ಶಾಸ್ತ್ರೀಯ ಸಂಗೀತ ಕಾರ್ಯಾಗಾರ ಸಮಾರೋಪ

ಸುಬ್ರಹ್ಮಣ್ಯ :ಯಾಂತ್ರಿಕ ಜೀವನದ ಇಂದಿನ ದಿನಗಳಲ್ಲಿ ಕಲೆಗೆ ಪ್ರೋತ್ಸಾಹ ಅಗತ್ಯ. ಸಂಸ್ಕೃತಿ , ಕಲೆ ಉಳಿಯಲು ದೇವಸ್ಥಾನದ ಕಡೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು
ಸುಬ್ರಹ್ಮಣ್ಯ ಕೆಎಸ್‍ಎಸ್ ಕಾಲೇಜಿನಲ್ಲಿ  ನಡೆದ ಶ್ರೀ ಸರಸ್ವತೀ ಸಂಗೀತ ಶಾಲೆ ಸುಬ್ರಹ್ಮಣ್ಯ ಇದರ ವತಿಯಿಂದ ನಡೆದ ಮೂರು ದಿನಗಳ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಕೆ.ವಿ.ಜಿ ಶಿಕ್ಷಣ ಸಂಸ್ಥೆಯ ತಾಂತ್ರಿಕ ವಿಭಾಗದ ಉಪಪ್ರಾಂಶುಪಾಲ ಪ್ರೊ ಡಾ.ಶಿವಕುಮಾರ್ ಹೊಸೋಳಿಕೆ ಮಾತನಾಡಿ, “ಸಂಗೀತದಲ್ಲಿ ಹಲವು ಪ್ರಕಾರಗಳಿದ್ದರೂ ಕರ್ನಾಟಕ ಶಾಸ್ತ್ರೀಯ ಕಲಿಕೆಯಿಂದ ಬಹಳಷ್ಟು ಮನಸ್ಸಿಗೆ ಸಂತ್ರಪ್ತಿ ಸಿಗುತ್ತದೆ ಎಂದರು.

Advertisement

ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವೇದವ್ಯಾಸ , ವಿದುಷಿ ಕಾಂಚನ ಎಸ್ ಶ್ರುತಿರಂಜನಿ, ಸಂಗೀತ ಶಿಕ್ಷಕಿ ವಿದ್ಯಾಗೋವಿಂದ,  ಕೆಎಸ್‍ಎಸ್ ಕಾಲೇಜು ಪ್ರಾಂಶುಪಾಲ ಪ್ರೋ ಉದಯಕುಮಾರ್ ಭಟ್, ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷ ಗಣೇಶ್ ಪ್ರಸಾದ್, ಸಂಗೀತ ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು, ಸಂಗೀತ ಅಭಿಮಾನಿಗಳು ಉಪಸ್ಥಿತರಿದ್ದರು.
ವಿನೂಪ್ ಮಲ್ಲಾರ ಸ್ವಾಗತಿಸಿದರು. ಶಿಕ್ಷಕ ಕೃಷ್ಣ ಭಟ್ ವಂದಿಸಿದರು. ಹರೀಶ್ ಬೆದ್ರಾಜೆ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಶಾಸ್ತ್ರೀಯ ಸಂಗೀತ ಕಾರ್ಯಾಗಾರ ಸಮಾರೋಪ"

Leave a comment

Your email address will not be published.


*