ವೆಂಕಟರಮಣ ಸೊಸೈಟಿಯ 11 ನೇ ಶಾಖೆ ಕುಶಾಲನಗರದಲ್ಲಿ

Advertisement

ಸುಳ್ಯ: ಸುಳ್ಯದಲ್ಲಿ ಪ್ರಧಾನ ಶಾಖೆಯನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 11ನೇ ಶಾಖೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಕಾರ್ಯಾರಂಭಗೊಳ್ಳಲಿದೆ.

Advertisement

ಗೌಡರ ಯುವ ಸೇವಾ ಸಂಘ ಪ್ರವರ್ತಿತ ಸಂಸ್ಥೆಯ ನೂತನ ಶಾಖೆಯು ಜೂ.9 ರಂದು ಕುಶಾಲನಗರ ಬಿ.ಎಂ.ರೋಡ್ ನಲ್ಲಿಯ ಬೈಚನಹಳ್ಳಿ ಆತ್ಮೀಯ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಳ್ಳಲಿದೆ. ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸುವರು. ವೆಂಕಟರಮಣ ಸೊಸೈಟಿಯ ಅಧ್ಯಕ್ಷ ಕೆ.ಸಿ.ನಾರಾಯಣ ಗೌಡ ಅಧ್ಯಕ್ಷತೆ ವಹಿಸುವರು. ಗಣಕೀಕರಣವನ್ನು ಮಡಿಕೇರಿ ಶಾಸಕ ಅಪ್ಪಚ್ಚುರಂಜನ್, ಭದ್ರತಾಕೊಠಡಿಯನ್ನು ಮಾಜಿ ಸಚಿವ ಬಿ.ಎ.ಜೀವಿಜಯ ಉದ್ಘಾಟಿಸುವರು. ಪ್ರಥಮ ಠೇವಣಿ ಪತ್ರ ವಿತರಣೆಯನ್ನು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನಕುಮಾರ್, ಪ್ರಥಮ ಪಾಲುಪತ್ರ ವಿತರಣೆಯನ್ನು ಪೊಲೀಸ್ ಉಪ ಅಧೀಕ್ಷಕ ಮುರಳೀಧರ ಪಿ.ಕೆ, ಪ್ರಥಮ ಸಾಲಪತ್ರ ವಿತರಣೆಯನ್ನು ಪಟ್ಟಣ ಪಂಚಾಯತ್ ಸದಸ್ಯೆ ರೇಣುಕಾ ಜಗದೀಶ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ಲಾಂಟರ್ ದಂಬೆಕೋಡಿ ಲವಕುಮಾರ್, ವಕೀಲರಾದ ತೆಕ್ಕೆಡೆ ನೇಮಿರಾಜ್, ಆತ್ಮೀಯ ಕಾಂಪ್ಲೆಕ್ಸ್ ಮಾಲಕಿ ಡಿ.ಎಚ್.ರುಕ್ಮಿಣಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಸಿ.ನಾರಾಯಣ ಗೌಡ, ಉಪಾಧ್ಯಕ್ಷ ಪಿ.ಎಸ್.ಗಂಗಾಧರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ವೆಂಕಟರಮಣ ಸೊಸೈಟಿಯ 11 ನೇ ಶಾಖೆ ಕುಶಾಲನಗರದಲ್ಲಿ"

Leave a comment

Your email address will not be published.


*