ವಿಶ್ವ ಪರಿಸರ ದಿನಕ್ಕೊಂದು ನಮನ

Advertisement

ಶಾಲಾ ಬಾಲಕನೊಬ್ಬ ಮನೆಯಿಂದ ಹೊರಡುವಾಗ ಎರಡು ಬಾಟಲ್ ನೀರು ಹಿಡಿದುಕೊಂಡು ಹೊರಡುತ್ತಿದ್ದ. ಅಮ್ಮನಿಗೆ ಕುತೂಹಲ. ಮಗ ಯಾಕೆ ಎರಡು ಬಾಟಲ್ ಗಳನ್ನು ಹಿಡಿದುಕೊಂಡು  ಹೋಗುತ್ತಾನೆ ? ಅಮ್ಮ ಹಿಂಬಾಲಿಸಿ ಹೋದಳು. ಶಾಲೆಯ ದಾರಿಯ ಪಕ್ಕದಲ್ಲಿ ಒಂದು ಗಿಡಕ್ಕೆ ತನ್ನ ಒಂದು ಬಾಟಲಿಯ ನೀರುಣಿಸುವುದನ್ನು  ಅಮ್ಮ  ಕಂಡಳು. ಅಮ್ಮನಿಗೆ ಎಲ್ಲಾ ಅರ್ಥವಾಯಿತು. ಮಗನ ಬಗ್ಗೆ ಹೆಮ್ಮೆಯೆನಿಸಿತು. 

Advertisement
ಈ ಘಟನೆಯನ್ನು ನಮ್ಮ ಪತ್ರಿಕೋದ್ಯಮ ವಿಭಾಗದ ಪ್ರಥಮ ತರಗತಿಯಲ್ಲಿ ಉಪನ್ಯಾಸಕರಾದ ಭಾಸ್ಕರ ಹೆಗಡೆಯವರು ಹೇಳಿದರು. ಹುಡುಗನ ಈ ವರ್ತನೆ ಯನ್ನು ದಿನನಿತ್ಯ ಅವರು ಗಮನಿಸುತ್ತಿದ್ದರು. ನೀರು ಹಾಕುವುದು ಮಾತ್ರವಲ್ಲದೆ ಗಿಡದ ಸುತ್ತಲಿನ ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛವಾಗಿರುವಂತೆ ಕಾಳಜಿ ವಹಿಸುತ್ತಿದ್ದ ಹುಡುಗನ ವರ್ತನೆ ಅನುಕರಣೀಯ. ಹುಡುಗನ ಈ ಗುಣವನ್ನು, ಪ್ರತಿಯೊಂದು ತರಗತಿ ಯಲ್ಲಿಯೂ ಹೇಳಿ ಮಕ್ಕಳ ಮನಪರಿವರ್ತನೆಗೆ ಪ್ರಯತ್ನಿಸುತ್ತಿದ್ದರು. 
ಶಾಲೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಗುರುಗಳು ಏನು ಹೇಳುತ್ತಾರೋ ಅದನ್ನೇ ಪಾಲಿಸುತ್ತಾರೆ. ಅಲ್ಲಿ ಹೇಳುವ  ವಿಷಯವನ್ನೇ ಮಕ್ಕಳು ನಂಬುವುದು,      ಒಪ್ಪುವುದು. ಮನೆಯ ಹಿರಿಯರು ಹೇಳಿದ ಎಷ್ಟೋ ವಿಷಯಗಳನ್ನು ರೂಡಿಸಿ ಕೊಳ್ಳದ ಮಕ್ಕಳು ಗುರು ಗಳು ಹೇಳಿದ ಕೂಡಲೇ ಮಾಡಿಬಿಡುತ್ತಾರೆ.  ಪರಿಸರದ  ಕುರಿತು ಬಾಲ್ಯದಲ್ಲಿ ಕೇಳಿದ ಮಾತುಗಳು ನೋಡಿದ ಚಿತ್ರಗಳು ಗಾಢವಾದ ಪರಿಣಾಮ ಬೀರುತ್ತವೆ. ಹಾಗಾಗಿ  ಒಳ್ಳೆಯ ಅಧ್ಯಾಪಕರು ಶಾಲೆಗಳಲ್ಲಿ ಇದ್ದರೆ ಅದೇ ಮಕ್ಕಳ ,ಪೋಷಕರ ಪುಣ್ಯ.
ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಕಾರ್ಯ ಕ್ರಮಗಳು ಎಲ್ಲೆಡೆಯೂ ನಡೆಯುತ್ತಿದೆ.ಈ ಸಂಬಂಧ ಹೆಚ್ಚಿನ ಕಾಳಜಿ ಜನರಲ್ಲಿ  ಮೂಡುವ ಅಗತ್ಯವಿದೆ. ಪರಿಸರ ಚೆನ್ನಾಗಿ ಇದ್ದರೆ  ನಾವು ಆರೋಗ್ಯವಾಗಿರ ಬಹುದು.  ಪರಿಸರ ಬೇರೆಯಲ್ಲ, ನಾವು ಬೇರೆಯಲ್ಲ ಎಂಬ ಸೂಕ್ಷ್ಮ ವಿಷಯ ಜನರಿಗೆ ಅರ್ಥವಾದ ದಿನವೇ ನಿಜವಾದ  ಪರಿಸರ ದಿನ . ಆಗಲೇ ವಿಶ್ವ ಪರಿಸರ ದಿನದ ಆಚರಣೆಗೊಂದು ಮಹತ್ವ. ದೊರೆಯುವುದು.
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ವಿಶ್ವ ಪರಿಸರ ದಿನಕ್ಕೊಂದು ನಮನ"

Leave a comment

Your email address will not be published.


*