ವಿಶ್ವಕಪ್ ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ಕಠಿಣ ಸವಾಲು ನೀಡಿದ ಭಾರತ

June 9, 2019
8:58 PM

ಲಂಡನ್ :  ವಿಶ್ವಕಪ್ ಕ್ರಿಕಟ್ ನ ತನ್ನ ಎರಡನೇ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ಪೇರಿಸಿದೆ.  ಆಸ್ಟ್ರೇಲಿಯಾ ತಂಡದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತು. ಆ ಮೂಲಕ ಆಸ್ಟ್ರೇಲಿಯಾಕ್ಕೆ 353 ರನ್ ಗೆಲುವಿನ ಗುರಿ ನೀಡಿದೆ.

Advertisement
Advertisement
Advertisement

ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ (117ರನ್, 109 ಬಾಲ್ 16ಬೌಂಡರಿ) ಬಾರಿಸಿದ ಆಕರ್ಷಕ ಶತಕ ಬೃಹತ್ ಮೊತ್ತ ಪೇರಿಸಲು ಭಾರತಕ್ಕೆ ಸಹಾಯಕವಾಯಿತು. ನಾಯಕ ವಿರಾಟ್ ಕೊಹ್ಲಿ 82ರನ್ (77 ಬಾಲ್, 4 ಬೌಂಡರಿ, 2 ಸಿಕ್ಸರ್), ರೋಹಿತ್ ಶರ್ಮ 57 ರನ್(70 ಬಾಲ್ 3 ಬೌಂಡರಿ,1 ಸಿಕ್ಸರ್), ಹಾರ್ದಿಕ್ ಪಾಂಡ್ಯ 48ರನ್(27ಬಾಲ್, 3ಬೌಂಡರಿ,4 ಸಿಕ್ಸರ್), ಮಹೇಂದ್ರ ಸಿಂಗ್ ಧೋನಿ 27ರನ್ (14ಬಾಲ್, 3 ಬೌಂಡರಿ, 1ಸಿಕ್ಸರ್ ), ಕೆ.ಎಲ್. ರಾಹುಲ್ ಮೂರು ಬಾಲ್ ನಲ್ಲಿ 11 ರನ್ ಗಳಿಸಿ ಆಕರ್ಷಕ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ವಿಶ್ವಕಪ್ ಪಂದ್ಯಾವಳಿಯಲ್ಲಿ ತನ್ನ ನಾಲ್ಕನೇ ಅತೀ ದೊಡ್ಡ ಮೊತ್ತ ದಾಖಲಿಸುವ ಮೂಲಕ ಕೆನ್ನಿಂಗ್ಟನ್ ಓವಲ್ ನಲ್ಲಿ ಭಾರತ ತನ್ನ ಬ್ಯಾಟಿಂಗ್ ಶಕ್ತಿಯನ್ನು ಪ್ರದರ್ಶಿಸಿತು. ಶಿಖರ್ ಧವನ್- ರೋಹಿತ್ ಶರ್ಮ ಓಪನಿಂಗ್ ಜೋಡಿ ಮೊದಲ ವಿಕೆಟಿಗೆ 127 ರನ್ ಕಲೆ ಹಾಕಿತ್ತು. ಎರಡನೇ ವಿಕೆಟ್ ಗೆ ಧವನ್ -ಕೊಹ್ಲಿ 93 ರನ್ ಪೇರಿಸ ಭಾರತದ ಇನ್ನೀಂಗ್ಸ್ ಗೆ ಭದ್ರ ಬುನಾದಿ ಹಾಕಿತ್ತು. ಕೋಹ್ಲಿ-ಹಾರ್ದಿಕ್ ಪಾಂಡ್ಯ ಜೋಡಿ 53 ಬಾಲ್ ನಲ್ಲಿ 80 ರನ್ ಕಲೆ ಹಾಕಿ ಆಸ್ಟ್ರೇಲಿಯಾ ಬೌಲರ್‌ಗಳ ಬೆವರಿಳಿಸಿದರು.

Advertisement

ಇತ್ತೀಚಿನ ವರದಿ ಬಂದಾಗ   ಆಸ್ಟ್ರೇಲಿಯಾ 20 ಓವರ್ ನಲ್ಲಿ 1 ವಿಕೆಟ್ ನಷ್ಟಕ್ಕೆ 105 ರನ್ ಮಾಡಿದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲಸು ಮೌಲ್ಯವರ್ಧನೆಗೆ ನೆರವು | ಹಲಸು ಉದ್ಯಮದ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡ ಒಡಿಶಾ |
December 21, 2024
6:50 AM
by: The Rural Mirror ಸುದ್ದಿಜಾಲ
ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸಿದ ಸರ್ಕಾರ | 422 ರೂಪಾಯಿ ಏರಿಕೆ |
December 21, 2024
6:32 AM
by: The Rural Mirror ಸುದ್ದಿಜಾಲ
ವಿಶ್ವ ಚೆಸ್ ಚಾಂಪಿಯನ್‌ಶಿಪ್‌ | ಭಾರತದ ಗುಕೇಶ್ ಚಾಂಪಿಯನ್‌ | ವಿಶ್ವದ ಕಿರಿಯ ಚಾಂಪಿಯನ್ ಆದ ಗುಕೇಶ್‌ |
December 12, 2024
6:48 PM
by: The Rural Mirror ಸುದ್ದಿಜಾಲ
ಹೆಚ್ಚುತ್ತಿರುವ ವಾಯುಮಾಲಿನ್ಯ ಹಾಗೂ ತಾಪಮಾನ | ಸೋಲಾರ್‌ ಇಂಧನದ ಮೇಲೆ ಪರಿಣಾಮ ಏನು..?
December 10, 2024
7:15 AM
by: ವಿಶೇಷ ಪ್ರತಿನಿಧಿ

You cannot copy content of this page - Copyright -The Rural Mirror