ಲಂಡನ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ ಲಭಿಸಿದೆ. ತನ್ನ ಪ್ರಥಮ ಪಂದ್ಯದಲ್ಲಿ ಆರು ವಿಕೆಟ್ ಗಳ ಜಯದೊಂದಿಗೆ ಭಾರತ ಐಸಿಸಿ ವಿಶ್ವಕಪ್ ನ ಅಭಿಯಾನ ಆರಂಭಿಸಿದೆ.
ದಕ್ಷಿಣ ಆಫ್ರಿಕಾ ನೀಡಿದ 228 ರನ್ ಗಳ ಗುರಿಯನ್ನು ಬೆಂಬೆತ್ತಿದ ಭಾರತ 47.3 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತ್ತು. ಭರ್ಜರಿ ಶತಕ ಗಳಿಸಿದ ರೋಹಿತ್ ಶರ್ಮ ಭಾರತದ ಜಯದ ರುವಾರಿಯಾದರು. ರೋಹಿತ್ ಶರ್ಮ ಔಟಾಗದೆ 122 ರನ್ ಗಳಿಸಿದರು. ಮಹೇಂದ್ರ ಸಿಂಗ್ ಧೋನಿ 34, ಕೆ.ಎಲ್.ರಾಹುಲ್ 26, ವಿರಾಟ್ ಕೊಹ್ಲಿ 18, ಶಿಖರ್ ಧವನ್ 8 ಮತ್ತು ಹಾರ್ದಿಕ್ ಪಾಂಡ್ಯ ಓಟಾದಗದೆ 15 ರನ್ ಗಳಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel