ಗುತ್ತಿಗಾರು: ಶಿಕ್ಷಕರ ದಿನಾಚರಣೆ ಪ್ರಯುಕ್ತ ನಿವೃತ್ತ ಶಿಕ್ಷಕರಾದ ಕೂಜುಗೋಡು ಕಟ್ಟೆಮನೆ ನಾಗಪ್ಪ ಮಾಸ್ಟರ್ ಹಾಗು ಕೇಪಳಕಜೆ ಪುರುಷೋತ್ತಮ ಮಾಸ್ಟರ್ ದಂಪತಿಗಳಿಗೆ ಗುತ್ತಿಗಾರು ಲಯನ್ಸ್ ಕ್ಲಬ್ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಲಯನ್ಸ್ ಕ್ಲಬ್ ಪದಾಧಿಕಾರಿಗಳು ಇವರ ಮನೆಗೆ ತೆರಳಿ ಶಾಲು, ಹಾರ, ಪೇಟ ತೊಡಿಸಿ ಸನ್ಮಾನಪತ್ರ ನೀಡಿ ಗೌರವಿಸಿದರು.
ಲಯನ್ಸ್ ಅಧ್ಯಕ್ಷ ಮೋಹನ.ಕೆ ಸ್ವಾಗತಿಸಿದರು. ಲಯನ್ಸ್ ಕ್ಲಬ್ ನ ಪದಾಧಿಕಾರಿಗಳಾದ ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿ, ವೆಂಕಪ್ಪ ಕೇನಾಜೆ ಶಿಕ್ಷಕರ ದಿನಾಚರಣೆ ಮಹತ್ವ ಕುರಿತು ಹಾಗೂ ಸನ್ಮಾನಿತರಿಗೆ ಅಭಿನಂದಿಸಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಕೆ. ಬಾಲಕೃಷ್ಣ, ಡಿ.ಯಸ್.ಧರ್ಮಪಾಲ, ಲಿಜೊ ಜೊಸ್, ಕುಶಾಲಪ್ಪ ಮಾಸ್ಟರ್, ಯಂ.ಡಿ.ವಿಜಯಕುಮಾರ್, ಯಂ,ಕೆ. ಮೋಹನ್ ಕುಮಾರ್, ಪಿ.ಸಿ.ಜಯರಾಮ, ಡಿ.ಆರ್.ಉದಯಕುಮಾರ್, ನವೀನ್ ಬಾಳುಗೋಡು, ರಾಜೇಶ್ ಉತ್ರಂಬೆ, ನಾಗೇಶ್ ಪಾರೆಪ್ಪಾಡಿ, ಶಿವರಾಮ ಚಿಲ್ತಡ್ಕ, ಲಯನೆಸ್ ಕ್ಲಬ್ ನ ಚೆನ್ನಮ್ಮ ಮೋಹನ್ ಭಾಗವಹಿಸಿದ್ದರು. ಕೆ.ವಿ. ಸುಧಿರ್ ದಂಪತಿಗಳು, ಶಿಕ್ಷಕಿ ಶೇಷಮ್ಮ ಕೆ, ನಿವೃತ್ತ ಯೋಧ ಜತ್ತಪ್ಪ ಗೌಡ ಓಟೆಡ್ಕ, ಚಂದ್ರಕಾಂತ ಕಲ್ಲುರಾಯ, ಸತೀಶ್ ಕೂಜುಗೋಡು ಉಪಸ್ಥಿತರಿದ್ದರು. ಎಂ. ಕೆ. ಮೋಹನ ಕುಮಾರ್ ವಂದಿಸಿದರು.