ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದಿಂದ ‘ಪಯಣ’ ಕಾರ್ಯಕ್ರಮ

February 14, 2020
4:18 PM

ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ಹಲವಾರು ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಅವುಗಳನ್ನು ಸದುಪಯೋಗಪಡಿಸಿಕೊಂಡಾಗ ಮುಂದಿನ ಜೀವನದ ದಾರಿ ತೆರೆದುಕೊಳ್ಳುತ್ತದೆ. ಕಾಲೇಜಿನಲ್ಲಿ ಪಠ್ಯ ವಿಷಯವನ್ನು ಹೊರತು ಪಡಿಸಿ ಇತರ ಚಟುವಟಿಕೆಯನ್ನು ಕಲಿಯುವುದರಿಂದ ಹೊಸ ಅವಕಾಶಗಳನ್ನು ನಾವೇ ರೂಪಿಸಿಕೊಳ್ಳಬಹುದು. ಶಿಕ್ಷಣ ಮುಗಿದ ನಂತರ ಒದಗುವ ಯಾವುದೇ ರೀತಿಯ ಉದ್ಯೋಗವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್‍ನ ಕಿರಿಯ ಸಹಾಯಕ ಪವನ್ ನಾಯಕ್ ಬಿ. ಹೇಳಿದರು.

Advertisement
Advertisement
Advertisement

ಅವರು ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಪಯಣ’ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಬದುಕಿನಲ್ಲಿ ಯಶಸ್ಸು ಗಳಿಸಲು ಸದಾ ಪ್ರಯತ್ನಿಸುತ್ತಿರಬೇಕು. ನಿರಂತರ ಪ್ರಯತ್ನದಿಂದ ವ್ಯಕ್ತಿತ್ವಕ್ಕೆ ಘನತೆ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿಷಯದ ಕುರಿತು ತಿಳಿದುಕೊಳ್ಳುವ ಜೊತೆಗೆ ಇತರ ವಿಷಯಗಳನ್ನು ಅರಿತುಕೊಂಡರೆ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದರು.

Advertisement

ಮಂಗಳೂರಿನ ಆ್ಯಕ್ಸಿಸ್ ಬ್ಯಾಂಕ್‍ನ ಸೇಲ್ಸ್ ಆಫಿಸರ್ ಸುಶ್ಮಿತಾ ರೈ ಅವರು ಮಾತನಾಡಿ, ಆತ್ಮಸ್ಥೈರ್ಯವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಹಾಗಿದ್ದಾಗ ಮುಂದೆ ವೃತ್ತಿ ಜೀವನವನ್ನು ಆರಂಭಿಸುವಾಗ ಇದು ಸಹಕಾರ ಮಾಡುತ್ತದೆ. ಸಮಾಜವನ್ನು ಅಥವಾ ವೇದಿಕೆಯ ಮುಂದೆ ಬಂದು ಮಾತನಾಡುವ ಕಲೆಯನ್ನು ರೂಢಿಸಿಕೊಳ್ಳಬೇಕು. ಇಂತಹ ಪ್ರಕ್ರಿಯೆಯನ್ನು ವಿದ್ಯಾರ್ಥಿಯಾಗಿದ್ದಾಗಲೇ ಅಭ್ಯಸಿಸಿಕೊಂಡರೆ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದರಲ್ಲದೆ ತಮ್ಮ ಜೀವನಾನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಕೆ. ಮಂಜುನಾಥ್ ಮಾತನಾಡಿ, ಎಂದಿಗೂ ಆಲಸ್ಯದಿಂದಿರದೆ ಹೊಸ ಚಿಂತನೆಯೊಂದಿಗೆ ತಮ್ಮ ದಿನವನ್ನು ಆರಂಭಿಸುವುದು ಉತ್ತಮ. ಯಾವುದೇ ಕಾರಣಕ್ಕೂ ನಾವು ನಮ್ಮತನವನ್ನು ಬಿಟ್ಟುಕೊಡದೆ ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳಬೇಕು. ಅದೇ ರೀತಿ ಹೊಸ ಸವಾಲುಗಳನ್ನು ಎದುರಿಸಲು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳುವುದರಿಂದ ಜೀವನದಲ್ಲಿ ಪ್ರಗತಿ ಸಾಧಿಸಬಹುದು ಎಂದು ಹೇಳಿದರು.

Advertisement

ವಿದ್ಯಾರ್ಥಿನಿ ಅನುಷಾ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗಗಳ ಮತ್ತು ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಡಾ. ವಿಜಯ ಸರಸ್ವತಿ ಬಿ. ಸ್ವಾಗತಿಸಿದರು. ವಿದ್ಯಾರ್ಥಿನಿ ರಶ್ಮಿ ಬಿ. ವಂದಿಸಿದರು. ವಿದ್ಯಾರ್ಥಿನಿ ಆಶ್ರಿತ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಅನನ್ಯಾ ವಿ., ಲಕ್ಷ್ಮೀ ಭಟ್, ರಾಘವೇಂದ್ರ, ವರ್ಷಿತ್ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನ.2 ರಿಂದ ಕಲರವ | ಹಕ್ಕಿ-ವನ್ಯ ಜೀವಿ – ಪಕೃತಿ ಛಾಯಾಚಿತ್ರ ಪ್ರದರ್ಶನ |
October 23, 2024
8:32 AM
by: ದ ರೂರಲ್ ಮಿರರ್.ಕಾಂ
ಅಕ್ಕ-2024ರ ಸಮ್ಮೇಳನಕ್ಕೆ ಅದ್ಧೂರಿ ಸಿದ್ದತೆ | 3 ದಿನಗಳ ಕಾಲ ಅಮೇರಿಕಾದ ರಿಚ್ಮಂಡ್ ನಗರದಲ್ಲಿ ಕನ್ನಡ ಡಿಂಡಿಮ
August 27, 2024
3:29 PM
by: The Rural Mirror ಸುದ್ದಿಜಾಲ
ಬದನಾಜೆ ಶಂಕರ್ ಭಟ್ | ಅಡಿಕೆ ಮೌಲ್ಯವರ್ಧನೆಯ ನೆಲ ವಿಜ್ಞಾನಿ | ಆ.18 ಕ್ಕೆ ನರೇಂದ್ರ ರೈ ದೇರ್ಲ ಅವರ ಪುಸ್ತಕ ಬಿಡುಗಡೆ |
August 14, 2024
3:40 PM
by: The Rural Mirror ಸುದ್ದಿಜಾಲ
ವಿಜೃಂಭಣೆಯಿಂದ ನಡೆಯಲಿದೆ ಈ ಬಾರಿಯ ದಸರಾ ನಾಡಹಬ್ಬ ಆಚರಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
August 13, 2024
10:26 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror