ವಿ ಬಿ ಅರ್ತಿಕಜೆ ಅವರಿಗೆ ಬಾಳಿಲ ಪ್ರಶಸ್ತಿ ಪ್ರದಾನ

May 6, 2019
10:00 AM

ಪುತ್ತೂರು: ಕಾವು ಜನಮಂಗಲದಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ವುಈಶ್ವರಮಂಗಲ ಪ್ರಾಂತ ಹವ್ಯಕ ಮಹಾಸಭಾದ ಸಹಕಾರದಲ್ಲಿ `ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿಯನ್ನು ಹಿರಿಯ ಸಾಹಿತಿ ವಿ.ಬಿ. ಅರ್ತಿಕಜೆಯವರಿಗೆ ಪ್ರದಾನ ಮಾಡಲಾಯಿತು.

Advertisement
Advertisement

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಚಿಂತಕ ಪೂರ್ಣಾತ್ಮರಾಮ,  ದೇಹ ಮತ್ತು ಮನಸ್ಸಿನ ಸಮತೋಲನವು ಕರ್ಮಯೋಗಿಗಳಿಗೆ ಅಗತ್ಯ. ಮಲೆನಾಡ ಹಸಿರಿನ ಹಿಂದೆ ಹವ್ಯಕರ ದುಡಿಮೆಯಿದೆ, ಪರಿಸರ ಪ್ರೀತಿಯಿದೆ. ನೂಲಿಗೆ ಸೂಜಿಯ ನೇತೃತ್ವ ಬೇಕು. ಸೂಜಿ ತನ್ನ ಕೈಂಕರ್ಯವನ್ನು ಪೂರೈಸಿ ಮುಂದೆ ಸಾಗುವಂತೆ ನಾಯಕನಾದವನು ಮುಂದಿನ ಕೆಲಸ ಕಾರ್ಯವನ್ನು ಪೂರೈಸುವತ್ತ ಗಮನಹರಿಸಬೇಕು ಎಂದು.

Advertisement

ನಿವೃತ್ತ ಜಿಲ್ಲಾ ನ್ಯಾಯಮೂರ್ತಿ ಮನಮೋಹನ ಬನಾರಿ ಅಧ್ಯಕ್ಷತೆ ವಹಿಸಿದರು. ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕ ಸಂಚಾಲಕ ಚಂದ್ರಶೇಖರ ದಾಮ್ಲೆ, ಈಶ್ವರಮಂಗಲ ಪ್ರಾಂತ ಹವ್ಯಕ ಮಹಾಸಭಾದ ಅಧ್ಯಕ್ಷ ಶಿವಪ್ರಸಾದ್ ಪಟ್ಟೆ ಉಪಸ್ಥಿತರಿದ್ದರು.

ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿಯನ್ನು ಹಿರಿಯ ಸಾಹಿತಿ ವಿ.ಬಿ. ಅರ್ತಿಕಜೆಯವರಿಗೆ ಪ್ರದಾನ ಮಾಡಲಾಯಿತು. ಕುಮಾರಸ್ವಾಮಿ ತೆಕ್ಕುಂಜ ಬರೆದ ಲಲಿತ ಪ್ರಬಂಧಗಳ ಸಂಕಲನ `ಪಾರುಪತಿಯ ಪಾರುಪತ್ಯ’, ರಘುರಾಮಮುಳಿಯ ಅವರು ಭಾಮಿನಿ ಷಟ್ಪದಿಯಲ್ಲಿ ಬರೆದ `ಪೆರ್ಲಲ್ಲೊಂದುಪಿಕ್ಲಾಟ’ ಮತ್ತು ಶೀಲಾ ಲಕ್ಷ್ಮಿ ವರ್ಮುಡಿ ರಚಿಸಿದ`ಅಬ್ಬೇ! ಎನಗೆಅರುಂಧತಿಯಕಂಡಿದಿಲ್ಲೆ!!’ಹವ್ಯಕ ಕಾದಂಬರಿಯನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

Advertisement

ಪ್ರತಿಷ್ಠಾನದ ವತಿಯಿಂದ ನೀಡಲಾಗುವ`ವೇದ ವಿದ್ಯಾನಿಧಿ’ಯನ್ನು ಚೂಂತಾರು ದಿ| ಕೃಷ್ಣ ಭಟ್ ಪ್ರತಿಷ್ಠಾನ (ರಿ) ಇವರಿಗೆ ನೀಡಲಾಯಿತು. ಈ ಕಾರ್ಯಕ್ರಮವನ್ನು ಒಪ್ಪಣ್ಣ ಪ್ರತಿಷ್ಠಾನದ ವೇದ ವಿದ್ಯಾ ವಿಭಾಗದ ಸಂಚಾಲಕ ಗಣೇಶ ಮಾಡಾವು ನಿರ್ವಹಿಸಿದರು.

ಶಿಕ್ಷಣ ವಿಭಾಗದಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿದ ಪೆರ್ನಾಜೆ ಕೆ. ಶಾಮಣ್ಣ, ಯಕ್ಷಗಾನ ಕಲಾವಿದ ರಾಮ ಜೋಯಿಸ ಬೆಳ್ಳಾರೆ, ಪಾಕಶಾಸ್ತ್ರ ಪರಿಣಿತರಾದ ಮರಿಮನೆ ಎಚ್.ನಾರಾಯಣ ಭಟ್ ಮಳಿ ,ದ್ವಿತೀಯ ಪಿಯುಸಿ ಯಲ್ಲಿ ಪ್ರಥಮ ಬಂದಿರುವ ಶ್ರೀಕೃಷ್ಣ ಶರ್ಮ ಕಡಪ್ಪು, ಸ್ವಸ್ತಿಕ್ ಮಾಡಾವು, ಸಾತ್ವಿಕಾ ಮಾಡಾವು, ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಿಂಚನಲಕ್ಷ್ಮಿಬಂಗಾರಡ್ಕ ಇವರನ್ನು ಗೌರವಿಸಲಾಯಿತು.

Advertisement

ಒಪ್ಪಣ್ಣನೆರೆಕರೆ ಪ್ರತಿಷ್ಠಾನದ ಗೌರವಾಧ್ಯಕ್ಷ ಈಶ್ವರ ಭಟ್ಎಳ್ಯಡ್ಕ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಶ್ರೀಕೃಷ್ಣ ಶರ್ಮ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಮಹೇಶ ಎಳ್ಯಡ್ಕ ಧನ್ಯವಾದ ಸಮರ್ಪಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ಯಕ್ಷಗಾನಾಮೃತ ಕಾರ್ಯಕ್ರಮದಲ್ಲಿ ದುರ್ಗಾಪರಮೇಶ್ವರೀ ಕುಕ್ಕಿಲ ಮತ್ತು ಶ್ರೀಕೃಷ್ಣ ಭಟ್ ಸುಣ್ಣಂಗುಳಿ ಭಾಗವಹಿಸಿದರು. ಹಿಮ್ಮೇಳದಲ್ಲಿ ಶಿವಶಂಕರಭಟ್ ಅಂಬೆಮೂಲೆ ಮತ್ತು ವರ್ಷಿತ ಅಜೆಕ್ಕಾರು ಸಹಕರಿಸಿದರು. ಸಭಾ ಕಾರ್ಯಕ್ರಮದ ನಂತರ `ರಾಜಾದಿಲೀಪ’ ಯಕ್ಷಗಾನ ಬಯಲಾಟ ಜರಗಿತು.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

2ನೇ ಹೆಚ್ಚುವರಿ ಭಾಷೆಯಾಗಿ ತುಳುವನ್ನು ಘೋಷಿಸಿ : ತುಳುವಿನಲ್ಲೇ ಸ್ಪೀಕರ್‌ಗೆ ಮನವಿ‌ ಮಾಡಿದ ಶಾಸಕ ಅಶೋಕ್ ರೈ
July 24, 2024
9:29 AM
by: The Rural Mirror ಸುದ್ದಿಜಾಲ
ಮಳೆಗೆ ಏನೇನಾಯ್ತು…? | ಮಳೆಯ ಅಬ್ಬರಕ್ಕೆ ಎಲ್ಲೆಲ್ಲಾ ಶಾಲೆಗಳಿಗೆ ರಜೆ..? | ಮುಂಜಾಗ್ರತೆಗಳು ಏನೇನು..? | ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರ ಏನಾಯ್ತು..? | ಶನಿವಾರವೂ ರೆಡ್‌ ಎಲರ್ಟ್‌ |
July 19, 2024
8:58 PM
by: ದ ರೂರಲ್ ಮಿರರ್.ಕಾಂ
ಮುಂದುವರಿದ ಮಳೆ ಅಬ್ಬರ | ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ತಾಲೂಕಿನ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ |
July 18, 2024
10:17 PM
by: ದ ರೂರಲ್ ಮಿರರ್.ಕಾಂ
ಭಾರೀ ಮಳೆ |ದ ಕ ಜಿಲ್ಲೆಯಲ್ಲಿ ಜು.18 ರಂದು ಶಾಲೆ -ಕಾಲೇಜುಗಳಿಗೆ ರಜೆ ಘೋಷಣೆ |
July 17, 2024
11:06 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror