಿ ತಿಂಗಳ 8ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ 19ನೇ ವಾರ್ಷಿಕ ಘಟಿಕೋತ್ಸವದಲ್ಲಿ ಇದನ್ನು ಪ್ರಧಾನ ಮಾಡಲಾಗುತ್ತದೆ.

ಸಿಂಧೂರ ಸರಸ್ವತಿ ಅವರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ್ ಭಟ್ ಬಂಗಾರಡ್ಕ ಇವರ ಪುತ್ರಿ. ಸಿಂಧೂರ ಸರಸ್ವತಿ ಅವರ ಈ ಸಾಧನೆಗೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು, ನಿರ್ದೇಶಕರು, ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅವರನ್ನು ಅಭಿನಂದಿಸಿದ್ದಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬದುಕಿನ ಬ್ಯಾಗೇಜು
September 28, 2026
7:26 AM
by: ದ ರೂರಲ್ ಮಿರರ್.ಕಾಂ
ಬ್ಯಾಂಕ್‌ ಮುಷ್ಕರ ಮುಂದೂಡಿಕೆ – ಇಂದು ಎಂದಿನಂತೆ ಬ್ಯಾಂಕ್‌ ಸೇವೆ
September 28, 2026
6:44 AM
by: ದ ರೂರಲ್ ಮಿರರ್.ಕಾಂ
ಖ್ಯಾತಿ-ಪ್ರಚಾರವಲ್ಲ, ಸಮಾಜ ಪರಿವರ್ತನೆಯೇ ಚಾತುರ್ಮಾಸ್ಯದ ಗುರಿ
September 27, 2026
10:44 PM
by: ದ ರೂರಲ್ ಮಿರರ್.ಕಾಂ
ಮೇಘಾಲಯದ ಅಡಿಕೆಗೆ ಜಿಐ ಟ್ಯಾಗ್‌ ಪ್ರಕ್ರಿಯೆ..! ಮಲೆನಾಡು ಅಡಿಕೆಗೂ ಏಕೆ ಪ್ರಯತ್ನಿಸಬಾರದು..?
September 27, 2026
8:12 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror