ವಿಶಾಖಾಪಟ್ಟಣಂ ವಿಷಾನಿಲ ಸೋರಿಕೆ ಪ್ರಕರಣ | ಕಠಿಣ ಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ

May 9, 2020
4:47 PM

ಮಂಗಳೂರು: ವಿಶಾಖಾಪಟ್ಟಣಂ ನಲ್ಲಿ ವಿಷಾನಿಲ ಸೋರಿಕೆ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ತಿಳಿಸಿದ್ದಾರೆ.

ದೇಶ ಕೊರೊನಾ ವಿರುದ್ಧ ಹೋರಾಡುತ್ತಿರುವಾಗ ‘ಭೋಪಾಲ್ ಅನಿಲ ದುರಂತ’ವನ್ನು ನೆನಪಿಸುವ ಗಂಭೀರ ಘಟನೆ ವಿಶಾಖಾಪಟ್ಟಣಮ್‌ ನಲ್ಲಿ ಘಟಿಸಿದೆ.  ಘಟನೆಯಲ್ಲಿ 11 ಜನರು ಮೃತಪಟ್ಟಿದ್ದು ಅನೇಕರ ಆರೋಗ್ಯದ ಸ್ಥಿತಿ ಗಂಭೀರವಾಗಿದೆ.  ‘ಭೋಪಾಲ್ ಅನಿಲ ದುರಂತ’ದ ದೋಷಿಗಳಿಗೆ ಶಿಕ್ಷೆಯಾಗದ ಕಾರಣ ಅದರಲ್ಲಿ ಮೃತಪಟ್ಟ 20 ಸಾವಿರ ಜನರಿಗೆ ಹಾಗೂ ಸ್ಥಳಾಂತಗೊಂಡಿದ್ದ 5 ಲಕ್ಷ  ಜನರಿಗೆ ಇದುವರೆಗೂ ನಿಜವಾದ ನ್ಯಾಯ ದೊರಕಿಲ್ಲ. ಇದೇ ಪರಿಸ್ಥಿತಿ ಪುನಃ ಉದ್ಭವಿಸಬಾರದೆಂದು ಸರಕಾರವು ವಿಶಾಖಾಪಟ್ಟಣಮ್‌ ನಲ್ಲಿ ದೋಷಿಗಳ ಮೇಲೆ ತಕ್ಷಣವೇ ಕಠಿಣ ಕ್ರಮಕೈಗೊಳ್ಳಬೇಕು. ಅದೇ ರೀತಿ ಇಂತಹ ಪರಿಸ್ಥಿತಿಯು ದೇಶದ ಇತರೆಡೆ ಉದ್ಭವಿಸಬಾರದೆಂದು ಘಾತಕ- ವಿಷಾನಿಲ ಬಳಸುವ ಯೋಜನೆಗಳನ್ನು ತಕ್ಷಣವೇ ಪರಿಶೀಲಿಸಿ ಅದರ ಸಮೀಕ್ಷೆ ನಡೆಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ರಾಜ್ಯ ಹಾಗೂ ಕೇಂದ್ರ ಸರಕಾರವನ್ನುಆಗ್ರಹಿಸಿದೆ.

ಅನಿಲ ಸೋರಿಕೆಯಾಗಲು ಸಂಬಂಧಪಟ್ಟ ಕಂಪನಿಯಷ್ಟೇ ಅಲ್ಲದೇ ಅಲ್ಲಿ ಸುರಕ್ಷತೆಯನ್ನು ಕಠಿಣವಾಗಿ ಪಾಲಿಸದಿರುವ ಪರಿಸರ ಇಲಾಖೆ ಹಾಗೂ ಇತರ ಸಂಬಂಧಿತ ಸರಕಾರಿ ಇಲಾಖೆಗಳು ಜವಾಬ್ದಾರವಾಗಿವೆ. ಆದುದರಿಂದ ದೋಷಿ ಕಂಪನಿಗಳೊಂದಿಗೆ ಸರಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆಯೂ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಯನಾಡಿನಲ್ಲಿ ಭೂಕುಸಿತದ ದುರಂತ | ಒಂದು ಬಲಿ , 7 ಮಂದಿ ನಾಪತ್ತೆ | ಇದು ಮಾನವ ನಿರ್ಮಿತ ದುರಂತ ಎಂದ ಸಚಿವ
July 7, 2026
3:44 PM
by: ದ ರೂರಲ್ ಮಿರರ್.ಕಾಂ
ವಯನಾಡಿನಲ್ಲಿ ಮತ್ತೆ ಭೂಕುಸಿತ ಭೀತಿ- ಸುರಂಗ ಯೋಜನಾ ಸ್ಥಳದಲ್ಲಿ ಮಣ್ಣು ಕುಸಿತ, ಹಲವರು ಸಿಲುಕಿರುವ ಶಂಕೆ
July 7, 2026
12:57 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 07-07-2026 | ಕರ್ನಾಟಕದಲ್ಲಿ ಇನ್ನೂ ಮೂರು ದಿನ ಮಳೆ – ಜುಲೈ 11 ರಿಂದ ಮಳೆ ತೀವ್ರ ಇಳಿಕೆ ಸಾಧ್ಯತೆ
July 7, 2026
12:25 PM
by: ಸಾಯಿಶೇಖರ್ ಕರಿಕಳ
ತೂಗುಸೇತುವೆಗಳ ಸರದಾರ ಡಾ. ಗಿರೀಶ್‌ ಭಾರದ್ವಾಜ್‌ ಅವರಿಗೆ ಗ್ರಾಮೀಣ ಭಾರತದ ಭಾವಪೂರ್ಣ ನಮನ
July 7, 2026
11:57 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror