ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ “ಗ್ರಾಮ ವಿಕಾಸ” ಅಧ್ಯಯನ ಪ್ರವಾಸ

Advertisement

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ “ಗ್ರಾಮ ವಿಕಾಸ” ಎಂಬ ಯೋಜನೆಯ ಅಡಿಯಲ್ಲಿ ಮೇ 18 ಮತ್ತು 19ರಂದು ಧಾರವಾಡ ಮತ್ತು ಮಹಾರಾಷ್ಟ್ರದ ಹಲವು ಪ್ರದೇಶಗಳಿಗೆ ಅಧ್ಯಯನ ಪ್ರವಾಸ ನಡೆಸಲಾಯಿತು.
ಈ ಸಂದರ್ಭ ಅಲ್ಲಿನ ವಿವಿಧ ಗ್ರಾಮ ವಿಕಾಸದ ಕಲ್ಪನೆಯ ಕುರಿತಾಗಿ ಸವಿವರವಾಗಿ ಅಧ್ಯಯನ ನಡೆಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣಸಂಸ್ಥೆಗಳ ಮೂಲಕ ವಿವಿಧ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಲ್ಲಿ ಅಭಿವೃದ್ಧಿ ಕಾರ್ಯ ನಡೆಸುತ್ತಿರುವುದರ ಹಿನ್ನೆಲೆಯಲ್ಲಿ ಈ ಪ್ರವಾಸವನ್ನು ಹಮ್ಮಿಕೊಳ್ಳಲಾಯಿತು. ಗ್ರಾಮ ವಿಕಾಸ ಯೋಜನೆಯ ಅಡಿಯಲ್ಲಿ ಸುಮಾರು 17 ಗ್ರಾಮಗಳಿಂದ ಹಾಗೂ ವಿವಿಧ ವಿವೇಕಾನಂದ ವಿದ್ಯಾಸಂಸ್ಥೆಗಳಿಂದ ಸುಮಾರು 35 ಪ್ರತಿನಿಧಿಗಳು ಈ ಪ್ರವಾಸದಲ್ಲಿ ಭಾಗವಹಿಸಿದ್ದರು.

Advertisement

ಜ್ಞಾನವಿಕಾಸ ತರಬೇತಿ ಸಂಸ್ಥೆಗೆ ಭೇಟಿ

Advertisement

ಮೇ 18ರಂದು ಧಾರವಾಡದ ರಾಯಪುರದಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ತರಬೇತಿ ಸಂಸ್ಥೆಗೆ ಭೇಟಿ ನೀಡಲಾಯಿತು. ಅಲ್ಲಿ ಜ್ಞಾನವಿಕಾಸ ತರಬೇತಿ ಸಂಸ್ಥೆಯ ನಿರ್ದೇಶಕ ಡಾ. ಪ್ರಕಾಶ್ ಭಟ್ ಅವರು ಕೃಷಿ ಸಂಬಂಧಿ ವಿಷಯ, ಭೂಮಿ, ನೀರು, ಸಾವಯವ ಕೃಷಿ, ಕೃಷಿ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಹೀಗೆ ಕೃಷಿಯಲ್ಲಿ ಲಾಭಗಳಿಸುವ ವಿಧಾನ, ಸುಸ್ಥಿರ ಅಭಿವೃದ್ಧಿ, ಕೊಳವೆ ಬಾವಿಗೆ ಜಲ ಮರುಪೂರಣೆ ಹೀಗೆ ಹಲವು ವಿಷಯದ ಕುರಿತು ಸಂವಾದ ನಡೆಸಲಾಯಿತು. ಸೋಲಾರ್ ಶಕ್ತಿಯಿಂದ ಬಳಸಬಹುದಾದ ಆಧುನಿಕ ಯಂತ್ರಗಳ ಲ್ಯಾಬ್, ಸಿರಿಧಾನ್ಯಗಳ ಮಿಶ್ರಣಗಳ ಉತ್ಪಾದನಾ ಘಟಕ, ಕಟ್ಟಡದ ಮೇಲೆ ಬೀಳುವ ಮಳೆನೀರಿನ ಮರುಬಳಕೆಯನ್ನು ಮಾಡುವ ವಿಧಾನ, ಪ್ರತಿ ದಿನ ಸುಮಾರು 50 ಕೆ.ಜಿ. ಬಯೋಗ್ಯಾಸ್ ಉತ್ಪಾದಿಸುವ ಘಟಕವನ್ನು ಜ್ಞಾನ ವಿಕಾಸ ತರಬೇತಿ ಸಂಸ್ಥೆಯಲ್ಲಿ ವೀಕ್ಷಿಸಲಾಯಿತು.

ಕಣೇರಿ ಸಿದ್ದಗಿರಿ ಮಠಕ್ಕೆ ಭೇಟಿ

Advertisement

ಮೇ 19ರಂದು ಮಹಾರಾಷ್ಟ್ರದ ಕೊಲ್ಲಾಪುರದ ಕಣೇರಿ ಸಿದ್ದಗಿರಿ ಮಠಕ್ಕೆ ಗ್ರಾಮ ವಿಕಾಸ ತಂಡ ಭೇಟಿ ನೀಡಿತು. ಕಣೇರಿ ಮಠದ ಮೂಲಕ ನಡೆಸಲಾಗುತ್ತಿರುವ ವಿವಿಧ ಶಿಕ್ಷಣ ಸಂಬಂಧಿ ಚಟುವಟಿಕೆ ಮಾತ್ರವಲ್ಲದೆ ಆರೋಗ್ಯ, ಯೋಗವಿಜ್ಞಾನ, ಸಾವಯವ ಕೃಷಿ, ಹೈನುಗಾರಿಕೆ ಇತ್ಯಾದಿ ಕ್ಷೇತ್ರಗಳಿಗೆ ಮಠ ನೀಡುತ್ತಿರುವ ಕೊಡುಗೆಗಳ ಬಗೆಗೆ ತಿಳಿದುಕೊಳ್ಳಲಾಯಿತು. ಕಣೇರಿ ಮಠದ ಸುತ್ತ ಸುಮಾರು 250 ಎಕ್ರೆಯಲ್ಲಿ ನಾನಾ ರೀತಿಯ ಗೆಡ್ಡೆ ಗೆಣಸು, ಬಳ್ಳಿಗಳ ಆಹಾರ ಪದಾರ್ಥಗಳು, ಹಣ್ಣು-ಹಂಪಲುಗಳು, ಹೂವು, ಮೇವು, ಮನೆ ಮದ್ದು, ದ್ವಿದಳ ಧಾನ್ಯ, ಎಣ್ಣೆಕಾಳು, ಮಸಾಲೆ ಬೆಳೆಗಳನ್ನು ವೀಕ್ಷಿಸಲಾಯಿತು.

ಗ್ರಾಮ ವಿಕಾಸ ಅಧ್ಯಯನ ಪ್ರವಾಸದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ಅಧ್ಯಯನ ಪ್ರವಾಸದ ಸಂಘಟಕ ವೆಂಕಟೇಶ್ ಮತ್ತು ಹಲವು ಶಾಲಾ, ಕಾಲೇಜು ಆಡಳಿತ ಮಂಡಳಿಯವರು, ಅಧ್ಯಾಪಕರು, ಗ್ರಾಮಸ್ಥರು ಪಾಲ್ಗೊಂಡರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ “ಗ್ರಾಮ ವಿಕಾಸ” ಅಧ್ಯಯನ ಪ್ರವಾಸ"

Leave a comment

Your email address will not be published.


*