ವಿಶ್ವ ಮಹಿಳಾ ದಿನ: ಒಂದು ಜುಟ್ಟಿನ ಕಥೆ

March 8, 2020
8:11 AM

ಅಂಗಳದ ಸಿಮೆಂಟು ಇಟ್ಟಿಗೆ ಹಾಸಿನ ನಡುವೆ ಬೆಳೆದ ಹುಲ್ಲಿನ ಗಿಡಗಳನ್ನು ಚಿಕ್ಕದಿರುವಾಗಲೇ ಕೀಳದೇ ಇದ್ದರೆ ಆಮೇಲೆ ತೆಗೆಯಲು ಬಾರದು. ಹಾಗಾಗಿ ಆವಾಗವಾಗ ಕಿತ್ತು ಬಿಸಾಕಬೇಕು. ಅವುಗಳಲ್ಲಿ ಒಂದು ಗಿಡ ನಾನೆಷ್ಟು ಕಿತ್ತರೂ ಮತ್ತೆ ಮತ್ತೆ ಚಿಗುರ ತೊಡಗಿತು. ಅಮೇಲಿನ ಅಡಕೆ ಕೊಯ್ಲಿನ ಗಡಿಬಿಡಿಯಲ್ಲಿ ಆಕಡೆ ಗಮನವೇ ಹರಿಸಿರಲಿಲ್ಲ.

Advertisement
Advertisement
Advertisement

ಒಂದು ದಿನ ಆ ಕಡೆ ಯಾಕೋ ನೋಡಿದಾಗ ಕೆಂಪು ಕೆಂಪಾದ ಬಣ್ಣದ ಹೂವಿನ ಮೊಗ್ಗು ಕಂಡಂತಾಯಿತು. ಕುತೂಹಲದಿಂದ ಹತ್ತಿರ ಹೋಗಿ ನೋಡಿದಾಗ ಅಚ್ಚರಿಯ ಸಂಗತಿ ನನಗೆದುರಾಯಿತು. ಎಷ್ಟೋ ಬಾರಿ ಬೀಜ ಹಾಕಿ ಒಂದು ಗಿಡವೂ ಹುಟ್ಟದೆ ಸತಾಯಿಸಿದ ಕೋಳಿ ಜುಟ್ಟಿನ ಗಿಡ ತಾನೇತಾನಾಗಿ ಹುಟ್ಟಿ ಬಿಟ್ಟಿತ್ತು. ನಾನು ಎಷ್ಟು ಬಾರಿ ಕಿತ್ತರೂ ಅಲ್ಲೇ ಬೆಳೆಯುತ್ತೇನೆ ಎಂಬ ಹಠದಲ್ಲಿ ಬೆಳೆದ ಈ ಗಿಡ ನನ್ನ ಹಲವು ಪ್ರಶ್ನೆಗಳಿಗೆ ಉತ್ತರವಾಗಿ ಕಂಡಿತು.

Advertisement

ನಮ್ಮ ಸುತ್ತಮುತ್ತಲಿನ ಕುಟುಂಬಗಳನ್ನು ಗಮನಿಸಿದಾಗ ಕೆಲವೊಂದು ವಿಷಯಗಳು ಅಚ್ಚರಿಯನ್ನುಂಟು ಮಾಡುತ್ತವೆ. ಮನೆಯಲ್ಲಿ ಹಿರಿಯರು ಅವಿದ್ಯಾವಂತರಾಗಿದ್ದು ಶ್ರಮಿಕ ವರ್ಗದವರಾದರು, ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆದು ಉನ್ನತ ಉದ್ಯೋಗದಲ್ಲಿದ್ದಾರೆ. ಸ್ವಯಂ ಪರಿಶ್ರಮದ ಫಲ. ಹೆಮ್ಮೆಯೆನಿಸುತ್ತದೆ. ಉದ್ಯೋಗಸ್ಥ, ಅನುಕೂಲಸ್ಥ ಮನೆತನದ ಮಕ್ಕಳಾದರೂ , ಬೇಕಾದ ಮಾರ್ಗದರ್ಶನದ ವ್ಯವಸ್ಥೆಗಳಿದ್ದರೂ ಏನೂ ಮಾಡದೇ ಸುಮ್ಮನೆ ಟಿ.ವಿ, ಸಿನೆಮಾ ನೋಡುತ್ತಾ, ನಮೂನೆವಾರು ಪ್ಯಾಶನ್ ಮಾಡುತ್ತಾ, ಕಾರು, ಬೈಕುಗಳಲ್ಲಿ ತಿರುಗುತ್ತಾ, ದೇಶ ವಿದೇಶಗಳಲ್ಲಿ ಸುತ್ತಾಟ ಮಾಡುತ್ತಾ ಯಾವುದೇ ದಿಟ್ಟ ನಿರ್ಧಾರಗಳಿಲ್ಲದೆ ತಮ್ಮ ಯೌವನವನ್ನು ನಿರರ್ಥಕವಾಗಿ ಕಳೆಯುವುದನ್ನು ಬೇಸರದಿಂದ ದಿಟ್ಟಿಸುವುಂತಾಗಿದೆ.

ಪ್ರತಿಯೊಬ್ಬರಿಗೂ ಒಂದೊಂದು ಕನಸುಗಳಿರುತ್ತವೆ. ಅವುಗಳು ಸಣ್ಣದಾಗಿರಲಿ ದೊಡ್ಡದಾಗಿರಲಿ ಅವರವರಿಗೆ ಅದು ಮಹತ್ವ ದ್ದೇ. ತಮ್ಮ ಭವಿಷ್ಯದ ಬಗ್ಗೆ ಏನೋ ಒಂದು ನಿರೀಕ್ಷೆಗಳಿರುತ್ತವೆ. ಅದರತ್ತ ದಿಟವಾದ ಹೆಜ್ಜೆಗಳನ್ನು ಇಡುತ್ತಿರುವಾಗ ತಟ್ಟನೆ ಬ್ರೇಕ್ ಹಾಕಲು‌ ಹಲವರು ಕಾದುಕೊಂಡೇ ಇರುತ್ತಾರೆ. ಗೊತ್ತಿದ್ದೋ , ಗೊತ್ತಿಲ್ಲದೆಯೋ ಅಡ್ಡಬರುವವರೇ ಹೆಚ್ಚು. ಇನ್ನೊಬ್ಬರ ಕನಸುಗಳನ್ನು ಹೊಸಕುವುದರಲ್ಲೇ ಪ್ರೀತಿ. ಏನೇ ಒತ್ತಡಗಳಿದ್ದರೂ ಇಂದು ಮಹಿಳೆ ಅವುಗಳನ್ನೆಲ್ಲಾ ಮೆಟ್ಟಿ ಮುನ್ನಡೆಯುವ ಹಂತವನ್ನು ತಲುಪಿಯಾಗಿದೆ. ಯಾರ ನಿರ್ಬಂಧವೂ ಆಕೆಗೆ ಅಡ್ಡಿಯಾಗದು.

Advertisement

ಆಕೆ ತನ್ನ ಜನ್ಮರಾದ್ಯ ಸೌಂದರ್ಯ ಪ್ರಿಯಳು. ತನ್ನ ಉಡುಪಿರಲಿ, ಮಾತಿರಲಿ, ಕೆಲಸ ಕಾರ್ಯಗಳಿರಲಿ, ಪೂಜಾ ಕೈಂಕರ್ಯಗಳಿರಲಿ ಎಲ್ಲವನ್ನೂ ಇಷ್ಟಪಟ್ಟು ವೈವಿಧ್ಯಮಯವಾಗಿ ಸಂಭ್ರಮಿಸುವುದು ಆಕೆಯ ಹುಟ್ಟುಗುಣ. ಆಕೆ ಸೌಂದರ್ಯ ಪ್ರಜ್ಞೆಯುಳ್ಳವಳು. ತಾನು ಮಾತ್ರವಲ್ಲದೆ ತನ್ನ ಸುತ್ತಲಿನ ಪ್ರದೇಶದ ಕುರಿತು ಆಸಕ್ತಿ ವಹಿಸುವವಳು. ಯಾವುದೇ ಕೆಲಸವನ್ನಾದರೂ ಬಹಳ ಆಸಕ್ತಿಯಿಂದ , ಜಾಣ್ಮೆಯಿಂದ ನಿಭಾಯಿಸುವ ಕೌಶಲ ಉಳ್ಳವಳು. ಮಗು ಹುಟ್ಟುವಾಗಲೇ ಗಂಡು, ಹೆಣ್ಣೆಂಬ ತಾರತಮ್ಯ ಭಾವನೆಯೊಂದಿಗೇ ಜನನವಾಗುತ್ತದೆ. ಅಲ್ಲಿಂದ ಪ್ರತಿಯೊಂದು ಹೆಜ್ಜೆಯಲ್ಲೂ ಹೋರಾಟವೇ ಬದುಕು. ನಾವು ಹಾಗಿಲ್ಲ ಮಕ್ಕಳೆಲ್ಲರೂ ಒಂದೇ ಎಂಬವರೂ ಹೊರತಲ್ಲ.

ಒಗ್ಗರಣೆ ಸಿಡಿದಾಗ ರಟ್ಟುವ ಸಾಸಿವೆ ಮೈ ಮೇಲೆ ಬಿದ್ದರೇ ಉರಿ ತಡೆಯಲು ಕಷ್ಟವಾಗುತ್ತದೆ. ಇನ್ನೂ ಯಾವುದೋ ಕ್ಷುಲ್ಲಕ ಕಾರಣಗಳಿಗಾಗಿ ಆ್ಯಸಿಡ್ ಎರಚಿ , ಸೀಮೆಎಣ್ಣೆ , ಪೆಟ್ರೋಲ್ ಹಾಕಿ ಹೆಣ್ಣು ಮಕ್ಕಳ ಮೇಲೆ ದಾಳಿ ಮಾಡುತ್ತಾರಲ್ಲಾ? ಹೇಗೆ ಸಹಿಸಿಕೊಂಡಾರು ಪಾಪಾ ಈ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು.

Advertisement

ಮಹಿಳೆ ತನ್ನದೇ ಸ್ವಂತ ಇಚ್ಛೆಯಿಂದ ಏನು ಮಾಡಿದರೂ ಪ್ರಾಥಮಿಕ ಹಂತದಲ್ಲಿ ಬಹಳ ಕಷ್ಟ ಪಡಬೇಕಾಗುತ್ತದೆ. ಒಬ್ಬ ವ್ಯಕ್ತಿ ಸ್ವಂತ ಉದ್ದಿಮೆ ಮಾಡ ಬೇಕೆಂದರೇ ಯೋಚನೆ ಮಾಡಬೇಕಾದ ದಿನಗಳು . ಇನ್ನೂ ಮಹಿಳೆಯನ್ನು ಬಿಟ್ಟಾರೇ. ಇದು ಯಾವುದನ್ನೂ ಲೆಕ್ಕಿಸದೆ , ಯಾರ ಮಾತಿಗೂ ಜಗ್ಗದೆ ಮುನ್ನಡೆಯುವ ಧೈರ್ಯ ವಂತ ಮಹಿಳೆಗಿದು ಕಾಲ. ಒಮ್ಮೆ ಚಾಕಚಕ್ಯತೆ ಗಳಿಸಿದರೆ ಆಕೆಗೆ ಆಕೆಯೇ ಸಾಟಿ. ಲೋಕವೇ ಜೈ ಅನ್ನುತ್ತದೆ. ಆದರೆ ಅಲ್ಲಿಯವರೆಗಿನ ಹಾದಿ ಇದೆಯಲ್ಲಾ ಅದು ಮುಳ್ಳಿನ ಹಾದಿ. ಹಲವು ಏಟುಗಳು. ಇವುಗಳನ್ನೆಲ್ಲಾ ಮೆಟ್ಟಿ ನಿಂತು, ಯಾವುದಕ್ಕೂ ಬಗ್ಗದೆ , ಕುಗ್ಗದೆ ಮುನ್ನಡೆಯುವಾಕೆ ಮುಂದೆ ಯಶಸ್ವಿ ಮಹಿಳೆ ಎನಿಸಿ ಕೊಳ್ಳುತ್ತಾಳೆ.

ಇಂದು ಯಾವುದೇ ಉದ್ಯಮವಿರಲಿ, ಉದ್ಯೋಗವೇ ಆಗಲಿ ,ಯಾವುದೇ ಕ್ಷೇತ್ರವಿರಲಿ ಅಲ್ಲಿ ಮಹಿಳಾ ಪ್ರಾತಿನಿಧ್ಯವಿದ್ದೇ ಇದೆ. ಜವಾಬ್ದಾರಿಯುತ ಕಾರ್ಯವನ್ನು ಸಮರ್ಥವಾಗಿ ನಿರ್ವಹಣೆ ಮಾಡುವ ಹೊಣೆಯನ್ನು ಮಹಿಳೆಯರು ಹೊತ್ತಿದ್ದಾರೆ, ಯಶಸ್ಸು ಗಳಿಸಿದ್ದಾರೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ಮಹಿಳೆಯರ ನಾಯಕತ್ವವನ್ನು ಎತ್ತಿ ಹಿಡಿದಿದೆ. ನೆಲ, ಜಲ , ವಾಯು ಮೂರು ಸೇನಾ ಕ್ಷೇತ್ರಗಳಲ್ಲಿ ಮಹಿಳೆಯರು ಸೈ ಎನಿಸಿ ಕೊಂಡುದು ಹೆಮ್ಮೆಯ ವಿಷಯ.

Advertisement

ಆಕೆ ಬಯಸುವುದು ಒಂದು ಹಿಡಿ ಪ್ರೀತಿ, ವಿಶ್ವಾಸ. ಕೆಲವೊಮ್ಮೆ ಬಟ್ಟೆ , ಚಿನ್ನದ ಮೇಲೆ ಇಷ್ಟವಾದರೂ ತಪ್ಪಲ್ಲಾ ಬಿಡಿ, ಆಕೆ ಸೌಂದರ್ಯ ಪ್ರಜ್ಞೆಯುಳ್ಳವಳಲ್ಲವೇ. ಎಲ್ಲವನ್ನೂ ಕಲರ್ ಫುಲ್ ಆಗಿಯೇ ಸವಿಯುವ ಗುಣ ಜನ್ಮಜಾತವಾಗಿ ಬಂದುದು.

ಸಂಗೀತ, ನೃತ್ಯ, ವಿಜ್ಞಾನ, ಉದ್ಯಮ, ಬರಹ,ರಾಜಕೀಯ, ಶಿಕ್ಷಣ, ವೈದ್ಯಕೀಯ, ತಾಂತ್ರಿಕ ಹೀಗೆ ಎಲ್ಲೆಲ್ಲೂ ಮಿಂಚುತ್ತಿರುವ ಮಹಿಳೆಯರ ಸಂಭ್ರಮಕ್ಕೆ ಯಾವುದೂ ಅಡ್ಡಿಯಾಗಲಾರದು. ಆರೋಗ್ಯ, ಶೈಕ್ಷಣಿಕ, ಮಾನಸಿಕ, ದೈಹಿಕ, ಹಣಕಾಸು ಈ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಮಹಿಳೆಯರಿಗಿರುವಾಗ ಮಹಿಳಾ ದಿನಾಚರಣೆಯನ್ನು ಸಂಭ್ರಮದಲ್ಲಿ ಆಚರಿಸುವುದರಲ್ಲಿ ತಪ್ಪೇನಿದೆ. ಖುಷಿಯಿಂದ ಹೇಳೋಣ ವಿಶ್ವ ಮಹಿಳಾ ದಿನದ ಶುಭಾಶಯಗಳು.

Advertisement

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಅಡಿಕೆ ಕ್ಯಾನ್ಸರ್‌ಕಾರಕ | ತಿರುಚಿದ ವರದಿ ಪ್ರಕಟಿಸಿದ WHO | ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಕ್ಯಾಂಪ್ಕೊ ಒತ್ತಾಯ |
November 26, 2024
7:05 PM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಔಷಧೀಯ ಗುಣ | “we made” ಅಡಿಕೆಯ ಲಿಕ್ವಿಡ್‌ ಸೋಪು | ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ |
November 26, 2024
7:11 AM
by: ಮಹೇಶ್ ಪುಚ್ಚಪ್ಪಾಡಿ
ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |
November 25, 2024
8:44 PM
by: The Rural Mirror ಸುದ್ದಿಜಾಲ
ಮಲೆನಾಡಿನಲ್ಲಿ ಕಾಡಾನೆ ಹಾವಳಿ ತಡೆಗೆ ಅಧಿವೇಶನದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ
November 25, 2024
7:15 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror