ಶಾಸಕ ಅಂಗಾರ ಅವರಿಂದ ಮಾಡಾವು ವಿದ್ಯುತ್ ಸಬ್ ಸ್ಟೇಶನ್ ಕಾಮಗಾರಿ ವೀಕ್ಷಣೆ

Advertisement

ಮಾಡಾವು :  ಮಾಡಾವು 110 ಕೆವಿ ವಿದ್ಯುತ್ ಸಬ್‍ಸ್ಟೇಷನ್ ಕಾಮಗಾರಿ ಪ್ರಗತಿಯಲ್ಲಿದ್ದು ಸುಳ್ಯ ಶಾಸಕ ಎಸ್ ಅಂಗಾರ  ಶುಕ್ರವಾರ ಭೇಟಿ ನೀಡಿ ಕೆಪಿಟಿಸಿಎಲ್ ಅಧಿಕಾರಿಗಳಿಂದ ಕಾಮಗಾರಿ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡರು.

Advertisement

ಕೆಪಿಟಿಸಿಎಲ್ ಸುಪರಿಟೆಂಡಿಂಗ್ ಎಂಜಿನಿಯರ್ ರವಿಕಾಂತ್ ಕಾಮತ್ ಕಾಮಗಾರಿ ಕುರಿತಂತೆ ಮಾಹಿತಿ ನೀಡಿ ಆಗಸ್ಟ್ ವೇಳೆಗೆ  ಸಬ್‍ಸ್ಟೇಶನ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ನೆಟ್ಲಮುಡ್ನೂರಿನಿಂದ ಕಬಕ ಮೂಲಕ ಮಾಡಾವಿಗೆ 110 ಕೆ ವಿ ವಿದ್ಯುತ್ ಸರಬರಾಜು ಮಾಡುವ ಯೋಜನೆ ಇದಾಗಿದ್ದು ಬೊಳಿಕಳದಲ್ಲಿ ಸುಮಾರು 4 ಎಕರೆ ಪ್ರದೇಶದಲ್ಲಿ ಸಬ್‍ಸ್ಟೇಷನ್ ನಿರ್ಮಾಣದ ಕಾಮಗಾರಿ  ಪ್ರಗತಿಯಲ್ಲಿದೆ.

Advertisement
Advertisement

ಶಾಸಕರು ಬೆಂಗಳೂರಿನಲ್ಲಿ ಕೆ.ಪಿ.ಟಿ.ಸಿ.ಎಲ್.  ಎಂ ಡಿ ಅವರನ್ನು ಕಳೆದ ವಾರ ಭೇಟಿಯಾಗಿದ್ದರು. ಕಾಮಗಾರಿಯನ್ನು ಶೀಘ್ರ ಪೂರೈಸಲು ಅಗತ್ಯವುಳ್ಳ ಎಲ್ಲಾ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಬ್ ಸ್ಟೇಷನ್ ಕಾಮಗಾರಿ ಅಂತಿಮ ಹಂತದಲ್ಲಿದ್ದು ಮಳೆಗಾಲ ಆರಂಭಕ್ಕೆ ಮೊದಲೇ ಹೆಚ್ಚಿನೆಲ್ಲ ಕೆಲಸಗಳು ಮುಗಿದು, ಇದೇ ಆಗಸ್ಟ್ ವೇಳೆಗೆ ಬಿಟ್ಟುಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಲೈನ್ ಕೆಲಸದ ಬಗ್ಗೆ ಇರುವ ಅಡೆತಡೆ ನಿವಾರಿಸಲು ವಿಶೇಷ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಅಂಗಾರ ತಿಳಿಸಿದರು.

Advertisement

ಕಾಮಗಾರಿ ಕುರಿತಂತೆ ಕೆಪಿಟಿಸಿಎಲ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಗಂಗಾಧರ,ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಸತೀಶ್ , ಅಸಿಸ್ಟೆಂಟ್ ಎಂಜಿನಿಯರ್ ಬಸವರಾಜು,ಪ್ರಾಜೆಕ್ಟ್ ಎಂಜಿನಿಯರ್ ವಿಜೆಂದ್ರ ಮಾಹಿತಿ ನೀಡಿದರು.

ಈ ಸಂದರ್ಭ ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಸುಳ್ಯ ಕಿಸಾನ್ ಸಂಘದ ಪ್ರಮುಖರಾದ ಪಿಜಿಎಸ್‍ಎನ್ ಪ್ರಸಾದ್ ,ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ,ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಬಾಳಿಲ ಗ್ರಾ.ಪಂ.ಸದಸ್ಯ ಯು.ರಾಧಾಕೃಷ್ಣ ರಾವ್,ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ ಮೊದಲಾದವರಿದ್ದರು.

Advertisement

 

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಶಾಸಕ ಅಂಗಾರ ಅವರಿಂದ ಮಾಡಾವು ವಿದ್ಯುತ್ ಸಬ್ ಸ್ಟೇಶನ್ ಕಾಮಗಾರಿ ವೀಕ್ಷಣೆ"

Leave a comment

Your email address will not be published.


*