ವೆಂಕಟರಮಣ ಸೊಸೈಟಿಯ 11ನೇ ಶಾಖೆ ಕುಶಾಲನಗರದಲ್ಲಿ ಕಾರ್ಯಾರಂಭ

Advertisement

ಕುಶಾಲನಗರ: ಸುಳ್ಯದಲ್ಲಿ ಪ್ರಧಾನ ಶಾಖೆಯನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 11ನೇ ಶಾಖೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಉದ್ಘಾಟನೆಯಾಗಿದೆ.

Advertisement

ಗೌಡರ ಯುವ ಸೇವಾ ಸಂಘ ಪ್ರವರ್ತಿತ ಸಂಸ್ಥೆಯ ನೂತನ ಶಾಖೆಯು ಕುಶಾಲನಗರ ಬಿ.ಎಂ.ರೋಡ್ ನಲ್ಲಿಯ ಬೈಚನಹಳ್ಳಿ ಆತ್ಮೀಯ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾರಂಭಗೊಂಡಿತು. ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ನೂತನ ಶಾಖೆಯನ್ನು ಉದ್ಘಾಟಿಸಿದರು. ವೆಂಕಟರಮಣ ಸೊಸೈಟಿಯ ಅಧ್ಯಕ್ಷ ಕೆ.ಸಿ.ನಾರಾಯಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಗಣಕೀಕರಣ  ವ್ಯವಸ್ಥೆಯನ್ನು ಮಾಜಿ ಸಚಿವ ಬಿ.ಎ.ಜೀವಿಜಯ ಉದ್ಘಾಟಿಸಿದರು. ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೆ. ಮೋಹನಕುಮಾರ್ ಪ್ರಥಮ ಠೇವಣಿ ಪತ್ರವನ್ನು, ಪ್ರಥಮ ಪಾಲುಪತ್ರವನ್ನು ಪೊಲೀಸ್ ಉಪ ಅಧೀಕ್ಷಕ ಮುರಳೀಧರ ಪಿ.ಕೆ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಪ್ಲಾಂಟರ್ ದಂಬೆಕೋಡಿ ಲವಕುಮಾರ್, ಹಿರಿಯ ವಕೀಲ ತೆಕ್ಕಡೆ ನೇಮಿರಾಜ್, ಆತ್ಮೀಯ ಕಾಂಪ್ಲೆಕ್ಸ್ ಮಾಲಕಿ ಡಿ.ಎಚ್.ರುಕ್ಮಿಣಿ ಭಾಗವಹಿಸಿದ್ದರು.

Advertisement
Advertisement

ಸಂಸ್ಥೆಯ ಸ್ಥಾಪಕಾಧ್ಯಕ್ಷ ಹಾಗೂ ರಾಜ್ಯ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಅಧ್ಯಕ್ಷ ಪಿ.ಸಿ‌.ಜಯರಾಮ ಮಾತನಾಡಿದರು.

ಉಪಾಧ್ಯಕ್ಷ ಪಿ.ಎಸ್.ಗಂಗಾಧರ ಸ್ವಾಗತಿಸಿ, ಮಾಜಿ ಅಧ್ಯಕ್ಷ ಚಂದ್ರ ಕೋಲ್ಚಾರ್ ವಂದಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ವೆಂಕಟರಮಣ ಸೊಸೈಟಿಯ 11ನೇ ಶಾಖೆ ಕುಶಾಲನಗರದಲ್ಲಿ ಕಾರ್ಯಾರಂಭ"

Leave a comment

Your email address will not be published.


*