ಶಾಲೆಯಲ್ಲಿ ನವಾನ್ನ ಭೋಜನ…! : ಭತ್ತದ ಬೇಸಾಯದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮ

November 21, 2019
9:01 AM

ಬೆಳ್ಳಾರೆ : ಸುಳ್ಯ ತಾಲೂಕಿನ ಬಾಳಿಲದ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ “ನವಾನ್ನ” ಭೋಜನದ ವಿಶೇಷ ಆಚರಣೆ ಹಾಗೂ ಭತ್ತದ ಬೇಸಾಯದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

Advertisement
Advertisement

ಶಾಲೆಯ ಅಂಗಳದಲ್ಲಿ ಭತ್ತದ ಬೇಸಾಯ ಮಾಡಿ ಮಕ್ಕಳಿಗೆ ಅನ್ನದ ಹಿಂದಿನ ಶ್ರಮವನ್ನು ತಿಳಿಸಿ  ಹಿರಿಯರು ಆಚರಿಸುತ್ತಿದ್ದ “ನವಾನ್ನ”ದ ಸವಿ ಊಟವನ್ನು ಮಕ್ಕಳಿಗೆ ಉಣಬಡಿಸಿ ಹಿಂದಿನ ಸಂಸ್ಕೃತಿಯನ್ನು  ಅನಾವರಣಗೊಳಿಸಲಾಯಿತು. ಜೊತೆಗೆ ಮಕ್ಕಳಿಗೆ ಅನ್ನದ ಹಿಂದಿನ ಶ್ರಮವನ್ನು  ಪರಿಚಯಿಸಲಾಯಿತು.

 

“ನವಾನ್ನ ”  ಆಚರಣೆ ಹಾಗು ಭತ್ತ ಬೇಸಾಯದ ಮಹತ್ವ ಬಗ್ಗೆ ಡಾ.ಸುಂದರ ಕೇನಾಜೆ  ಮಾತನಾಡಿ, ಮಕ್ಕಳು ಸ್ವಾಲಂಬಿಗಳಾಗೋದನ್ನು ಕಲಿಸಬೇಕಾಗಿದೆ. ಬರಿಯ ತಿನ್ನುವ ಅಕ್ಕಿಮಾತ್ರ ಅಲ್ಲ, ಅದು ಒಂದು ಬದುಕನ್ನು ಕಟ್ಟಿದಂತಹ, ಒಂದು ಸಂಸ್ಕೃತಿಯನ್ನು ಉಳಿಸಿದಂತಹ ಇಡೀ ತುಳುವರ ಪರಿಕಲ್ಪನೆಗಳಲ್ಲಿ ಅವರನ್ನು ಬೆಳೆಸಿದ ವ್ಯವಸ್ಥೆ. ಬೇಸಾಯದ ಹಿನ್ನಲೆಯಲ್ಲಿ ತುಳು ಸಂಸ್ಕೃತಿ ನಿಂತಿದೆ.  ಸಂಸಾರದವರೆಲ್ಲ ಕೂಡಿ ಮಾಡುವ ನವಾನ್ನದ ಆಚರಣೆ ಬಂಧುತ್ವದ ಕಲ್ಪನೆ ಎಲ್ಲರನ್ನೂ ಒಂದುಗೂಡಿಸುವಂತಹದ್ದು. ಬಂಧುತ್ವ ಎಳೆಗಳು ನಮ್ಮಲ್ಲಿ ಬಹಳ ಮುಖ್ಯವಾಗಿ ಮಾತೃಪ್ರಧಾನವಾದ ವ್ಯವಸ್ಥೆ. ತಾಯಿಯನ್ನು ಮೂಲವಾಗಿಟ್ಟ ವ್ಯವಸ್ಥೆ ತುಳುವರದ್ದು. ಬಂಧುತ್ವದ ಸಂಕೇತವಾದ ಅಕ್ಕಿ ಬಹಳ ಮಹತ್ವದ್ದು. ಅದು ಸಮೃದ್ಧಿಯ ಸಂಕೇತ. ಪ್ರಕೃತಿಯ ಅನುಸಂಧಾನವನ್ನು ಕೂಡಾ ನಾವು ಬೇಸಾಯದಲ್ಲಿ ಕಾಣಬಹುದು ಎಂದರು.

Advertisement

ತಾಲೂಕು ಪಂಚಾಯತ್  ಉಪಾಧ್ಯಕ್ಷರಾದ ಶುಭದಾ ಎಸ್ ರೈ ಶುಭ ಹಾರೈಸಿದರು.

ಗ್ರಾಮಪಂಚಾಯತ್ ಬಾಳಿಲದ ಸದಸ್ಯರಾದ ರವೀಂದ್ರ ರೈ ಟಪಾಲುಕಟ್ಟೆ, ಎಸ್ ಡಿ ಯಂ ಸಿ ಯ ಉಪಾಧ್ಯಕ್ಷರಾದ ಭುವನೇಶ್ವರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಕ್ಕಳು ರೈತ ಗೀತೆ ಹಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸುಬ್ಬಯ್ಯ ವೈ ಬಿ ಸ್ವಾಗತಿಸಿ, ಎಸ್ ಡಿ ಯಂ ಸಿ ಅಧ್ಯಕ್ಷರಾದ ಜಾಹ್ನವಿ ಕಾಂಚೋಡು ವಂದಿಸಿದರು. ಶಿಕ್ಷಕರಾದ ಶಿವಪ್ರಸಾದ್ ಜಿ ಕಾರ್ಯಕ್ರಮ ನಿರೂಪಿಸಿದರು.

Advertisement

Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆಪ್‌ನಲ್ಲಿ ವಿವರ ದಾಖಲಿಸಲು ರೈತರಿಗೆ ಮನವಿ
June 28, 2025
9:16 PM
by: The Rural Mirror ಸುದ್ದಿಜಾಲ
ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ
June 28, 2025
8:29 PM
by: The Rural Mirror ಸುದ್ದಿಜಾಲ
ಕೃಷಿ ಕೂಡಾ ಅತಿ ಹೆಚ್ಚು ಉದ್ಯೋಗ ಒದಗಿಸುವ ಕ್ಷೇತ್ರ
June 28, 2025
8:14 PM
by: The Rural Mirror ಸುದ್ದಿಜಾಲ
ಮುಂಗಾರು ಮಳೆ ಸುದ್ದಿ | ಕೇರಳದಲ್ಲಿ ತೀವ್ರಗೊಳ್ಳಲಿದೆ ಮಳೆ | ದೆಹಲಿಯಲ್ಲೂ ಮಳೆ ಎಚ್ಚರಿಕೆ | ಹಿಮಾಚಲದಲ್ಲಿ 20 ಕ್ಕೂ ಹೆಚ್ಚು ಜೀವಹಾನಿ |
June 28, 2025
7:14 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group